1806 ಪಾಸಿಟಿವ್ ಕೇಸ್ – 42 ಸಾವು, ಪಾಸಿಟಿವಿಟಿ ರೇಟ್ 1.18ಕ್ಕೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು 1806 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 42 ಮಂದಿ ಸಾವನ್ನಪ್ಪಿದ್ದು, 2,748 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ರೇಟ್ 1.18ಕ್ಕೆ ಇಳಿಕೆ ಕಂಡಿದೆ.

ರಾಜ್ಯದಲ್ಲಿ ಒಟ್ಟು 31,399 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 28,80,370 ಮಂದಿಗೆ ಕೊರೊನಾ ಬಂದಿದೆ. 28,12,869 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.2.32ರಷ್ಟಿದೆ.

ಇಂದು ರಾಜ್ಯದಲ್ಲಿ ಒಟ್ಟು 1,52,908 ಸ್ಯಾಂಪಲ್ (ಆರ್‍ಟಿ ಪಿಸಿಆರ್ 30,150 + 1,22,758 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 411 ಮಂದಿಗೆ ಕೊರೊನಾ ಸೋಂಕು ತಗುಲಿದೆ. 549 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. 10 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್

ದಕ್ಷಿಣ ಕನ್ನಡ 225, ಮೈಸೂರು 174, ಹಾಸನ 138, ಶಿವಮೊಗ್ಗ 110, ಉಡುಪಿಯಲ್ಲಿ 105 ಕೇಸ್ ದಾಖಲಾಗುವ ಮೂಲಕ ನೂರಕ್ಕೂ ಹೆಚ್ಚು ಕೇಸ್ ಕಂಡು ಬಂದಿದೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ 2, ಬೀದರ್ 3 ಮತ್ತು ಕಲಬುರಗಿಯಲ್ಲಿ 4 ಪ್ರಕರಣ ದಾಖಲಾಗುವ ಮೂಲಕ ಕಡಿಮೆ ಪ್ರಕರಣ ದಾಖಲಾಗಿದೆ.

The post 1806 ಪಾಸಿಟಿವ್ ಕೇಸ್ – 42 ಸಾವು, ಪಾಸಿಟಿವಿಟಿ ರೇಟ್ 1.18ಕ್ಕೆ ಇಳಿಕೆ appeared first on Public TV.

Source: publictv.in

Source link