
ಸನಾ ಮಾಂಜ್ರೇಕರ್
ಜ್ವರದಿಂದ ಬಳಲುತ್ತಿದ್ದ ನವ ವಿವಾಹಿತೆ ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಉತ್ತರ ಕನ್ನಡ: ಜ್ವರ (Fever)ದಿಂದ ಬಳಲುತ್ತಿದ್ದ ನವ ವಿವಾಹಿತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಸಾವ (Death)ನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಸನಾ ಮಾಂಜ್ರೇಕರ್(24) ಮೃತಪಟ್ಟ ನವ ವಿವಾಹಿತೆ. ಸಾವಿನಿಂದ ಆಕ್ರೋಶಗೊಂಡ ಮೃತೆಯ ಸಂಬಂಧಿಕರು ಕಾರವಾರ ನಗರ ಠಾಣೆ ಎದುರು ಪ್ರತಿಭಟನೆ (Protest) ನಡೆಸಿದ್ದು, ಸನಾ ಸಾವಿಗೆ ನ್ಯಾಯಕೊಡಿಸುವಂತೆ ಆಗ್ರಹಿಸುತ್ತಿದ್ದಾರೆ.
ಸ್ವಪ್ನಿಲ್ ಎಂಬವರ ಜೊತೆ 19 ದಿನಗಳ ಹಿಂದಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸನಾ ಮಾಂಜ್ರೇಕರ್ ಅವರಿಗೆ 8 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ಗುಣಮುಖರಾಗಿದ್ದರು. ಆದರೆ, ನಿನ್ನೆ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕಾರವಾರ ನಗರದ ಕಾಜುಭಾಗ್ನ ಸಾವಂತ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಸನಾ ಅವರಿಗೆ ಆಸ್ಪತ್ರೆಯ ಸಿಬ್ಬಂದಿ ನಾಲ್ಕು ಇಂಜೆಕ್ಷನ್ಗಳನ್ನು ನೀಡಿದ್ದು, ಇದರಿಂದ ಆಕೆ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಸಿಬ್ಬಂದಿ ಆಕೆಯನ್ನು ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸನಾ ಮಾಂಜ್ರೇಕರ್ ಸಾವನ್ನಪ್ಪಿದ್ದಾರೆ. ಅಲ್ಲದೆ ಸನಾ ಅವರ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರವಾರ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಕುಟುಂಬಸ್ಥರು ಸನಾ ಮಾಂಜ್ರೇಕರ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.