ಬೆಂಗಳೂರು: ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ನಡೆದ ಪಿಐಎಲ್ ಅರ್ಜಿಗಳ ವಿಚಾರಣೆ ವೇಳೆ ಸಿಜೆ ಎ.ಎಸ್ ಓಕ & ನ್ಯಾ. ಅರವಿಂದ ಕುಮಾರ್ ನೇತೃತ್ವದ ಪೀಠ ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯತೆ ಸ್ಥಿತಿಗತಿ ಹೇಗಿದೆ? ಎಂದು ಕೇಳಿತು.
ಕೋರ್ಟ್​ನ ವಾದ-ಪ್ರತಿವಾದ ಹೀಗಿತ್ತು..

ಕೋರ್ಟ್: ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯತೆ ಸ್ಥಿತಿಗತಿ ಹೇಗಿದೆ?
ರಾಜ್ಯ ಸರ್ಕಾರ: ಒಟ್ಟು 8,11,600 ಡೋಸ್ ಲಸಿಕೆ ಲಭ್ಯವಿದೆ. ಅದರಲ್ಲಿ ಕೋವ್ಯಾಕ್ಸಿನ್ 97, 440 ಡೋಸ್ ಇದೆ. ಕೋವಿಶೀಲ್ಡ್ ಎರಡನೇ ಡೋಸ್ ಪಡೆಯಲು ಸಮಯ ವಿಸ್ತರಿಸಲಾಗಿದೆ.
ಕೋರ್ಟ್: ನಾವು ಕೋವ್ಯಾಕ್ಸಿನ್ ಲಸಿಕೆಯ ಬಗ್ಗೆ ಮಾತನಾಡುತ್ತಿದ್ದೇವೆ.. ಕೋವ್ಯಾಕ್ಸಿನ್ ಎರಡನೇ ಡೋಸ್ 3,55,000 ಮಂದಿಗೆ ಸಿಕ್ಕಿಲ್ಲ.. ಇದನ್ನು ನೀವು ಎಲ್ಲಿಂದ ತರುತ್ತೀರಿ? ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿತು.
ರಾಜ್ಯ ಸರ್ಕಾರ: ಕೋವ್ಯಾಕ್ಸಿನ್ ಮೊದಲ ಡೋಸ್ 4,55,084 ಮಂದಿಗೆ ನೀಡಲಾಗಿದೆ. ನಮ್ಮ ಬಳಿ 97,440 ಡೋಸ್​ಗಳಿವೆ. ಒಟ್ಟಾರೆ ನಮ್ಮ ಬಳಿ 8,11,600 ಲಸಿಕೆ ಇದೆ.
ಕೋರ್ಟ್: 1,94,000 ಮಂದಿಗೆ ಎರಡನೇ ಡೋಸ್ ಕೋವ್ಯಾಕ್ಸಿನ್ ಸಿಗದಿದ್ದರೆ.! ಅವರು ಮತ್ತೊಮ್ಮೆ ತೆಗೆದುಕೊಳ್ಳಬೇಕು ಎಂಬುದು ಸರಿಯಲ್ಲ ಅಲ್ಲವೇ? ಮತ್ತೆ ಅವರು ಏನು ಮಾಡಬೇಕು.?
ಕೇಂದ್ರ ಸರ್ಕಾರ: ಕರ್ನಾಟಕ ವಿಚಾರದಲ್ಲಿ ನಾವು ಪರಿಹಾರ ಹುಡುಕಬೇಕಿದೆ..
ಕೋರ್ಟ್: ಈಗ ನೀಡಿರುವ 7.1 ಲಕ್ಷದಲ್ಲಿ 2 ಲಕ್ಷ ಜನ್ರಿಗೆ ಸೆಕೆಂಡ್ ಡೋಸ್ ನೀಡಬೇಕಿದೆ.. ನೀವು ಇದನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ? ಇದು ವಿವೇಕಯುತ ನೀತಿಯೇ.? 60 ವರ್ಷ ಮೇಲ್ಪಟ್ಟವರಿಗೆ ನೀವು ಆದ್ಯತೆ ನೀಡುತ್ತೀರಾ?

The post 1,94,000 ಮಂದಿಗೆ ಎರಡನೇ ಡೋಸ್ ಕೋವ್ಯಾಕ್ಸಿನ್ ಸಿಗದಿದ್ದರೆ ಏನು ಮಾಡಬೇಕು..?- ಹೈಕೋರ್ಟ್ appeared first on News First Kannada.

Source: newsfirstlive.com

Source link