1963ರಲ್ಲೇ ಬಂದಿತ್ತು ಒಮಿಕ್ರಾನ್​ ಹೆಸರಿನ ಸಿನಿಮಾ; ಚಿತ್ರದ ಕಥೆ ಕೇಳಿದ್ರೆ ಅಚ್ಚರಿ ಪಡ್ತೀರಾ | The omicron variant movie Released In 1963 with Italian Language here is the story line


1963ರಲ್ಲೇ ಬಂದಿತ್ತು ಒಮಿಕ್ರಾನ್​ ಹೆಸರಿನ ಸಿನಿಮಾ; ಚಿತ್ರದ ಕಥೆ ಕೇಳಿದ್ರೆ ಅಚ್ಚರಿ ಪಡ್ತೀರಾ

ಕೊರೊನಾ ವೈರಸ್​ ಇಡೀ ಜಗತ್ತನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಕೊವಿಡ್​ನ ಹೊಸ ರೂಪಾಂತರಿಗಳು ಪತ್ತೆ ಆಗುತ್ತಿದ್ದು, ಆತಂಕ ಹೆಚ್ಚುತ್ತಿದೆ. ಹೊಸ ರೂಪಾಂತರಿಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ಈ ವೈರಸ್​ ಬಗೆಗಿನ ಅಧ್ಯಯನ ಮತ್ತಷ್ಟು ಜಟಿಲವಾಗುತ್ತಿದೆ. ಸದ್ಯ ಎಲ್ಲೆಲ್ಲೂ ಒಮಿಕ್ರಾನ್​ ರೂಪಾಂತರಿಯದ್ದೇ ಸುದ್ದಿ. ಈ ಕೊರೊನಾ ರೂಪಾಂತರಿ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ. ಈ ಹೆಸರಿನಲ್ಲಿ ಸಿನಿಮಾ ಕೂಡ ಬಂದಿತ್ತು ಎಂದರೆ ನೀವು ನಂಬಲೇ ಬೇಕು. ಅದೂ 1963ರಲ್ಲಿ! ಈ ಸಿನಿಮಾದ ಪೋಸ್ಟರ್​ ಸಾಕಷ್ಟು ವೈರಲ್​ ಆಗುತ್ತಿದೆ.

2021ರಲ್ಲಿ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಿಯ ಹೆಸರು ಒಮಿಕ್ರಾನ್. ಅದಕ್ಕೂ ಮೊದಲು ಹೀಗೊಂದು ರೂಪಾಂತರಿ ಇದೆ ಎನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಇಡೀ ವಿಶ್ವ ಈ ಬಗ್ಗೆ ಮಾತನಾಡುತ್ತಿದೆ. ಹೀಗಿರುವಾಗ ಈ ರೂಪಾಂತರಿ ಬಗ್ಗೆ 1963ರಲ್ಲಿ ಸಿನಿಮಾ ಬರೋಕೆ ಹೇಗೆ ಸಾಧ್ಯ? ಅಂದೇ ಈ ಬಗ್ಗೆ ಊಹೇ ಮಾಡಲಾಗಿತ್ತೇ? ಹೀಗೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಅದಕ್ಕೂ ಇಲ್ಲಿ ಉತ್ತರವಿದೆ.

ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್​ ಮಹಿಂದ್ರಾ, ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ‘ದಿ ಒಮಿಕ್ರಾನ್​ ವೇರಿಯಂಟ್​’ ಅನ್ನೋದು ಸಿನಿಮಾದ ಹೆಸರು. 1963ರಲ್ಲೇ ಈ ಸಿನಿಮಾ ಇಟಲಿ ಭಾಷೆಯಲ್ಲಿ ತೆರೆಗೆ  ಬಂದಿತ್ತು ಎನ್ನುವ ವಿಚಾರವನ್ನು ಅವರು ರಿವೀಲ್​ ಮಾಡಿದ್ದಾರೆ.

ಈ ಚಿತ್ರ ಅಸಲಿಗೆ ವೈರಸ್​ ಬಗ್ಗೆ ಇಲ್ಲ. ಈ ಸಿನಿಮಾ ಏಲಿಯನ್​ಗಳ ಬಗ್ಗೆ ಇದೆ. ಮೃತಪಟ್ಟ ಕಾರ್ಖಾನೆ ಸಿಬ್ಬಂದಿಗಳನ್ನು ಅನ್ಯಜೀವಿ ಗ್ರಹಗಳು ತೆಗೆದುಕೊಂಡು ಹೋಗುತ್ತವೆ. ಇವು ಮೃತಪಟ್ಟವರಿಗೆ ಜೀವ ತರಿಸುತ್ತವೆ. ಈ ಮೂಲಕ ಭೂಮಿ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತವೆ. ಇದು ಸಿನಿಮಾದ ಒಂದೆಳೆ. ಸದ್ಯ ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

TV9 Kannada


Leave a Reply

Your email address will not be published. Required fields are marked *