1970ರಲ್ಲಿ ಪೂರ್ವ ಪಾಕಿಸ್ತಾನದಿಂದ ವಲಸೆ ಬಂದ 65 ಹಿಂದೂ ಕುಟುಂಬಗಳಿಗೆ ವಸತಿ, ಕೃಷಿಭೂಮಿ ನೀಡಿದ ಯೋಗಿ ಆದಿತ್ಯನಾಥ ಸರ್ಕಾರ | UP Government allotted residential and agricultural plot to 65 Hindu families who migrated from East Pakistan


1970ರಲ್ಲಿ ಪೂರ್ವ ಪಾಕಿಸ್ತಾನದಿಂದ ವಲಸೆ ಬಂದ 65 ಹಿಂದೂ ಕುಟುಂಬಗಳಿಗೆ ವಸತಿ, ಕೃಷಿಭೂಮಿ ನೀಡಿದ ಯೋಗಿ ಆದಿತ್ಯನಾಥ ಸರ್ಕಾರ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಲಖನೌ: ಉತ್ತರ ಪ್ರದೇಶ ಸರ್ಕಾರವು ಮಂಗಳವಾರ 1970 ರಲ್ಲಿ ಪೂರ್ವ ಪಾಕಿಸ್ತಾನದಿಂದ ವಲಸೆ ಬಂದ 65 ಹಿಂದೂ ಕುಟುಂಬಗಳಿಗೆ ವಸತಿ, ಕೃಷಿ ಭೂಮಿ ಮತ್ತು ಮನೆ ಮಂಜೂರು ಮಾಡಿದೆ. ಸಿಎಂ ವಸತಿ ಯೋಜನೆಯಡಿ ಈ ಭೂಮಿ ನೀಡಿದ್ದು ಈ  ಬಗ್ಗೆ  ವಿವರಿಸಿದ ಅಧಿಕಾರಿ.  ಈ ನಿರಾಶ್ರಿತರು ಮೀರತ್‌ನ ಮದನ್ ಕಾಟನ್ ಮಿಲ್‌ನಲ್ಲಿ( Madan Cotton Mills) ಕೆಲಸಕ್ಕಿದ್ದರು. 1984 ರಲ್ಲಿ ಗಿರಣಿಯನ್ನು ಮುಚ್ಚಿದ 300 ಕ್ಕೂ ಹೆಚ್ಚು ನಿರಾಶ್ರಿತರು ನಗರವನ್ನು ತೊರೆದರು ಮತ್ತು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದರು. ಇಲ್ಲಿ ಉಳಿದವರಿಗೆ ಈಗ ಯೋಗಿ ಸರ್ಕಾರವು ತಮ್ಮ ಹೊಸ ಕ್ರಮದ ಮೂಲಕ ಸಬಲೀಕರಣಗೊಳಿಸಿದೆ ಎಂದು ಹೇಳಿದ್ದಾರೆ.  ಎರಡು ವರ್ಷಗಳ ಹಿಂದೆ, ಸಿಎಂ ಯೋಗಿ ಆದಿತ್ಯನಾಥ (Yogi Adityanath) ಅವರ ಸರ್ಕಾರವು ಪಾಕಿಸ್ತಾನ (Pakistan) ಮತ್ತು ಬಾಂಗ್ಲಾದೇಶದಿಂದ ಹೊರಹಾಕಲ್ಪಟ್ಟ ಮತ್ತು ಉತ್ತರ ಪ್ರದೇಶದಲ್ಲಿ ವಾಸಿಸುವವರ ಪ್ರಾಥಮಿಕ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿತು. 2020ರವರೆಗೆ ಪಿಲಿಭಿತ್ ಜಿಲ್ಲೆಯಲ್ಲಿ 37,000 ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನಿರಾಶ್ರಿತರನ್ನು ಗುರುತಿಸಲಾಗಿದೆ. ಪೌರತ್ವ ಕಾಯ್ದೆಯಡಿ ಅವರಿಗೆ ಭಾರತೀಯ ಪೌರತ್ವ ನೀಡಲು ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. 1962 ಮತ್ತು 1964 ರ ಅವಧಿಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ನಿರಾಶ್ರಿತರಿಗೆ ಪಿಲಿಭಿತ್‌ನ ರಾಮನಗರ ಪ್ರದೇಶದಲ್ಲಿ ಪುನರ್ವಸತಿ ನೀಡಲಾಯಿತು ಮತ್ತು ಅವರಿಗೆ ಶಾಶ್ವತ ಪೌರತ್ವವನ್ನು ನೀಡುವುದಾಗಿ ಭರವಸೆ ನೀಡಲಾಯಿತು ಎಂದು ವರದಿಗಳು ತಿಳಿಸಿವೆ. ಆಮೇಲೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಹಲವಾರು ಸಂದರ್ಭಗಳಲ್ಲಿ ಪ್ರಾರಂಭಿಸಲಾಯಿತು ಆದರೆ ಅವರಲ್ಲಿ ಯಾರಿಗೂ ಅದು ಸಿಗಲಿಲ್ಲ. ಪೌರತ್ವ ತಿದ್ದುಪಡಿ ಕಾಯಿದೆ ಅಂಗೀಕಾರವಾದಾಗಿನಿಂದ ಅವರು ಭಾರತ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯುವ ಭರವಸೆಯಲ್ಲಿದ್ದಾರೆ.

ಇದಕ್ಕೂ ಮೊದಲು ಜನವರಿಯಲ್ಲಿ ಯುಪಿ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರಕ್ಕೇರುವ ಮೊದಲು ಯೋಗಿ ಆದಿತ್ಯನಾಥ ಅವರು ತಮ್ಮ ಸರ್ಕಾರವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹೊರಹಾಕಲ್ಪಟ್ಟ ಹಿಂದೂಗಳಿಗೆ ರಾಜ್ಯ ಸರ್ಕಾರವು ಅತಿಕ್ರಮಣಕಾರರಿಂದ ಮುಕ್ತಗೊಳಿಸಿದ ಭೂಮಿಯಲ್ಲಿ ವಸತಿ ಕಲ್ಪಿಸಿದೆ ಎಂದು ಘೋಷಿಸಿದ್ದರು.

ಲಖನೌದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ  “ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹೊರಹಾಕಲ್ಪಟ್ಟ ನಂತರ ದಶಕಗಳಿಂದ ಮೀರತ್‌ನಲ್ಲಿ ವಾಸಿಸುತ್ತಿದ್ದ ಹಿಂದೂಗಳಿಗೆ ಸ್ವಂತ ಮನೆ ನಿರ್ಮಿಸಲು ಅಥವಾ ಭೂಮಿಯನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಅಂತಹ 63 ಬಂಗಾಳಿ ಹಿಂದೂ ಕುಟುಂಬಗಳಿಗೆ ಕಾನ್ಪುರ ದೇಹತ್‌ನಲ್ಲಿ ಪ್ರತಿ ಕುಟುಂಬಕ್ಕೆ ವಸತಿಗಾಗಿ ಎರಡು ಎಕರೆ ಭೂಮಿ ಮತ್ತು 200 ಚದರ ಗಜಗಳನ್ನು ನೀಡಿದ್ದೇವೆ. ಈ ಭೂಮಿಯನ್ನು ‘ಭೂ ಮಾಫಿಯಾ’ (ಭೂಗಳ್ಳರಿಂದ) ಮುಕ್ತಗೊಳಿಸಲಾಗಿದೆ.
‘ಮುಖ್ಯಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ 63 ಕುಟುಂಬಗಳಿಗೆ ತಲಾ ₹ 1.20 ಲಕ್ಷ ನೀಡಲಾಗಿದೆ ಎಂದು ಯೋಗಿ ಆದಿತ್ಯನಾಥ ಹೇಳಿದರು.

“ಅತಿಕ್ರಮಣಕಾರರಿಂದ” ಮುಕ್ತವಾದ ಎಲ್ಲಾ ಭೂಮಿಯನ್ನು ‘ಭೂ ಬ್ಯಾಂಕ್’ ಅಡಿಯಲ್ಲಿ ತರಲಾಗಿದೆ ಮತ್ತು ಈ ತುಂಡು ಭೂಮಿಯನ್ನು ಶಾಲೆಗಳು, ಕೈಗಾರಿಕೆಗಳು ಮತ್ತು ಇತರ ವ್ಯವಹಾರಗಳನ್ನು ಸ್ಥಾಪಿಸಲು ಬಳಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಈ ವಶಪಡಿಸಿಕೊಂಡ ಭೂಮಿಯಲ್ಲಿ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ನ ಅನೇಕ ಸೌಲಭ್ಯಗಳನ್ನು ಸಹ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿನ ಹಲವಾರು ಅಕ್ರಮ ಒತ್ತುವರಿಯನ್ನು ನೆಲಸಮಗೊಳಿಸಿದ ನಂತರ ಸಿಎಂ ಯೋಗಿ ಆದಿತ್ಯನಾಥ ಅವರು ‘ಬುಲ್ಡೋಜರ್ ಬಾಬಾ’ ಎಂಬ ಹೆಸರು ಗಳಿಸಿದ್ದು ಈ ಕ್ರಮವನ್ನು ಮುಖ್ಯಮಂತ್ರಿಯವರ ಆಡಳಿತದ ಮಾದರಿಯೊಂದಿಗೆ ಜೋಡಿಸಲಾಗಿದೆ. ಉತ್ತರ ಪ್ರದೇಶದಲ್ಲಿ “ಬುಲ್ಡೋಜ್ಡ್ ಬಾಬಾ” ಪುನರಾಗಮನದಿಂದ 50 ಕ್ಕೂ ಹೆಚ್ಚು ಅಪರಾಧಿಗಳು ಶರಣಾಗಿದ್ದಾರೆ ಎಂದು ಪಿಟಿಐ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಹೇಳಿರುವುದಾಗಿ ವರದಿ ಮಾಡಿದೆ. ಎನ್‌ಕೌಂಟರ್‌ಗಳಲ್ಲಿ ಇಬ್ಬರು ಅಪರಾಧಿಗಳು ಕೊಲ್ಲಲ್ಪಟ್ಟರು ಮತ್ತು ಈ ಅವಧಿಯಲ್ಲಿ ಅನೇಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ನಾನು ಶರಣಾಗುತ್ತಿದ್ದೇನೆ, ದಯವಿಟ್ಟು ನನ್ನನ್ನು ಶೂಟ್ ಮಾಡಬೇಡಿ” ಎಂಬ ಸಂದೇಶಗಳಿರುವ ಫಲಕಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡು ತಲೆಮರೆಸಿಕೊಂಡಿರುವ ಅನೇಕ ಕ್ರಿಮಿನಲ್‌ಗಳು ಪೊಲೀಸ್ ಠಾಣೆಗೆ ಹಿಂತಿರುಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದು ವರದಿಯಾಗಿದೆ.

TV9 Kannada


Leave a Reply

Your email address will not be published. Required fields are marked *