1986 ಜೂನ್ 19 ನನ್ನ ಜೀವನದ ಬಹುಮುಖ್ಯ ದಿನ- ನಟಿ ಸುಧಾರಾಣಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸುಧಾರಾಣಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಆನಂದ್ ಚಿತ್ರ ತೆರೆಕಂಡು 35 ವರ್ಷ ಆಗಿರುವ ಅಪರೂಪದ ಫೋಟೋ ಹಂಚಿಕೊಂಡ ಸುಧಾರಾಣಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

1986 ಜೂ£19 ನನ್ನ ಜೀವನದ ಬಹುಮುಖ್ಯ ದಿನವಾಗಿದೆ. ಆನಂದ್ ಸಿನಿಮಾ ತೆರೆಕಂಡು 35 ವರ್ಷ ಕಳೆಯಿತು. ಇದು ಸಾಧ್ಯವಾಗಲು ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ಮೊದಲ ದಿನದ ಶೂಟಿಂಗ್‍ನಿಂದ 100 ದಿನಗಳ ಸಮಾರಂಭದವರೆಗಿನ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಇನ್‍ಸ್ಟಗ್ರಾಮ್‍ನಲ್ಲಿ ಸುಧಾರಾಣಿ ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಮೆಹಂದಿ ಹಾಕಿ ಮದುವೆಗೆ ಸಿದ್ಧವಾದ ಸಾಯಿ ಪಲ್ಲವಿ

 

View this post on Instagram

 

A post shared by Sudharani (@sudharanigovardhan)

ವಿಶೇಷ ಎಂದರೆ ಸುಧಾರಾಣಿ ಅವರ ಮೊದಲ ಹೆಸರು ಜಯಶ್ರೀ ಆಗಿತ್ತು. ಪತ್ರಿಕೆಗಳಲ್ಲಿ ಬರುತ್ತಿದ್ದ ಕೆಲವು ಲೇಖನಗಳಲ್ಲೂ ಅವರ ಹೆಸರನ್ನು ಜಯಶ್ರೀ ಎಂದೇ ಬರೆಯಲಾಗುತ್ತಿತ್ತು. ಆನಂದ್ ಸಿನಿಮಾದಿಂದಾಗಿ ಅವರು ಸುಧಾರಾಣಿಯಾಗಿ ಬದಲಾದರು. ಚಿತ್ರಕ್ಕಾಗಿ ಶಿವರಾಜ್‍ಕುಮಾರ್ ಜೊತೆ ಮಾಡಿಸಿದ್ದ ಫೋಟೋಶೂಟ್, ಶೂಟಿಂಗ್ ಸಮಯದ ಫೋಟೋ, ಶತದಿನೋತ್ಸವ ಸಂಭ್ರಮದ ಪೋಸ್ಟರ್, ಆಹ್ವಾನ ಪತ್ರಿಕೆ ಹಾಗೂ ಸೋಲೋ ಫೋಟೋಶೂಟ್ ಮುಂತಾದ್ದನ್ನು ಸುಧಾರಾಣಿ ಈಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Sudharani (@sudharanigovardhan)

ಕನ್ನಡ ಚಿತ್ರರಂಗದಲ್ಲಿ ಶಿವರಾಜ್‍ಕುಮಾರ್ ಮತ್ತು ಸುಧಾರಾಣಿ ಅವರದ್ದು ಹಿಟ್ ಜೋಡಿಯಾಗಿತ್ತು. ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ಈ ಇಬ್ಬರು ಕಲಾವಿದರು ಬಳಿಕ ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ಸಾಧನೆಯನ್ನು ಮಾಡಿದರು. ನಾಯಕ, ನಾಯಕಿಯಾಗಿ ಇಬ್ಬರೂ ನಟಿಸಿದ ಮೊದಲ ಸಿನಿಮಾ ಆನಂದ್ ಆಗಿದೆ. ಆನಂದ್ ಸಿನಿಮಾ ಮೂಲಕವಾಗಿಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶಿವರಾಜ್‍ಕುಮಾರ್ ಅವರು ಸಿನಿ ಪಯಣಕ್ಕೆ 35 ವರ್ಷ ಪೂರೈಸಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಕೋರುತ್ತಿದ್ದಾರೆ. ಆನಂದ್ ಚಿತ್ರಕ್ಕೆ ಸಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಪಕಿ ಆಗಿದ್ದರು. ರಾಜೇಶ್, ತಾರಾ, ಜಯಂತಿ, ತೂಗುದೀಪ ಶ್ರೀನಿವಾಸ್ ಮುಂತಾದವರು ಸಹ ನಟಿಸಿದ್ದರು.

The post 1986 ಜೂನ್ 19 ನನ್ನ ಜೀವನದ ಬಹುಮುಖ್ಯ ದಿನ- ನಟಿ ಸುಧಾರಾಣಿ appeared first on Public TV.

Source: publictv.in

Source link