1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ | Aishwarya Rai First Salary Aishwarya Rai Remuneration


1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

ಐಶ್ವರ್ಯಾ ರೈ

 ಐಶ್ವರ್ಯಾ ರೈ ಅವರಿಗೆ 1994ರಲ್ಲಿ ವಿಶ್ವ ಸುಂದರಿ ಪಟ್ಟ ಸಿಕ್ಕಿತು. ಅದಕ್ಕೂ ಮೊದಲು ಅವರು ಸಂಪೂರ್ಣವಾಗಿ ಮಾಡೆಲಿಂಗ್​ನಲ್ಲಿ ತೊಡಗಿಕೊಂಡಿದ್ದರು.

ಐಶ್ವರ್ಯಾ ರೈ ಅವರು (Aishwarya Rai) ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇಟ್ಟುಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಅವರನ್ನು ವರಿಸಿದ ನಂತರ ಐಶ್ವರ್ಯಾ ಕುಟುಂಬ ಕೆಲಸಗಳಲ್ಲಿ ಬ್ಯುಸಿ ಆದರು. ಸಿನಿಮಾದಲ್ಲಿ ನಟಿಸುತ್ತೇನೆ ಎಂದರೆ  ಈಗಲೂ ಅವರಿಗೆ ಕೋಟಿಕೋಟಿ ಸಂಭಾವನೆ ನೀಡೋಕೆ ನಿರ್ಮಾಪಕರು ರೆಡಿ ಇದ್ದಾರೆ. ಆದರೆ, ಅವರು ಪಾತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಹೀಗಾಗಿ ದುಡ್ಡಿಗಾಗಿ ಅವರು ಬರುವ ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆರಂಭದಲ್ಲಿ ಐಶ್ವರ್ಯಾ ರೈ ತುಂಬಾನೇ ಕಷ್ಟಪಟ್ಟಿದ್ದರು. ಅವರು ಕಡಿಮೆ ಸಂಭಾವನೆ ಪಡೆಯುತ್ತಿದ್ದರು. 1992ರಲ್ಲಿ ಐಶ್ವರ್ಯಾ ಅವರು ಪಡೆದ ಸಂಭಾವನೆಯ (Aishwarya Rai Remuneration) ವಿಚಾರ ಈಗ ಹೊರಬಿದ್ದಿದೆ. ಈ ಫೋಟೋಗಳು ಈಗ ವೈರಲ್ ಆಗುತ್ತಿದೆ.

ಐಶ್ವರ್ಯಾ ರೈ ಅವರಿಗೆ 1994ರಲ್ಲಿ ವಿಶ್ವ ಸುಂದರಿ ಪಟ್ಟ ಸಿಕ್ಕಿತು. ಅದಕ್ಕೂ ಮೊದಲು ಅವರು ಸಂಪೂರ್ಣವಾಗಿ ಮಾಡೆಲಿಂಗ್​ನಲ್ಲಿ ತೊಡಗಿಕೊಂಡಿದ್ದರು. 1992ರಲ್ಲಿ ಐಶ್ವರ್ಯಾ ರೈ ಅವರು ಫೋಟೋಶೂಟ್ ಒಂದರಲ್ಲಿ ಪಾಲ್ಗೊಂಡಿದ್ದರು. ಇದಕ್ಕಾಗಿ ಅವರು ಪಡೆದ ಹಣ ಕೇವಲ 1500 ರೂಪಾಯಿ ಆಗಿತ್ತು. ಅವರು ಪಡೆದ ಚೆಕ್​ನ ಫೋಟೋ ಈಗ ವೈರಲ್ ಆಗುತ್ತಿದೆ.

1992ರ ಸಂದರ್ಭದಲ್ಲಿ ಐಶ್ವರ್ಯಾ ಅವರ ವಯಸ್ಸು 18 ವರ್ಷ ಆಗಿತ್ತು. ಮ್ಯಾಗಜಿನ್ ಕೆಟಲಾಗ್​ಗೆ ನಡೆದ ಈ ಶೂಟ್​ನಲ್ಲಿ ಅವರು ಪಾಲ್ಗೊಂಡಿದ್ದರು. ಈ ಚೆಕ್​ನ ಫೋಟೋವನ್ನು ವಿಮಲ್ ಉಪಾಧ್ಯಾಯ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. ಐಶ್ವರ್ಯಾ ಅವರು ವಿಶ್ವ ಸುಂದರಿ ಪಟ್ಟ ಗೆದ್ದ ಕೆಲ ವರ್ಷಗಳ ನಂತರ ಅಂದರೆ 1997ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳು ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು ನಂತರ ಹಿಂದಿಯಲ್ಲಿ ಬ್ಯುಸಿ ಆದರು.

TV9 Kannada


Leave a Reply

Your email address will not be published. Required fields are marked *