ಬೆಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ 2 ಪ್ರಶ್ನೆ ಪತ್ರಿಕೆಗಳಿಗೆ ಆನ್​ಲೈನ್ ಪರೀಕ್ಷೆ ನಡೆಸಲು ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ. ಈ ಮೊದಲು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪಾಸ್ ಎಂದು ಹೇಳುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದ ಸಚಿವರು ಇದೀಗ ಪ್ರಮೋಟ್ ಮಾಡಲು ಆನ್​ಲೈನ್ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದಾರೆ. ಈಗಾಗಲೇ 2 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪಿಯು ಬೋರ್ಡ್ ರೂಪಿಸಿದ್ದು ವೆಬ್​ಸೈಟ್​ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಿದೆ.

ಆನ್ ಲೈನ್ ಪರೀಕ್ಷೆ ಹೇಗೆ ನಡೆಯುತ್ತೆ..?

 1. ಇಲಾಖೆ ವೆಬ್ ಸೈಟ್ ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನ ವಿದ್ಯಾರ್ಥಿಗಳೇ ಡೌನ್ ಲೋಡ್ ಮಾಡಿಕೊಳ್ಳಬೇಕು.
 2. ಪ್ರಶ್ನೆಗಳಿಗೆ ಉತ್ತರ ಬರೆದು ವಾಟ್ಸ್ ಆ್ಯಪ್​, ಇ-ಮೇಲ್, ಅಂಚೆ ಮೂಲಕ ರವಾನಿಸಬೇಕು.
 3. ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಉತ್ತರ ಪತ್ರಿಕೆಯನ್ನ ಕಳುಹಿಸಬೇಕು.
 4. ಉಪನ್ಯಾಸಕರು ಮೌಲ್ಯಮಾಪನ ಮಾಡ್ಬೇಕು.
 5. ಮೌಲ್ಯಮಾಪನದ ಬಳಿಕ ಉಪನ್ಯಾಸಕರು SATs (ಸ್ಟೂಡೆಂಟ್ಸ್ ಅಚಿವ್ ಮೆಂಟ್ ಟ್ರಾಕಿಂಗ್ ಸಿಸ್ಟಂ) ಮೂಲಕ ಫಲಿತಾಂಶ ಅಪ್ಲೋಡ್ ಮಾಡಬೇಕು.

ಮೌಲ್ಯಮಾಪನ ಪ್ರಕ್ರಿಯೆ ಹೇಗೆ ಮಾಡ್ಬೇಕು..?

 1. ವಿದ್ಯಾರ್ಥಿಗಳಿಗೆ ಪ್ರತೀ ವಿಷಯದಲ್ಲಿ ಕನಿಷ್ಠ 35 ಅಂಕ ಕಡ್ಡಾಯವಾಗಿ ನೀಡಬೇಕು.
 2. ಪ್ರತಿ ಪತ್ರಿಕೆಗೆ 30 ರಂತೆ 2 ಪತ್ರಿಕೆಗೆ 60 ಅಂಕ ನೀಡಬೇಕು.
 3. 5 ಅಂಕವನ್ನ ಉಪನ್ಯಾಸಕರು ಆಂತರಿಕ ಅಂಕವೆಂದು ನೀಡಬೇಕು.
 4. ಪ್ರಯೋಗ ಸಹಿತಿ ವಿಷಯಗಳಿಗೆ ಪ್ರತ್ಯೇಕ ಅಂಕ ನೀಡಬೇಕಿದೆ.
 5. ಈ ಹಿಂದೆ ನಡೆಸಿದ ಪ್ರಾಯೋಗಿಕ ತರಗತಿಗಳ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ಅಂಕ ನೀಡಬೇಕು.
 6. ರಾಜ್ಯದ ಎಲ್ಲ ಪಿಯು ಕಾಲೇಜುಗಳಿಗೆ ಪಿಯು ಬೋರ್ಡ್ ನಿಂದ ಸುತ್ತೋಲೆ.

ಅಸೆಸ್ಮೆಂಟ್ ಲೆಕ್ಕಾಚಾರದಲ್ಲಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ನಿರ್ಧಾರ

 1. ಜು. 20ರೊಳಗೆ ಅಸೆಸ್ಮೆಂಟ್ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶ ನೀಡಲಾಗಿದ್ದು ಅದೇ ಕೊನೆಯ ದಿನಾಂಕವಾಗಿರಲಿದೆ.
 2. ಉಪನ್ಯಾಸಕರು ಜೂ.25ರೊಳಗೆ ಮೌಲ್ಯಮಾಪನ ಮಾಡಿರಬೇಕು.
 3. ಅದೇ ರೀತಿ ಎರಡನೇ ಅಸೆಸ್ಮೆಂಟ್ ಜೂ. 26 ರಿಂದ ಜು.5ರ ಒಳಗೆ ಮುಗಿಸಬೇಕು.
 4. ಉಪನ್ಯಾಸಕರು ಜು.10ರೊಳಗೆ ಮೌಲ್ಯಮಾಪನ ಮಾಡಿರಬೇಕು.
 5. 2 ಪತ್ರಿಕೆಗಳ ಅಂಕವನ್ನ ಸಮೀಕರಣ ಮಾಡಿ ಜು.15 ರೊಳಗೆ ಮುಗಿಸಿ, ಜು.20ರೊಳಗೆ ಸ್ಯಾಟ್ಸ್ ನಲ್ಲಿ ಅಪ್ಲೋಡ್ ಮಾಡಿರಬೇಕು.
 6. ಎರಡೂ ಪರೀಕ್ಷೆಗಳ ಅಂಕವನ್ನ ಜು.20ರೊಳಗೆ ಅಪ್ಲೋಡ್ ಮಾಡಲು ಡೆಡ್ ಲೈನ್

The post 1st PUC ವಿದ್ಯಾರ್ಥಿಗಳಿಗೆ ಶಾಕ್: ಆನ್​ಲೈನ್​ ಪರೀಕ್ಷೆ ನಡೆಯಲಿದೆ ಎಂದ ಸರ್ಕಾರ.. ಹೇಗಿರುತ್ತೆ ಎಕ್ಸಾಂ? appeared first on News First Kannada.

Source: newsfirstlive.com

Source link