ಬೆಂಗಳೂರು: ಕೊರೊನಾ ಎರಡನೇ ಅಲೆಯ ವೇಳೆ ಏಕಾಏಕಿ ಸೋಂಕಿನ ಹೆಚ್ಚಳದಿಂದ ಜನ ಸಾಮಾನ್ಯರು ಆಕ್ಸಿಜನ್​​ ಹಾಗೂ ಬೆಡ್​ ಪಡೆಯಲು ಪರದಾಟ ನಡೆಸಿದ್ದರು. ಇಂತಹ ಸಂಕಷ್ಟ ಸಂದರ್ಭದಲ್ಲಿ ಕೋವಿಡ್​ ಸಹಾಯವಾಣಿ ಹಾಗೂ ಆಸ್ಪತ್ರೆಗಳಿಗೆ ಹೋಗಿದ್ದ ಕರೆಗಳಿಂದ ಹೊಯ್ಸಳ ತಂಡಕ್ಕೆ ಅತಿ ಹೆಚ್ಚು ಕರೆಗಳು ಬಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್ ಸಮಯದಲ್ಲಿ ಹೊಯ್ಸಳಗೆ ಮಾರ್ಚ್‌ನಲ್ಲಿ 35 ಸಾವಿರದ 19 ಕರೆಗಳು, ಮೇನಲ್ಲಿ 30 ಸಾವಿರದ 42 ಕರೆಗಳು ಹಾಗೂ ಏಪ್ರಿಲ್ನಲ್ಲಿ 21 ಸಾವಿರದ 232 ಕರೆಗಳು ಬಂದಿವೆ. ಕರೆಗಳನ್ನ ಮಾಡಿದವರು ಆಕ್ಸಿಜನ್, ಬೆಡ್ಗಳ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದರು.

ಸಾರ್ವಜನಿಕರ ಕರೆಗಳನ್ನು ನೆಗ್ಲೆಟ್ ಮಾಡದೆ ಹೊಯ್ಸಳ ತಂಡ ಕ್ವಿಕ್ ಆಗಿ ರೆಸ್ಪಾಂಡ್ ಮಾಡಿದ್ದು, ಜನರಲ್ಲಿ ಭರವಸೆ ಮೂಡಿಸಿದೆ. ವೇಗವಾಗಿ ಜನರ ಕರೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಹೊಯ್ಸಳ ತಂಡಕ್ಕೆ ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂತ್ ಶಹಬ್ಬಾಸ್ ಗಿರಿ ನೀಡಿದ್ದು, ಎಕ್ಸೆಲೆಂಟ್ ಸರ್ಟಿಫಿಕೇಟ್ ಕೂಡ ನೀಡಿದ್ದಾರೆ.

ಬೆಂಗಳೂರಿನಲ್ಲಿ 272 ಹೊಯ್ಸಳ ವಾಹನಗಳು 24/7 ಕೆಲಸ ಮಾಡುತ್ತಿವೆ. ಸಾಮಾನ್ಯವಾಗಿ ಟ್ರಾಫಿಕ್ ಸಮಸ್ಯೆ, ಕೌಟುಂಬಿಕ ದೌರ್ಜನ್ಯ, ಮಹಿಳೆಯರಿಗೆ ಕಿರುಕುಳ, ಸಾರ್ವಜನಿಕ ಸ್ಥಳದಲ್ಲಿ ಸಮಸ್ಯೆ ಉಂಟು ಮಾಡುವವರ ವಿರುದ್ಧ, ಬೀದಿ ಜಗಳ, ಮೊಬೈಲ್ ಕಳ್ಳತನ ಸೇರಿದಂತೆ ಹಲವು ಕಾರಣಗಳಿಗೆ ಹೊಯ್ಸಳ ಕಾಲ್​​ ಸೆಂಟರ್​​ಗೆ ಕರೆಗಳು ಬರುತ್ತಿದ್ದವು. ಆದರೆ ಲಾಕ್​ಡೌನ್​ ಹಾಗೂ ಕೊರೊನಾ ಸಂದರ್ಭದಲ್ಲಿ ಆರೋಗ್ಯ ಸೌಲಭ್ಯಗಳು ಹಾಗೂ ಆಕ್ಸಿಜನ್​, ಬೆಡ್​ ಸಮಸ್ಯೆಗಳ ಬಗ್ಗೆ ಅತಿ ಹೆಚ್ಚು ಕರೆ ಬಂದಿವೆ.

The post 2ನೇ ಅಲೆ ವೇಳೆ ಆಕ್ಸಿಜನ್, ಬೆಡ್​​ಗಾಗಿ ಅತೀ ಹೆಚ್ಚು ಕರೆ ಸ್ವೀಕರಿಸಿದ ಹೊಯ್ಸಳ ಟೀಂ- ಇಶಾರಿಂದ ಶಹಬ್ಬಾಸ್​ಗಿರಿ appeared first on News First Kannada.

Source: newsfirstlive.com

Source link