ಮೊದಲ ವಾರ ಬಿಗ್​ ಬಾಸ್ ಮನೆಯಿಂದ​ ಪ್ರಶಾಂತ್​ ಸಂಬರಗಿ ಔಟ್​ ಆಗಿದ್ದಾರೆ ಎಂದು ಸುದೀಪ್​ ಅವರು ಚಮಕ್​ ಕೊಟ್ಟಿದ್ದರು. ಆದ್ರೇ ಈ ವಾರ ಯಾವುದೇ ರಿಯಾಯಿತಿ ಇರಲಿಲ್ಲ. ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನ ಎರಡನೇ ವಾರ ಆಶ್ಚರ್ಯ ಎಂಬಂತೆ ನಿಧಿ ಸುಬ್ಬಯ್ಯ ಎಲಿಮಿನೇಟ್ ​ ಆಗಿದ್ದಾರೆ.

84 ದಿನದ ಬಿಗ್​ ಬಾಸ್​ ಜರ್ನಿಯನ್ನು ನಿಧಿ ಅವರು ಮುಗಿಸಿದ್ದಾರೆ. ಈ ಎಲಿಮಿನೇಷನ್​ ಅನ್ನು ಯಾರು ಊಹಿಸಿರಲಿಲ್ಲ. ಆದ್ರಲ್ಲೂ ಮುಖ್ಯವಾಗಿ ಮನೆಯವರಿಗೆ ಇದು ಶಾಕ್​ ನೀಡಿದೆ. ಅದ್ರಲ್ಲೂ ಮುಖ್ಯವಾಗಿ ನಿಧಿ ಅವರನ್ನು ನೆನೆದು ಶುಭಾ ಕಣ್ಣೀರಿಟ್ಟರು.
ಇಲ್ಲಿ ಇನ್ನೊಂದು ಆಶ್ಚರ್ಯ ಆಗಿದ್ದು ಬಿಗ್​ ಬಾಸ್​ ಅವರು ನಿಧಿ ಅವರಿಗೆ ಯಾರನ್ನು ನೇರ ನಾಮಿನೇಟ್​ ಮಾಡುತ್ತಿರಿ ಎಂದಿದ್ದಕ್ಕೆ ನಿಧಿ ಅರವಿಂದ ಅವರ ಹೆಸರು ಹೇಳುತ್ತಾರೆ. ಇದು ಅವರ ಫ್ಯಾನ್ಸ್​ಗೆ ಶಾಕ್​ ನೀಡಿದೆ.

ನಂತರ ಸುದೀಪ್​ ಅವರ ಮುಂದೆ ನಿಧಿ ತಮ್ಮ ಜರ್ನಿ ಬಗ್ಗೆ ಮನಸ್ಸು ಬಿಚ್ಚಿ ಹಂಚಿಕೊಳ್ತಾರೆ. ಮನೆಯಲ್ಲಿ ಮೊದಲ ಇನ್ನಿಂಗ್ಸ್​ಗಿಂತ ಎರಡನೇ ಇನ್ನಿಂಗ್ಸ್​ನಲ್ಲಿ ಎಲ್ಲರೂ ಮುಖವಾಡ ಹಾಕಿದ್ದಾರೆ. ಎಲ್ಲರಿಗೂ ಬೇರೆಯವರ ವೀಕ್​ ಪಾಯಿಂಟ್ಸ್​ ಗೊತ್ತಾಗಿದೆ. ಈಗ ರಿಯಲ್​ ಗೇಮ್​ ಆಡುತ್ತಿದ್ದಾರೆ. ಪ್ರಶಾಂತ್​ ಅವರು ತಮ್ಮ ವಾದಗಳಿಂದಲ್ಲೇ ಉಳಿದುಕೊಳ್ಳುತ್ತಿದ್ದಾರೆ ಎಂದು ತಿಳಿದು ಮತ್ತೆ ಅದನ್ನು ಮುಂದುವರೆಸಿದ್ದಾರೆ. ಒಂದು ರೀತಿಯಲ್ಲಿ ಎಲ್ಲರೂ ಮುಖವಾಡ ಹಾಕಿದ್ದು, ಎಲ್ರೂ ಎಲ್ಲರ ಜತೆ ಬೆರೆಯುವ ನಾಟಕವಾಡ್ತಿದ್ದಾರೆ ಎಂದು ಮನೆಯ ಪರಿಸ್ಥಿತಿ ಬಗ್ಗೆ ಸುದೀಪ್​ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಾರೆ.

ಒಟ್ನಲ್ಲಿ ಯಾರು ಊಹಿಸಿದ ರೀತಿಯಲ್ಲಿ ನಿಧಿ ಔಟ್​ ಆಗಿದ್ದು, ಬಹುಶಃ ಇಲ್ಲಿ ಅವರಿಗೆ ಅರವಿಂದ ಅವರ ನಡುವೇ ನಡೆದ ವಾಕ್​ಸಮರ ಮುಳುವಾಯಿತು ಎನಿಸುತ್ತದೆ. ಈಗ ಮನೆಯಲ್ಲಿಯಲ್ಲಿ ಯಾವ ರೀತಿಯ ಬದಲಾವಣೆಗಳು ನಡೆಯತ್ತವೆ ನೋಡೋಣ.

The post 2ನೇ ಇನ್ನಿಂಗ್ಸ್‌ನಲ್ಲಿ ಎಲ್ಲರ ವೀಕ್‌ನೆಸ್ ಗೊತ್ತಾಗಿದೆ: ನಿಧಿ ಸುಬಯ್ಯ appeared first on News First Kannada.

Source: newsfirstlive.com

Source link