2ನೇ ಏಕದಿನ ಪಂದ್ಯ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾ

2ನೇ ಏಕದಿನ ಪಂದ್ಯ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾ

ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಶ್ರೀಲಂಕಾ​​ ಬ್ಯಾಟಿಂಗ್ ಆಯ್ದುಕೊಂಡಿದೆ. ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಟೀಮ್​ ಇಂಡಿಯಾವನ್ನ ಶಿಖರ್​ ಧವನ್​ ಮುನ್ನಡೆಸುತ್ತಿದ್ರೆ, ಲಂಕಾ ತಂಡಕ್ಕೆ ದಸುನ್​ ಶನಕ ನಾಯಕತ್ವ ವಹಿಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಗೆದ್ದಿರುವ ಭಾರತ, ಈ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಅತ್ತ ಶ್ರೀಲಂಕಾ ಇಂದಿನ ಪಂದ್ಯ ಗೆಲುವು ಸಾಧಿಸುವ ಮೂಲಕ ಸರಣಿ ಜೀವಂತವಾಗಿಟ್ಟುಕೊಳ್ಳಲು ಮುಂದಾಗಿದೆ.

ಭಾರತ ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್ (ವಿ.ಕೀ), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ಕುಲದೀಪ್ ಯಾದವ್.

ಶ್ರೀಲಂಕಾ ತಂಡ: ಅವಿಷ್ಕಾ ಫರ್ನಾಂಡೋ, ಮಿನೋದ್ ಭಾನುಕಾ (ವಿ.ಕೀ), ಭಾನುಕಾ ರಾಜಪಕ್ಸ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನ, ಕುಸಾನ್​ ರಜಿತಾ, ದುಷ್ಮಂತ ಚಮೀರಾ, ಲಕ್ಷಣ್​ ಸಂದಕನ್​.

The post 2ನೇ ಏಕದಿನ ಪಂದ್ಯ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾ appeared first on News First Kannada.

Source: newsfirstlive.com

Source link