ಇಂಡೋ-ಕಿವೀಸ್ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಆದ್ರೆ, 2ನೇ ಇನ್ನಿಂಗ್ಸ್ನಲ್ಲೂ ಭಾರತದ ಈ ಬ್ಯಾಟರ್ಗಳ ಕಳಪೆ ಪ್ರದರ್ಶನ, ತಂಡವನ್ನ ಒತ್ತಡಕ್ಕೆ ಸಿಲುಕಿಸಿದೆ. ಹೀಗಾಗಿ ಪಂದ್ಯ ಮುಕ್ತಾಯಕ್ಕೂ ಮೊದಲೇ 2ನೇ ಟೆಸ್ಟ್ಗೆ ಆಯ್ಕೆ ಕುರಿತ ಚರ್ಚೆಗಳು ಎದ್ದಿದೆ.
ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ಹಂತ ತಲುಪಿದೆ. ಇದರೊಂದಿಗೆ 2ನೇ ಟೆಸ್ಟ್ ಪಂದ್ಯಕ್ಕೆ ತಯಾರಿ ಕೂಡ ನಡೀತಿದೆ. ಮುಂಬೈನಲ್ಲಿ ನಡೆಯುವ ಈ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮಾಡಲಿದ್ದು, ಯಾರ ಜಾಗವನ್ನ ರಿಪ್ಲೇಸ್ ಮಾಡಲಿದ್ದಾರೆ ಅನ್ನೋದು ಪ್ರಶ್ನೆಯಾಗಿದೆ. ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್ ಈ ಮೂವರಲ್ಲಿ ಯಾರು ಬೆಂಚ್ಗೆ ಸೀಮಿತರಾಗ್ತಾರೆ ಅನ್ನೋದು ಹಾಟ್ ಟಾಪಿಕ್ ಆಗಿದೆ.
ಎರಡನೇ ಇನ್ನಿಂಗ್ಸ್ನಲ್ಲೂ ಕೈಕೊಟ್ಟ ಪೂಜಾರ ಮತ್ತು ರಹಾನೆ..!
26 ಮತ್ತು 22, 35 ಮತ್ತು 4.. ಇದು ಕ್ರಮವಾಗಿ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಮೊದಲ ಟೆಸ್ಟ್ನ 2 ಇನ್ನಿಂಗ್ಸ್ನಲ್ಲಿ ಗಳಿಸಿರೋ ರನ್ಗಳು. ಫಸ್ಟ್ ಇನ್ನಿಂಗ್ಸ್ನಲ್ಲಿ ಫೇಲ್ ಆದ್ರೂ, 2ನೇ ಇನ್ನಿಂಗ್ಸ್ನಲ್ಲಾದ್ರೂ ಇವರು ಮಿಂಚ್ತಾರೆ ಅನ್ನೋ ಭರವಸೆ ಇತ್ತು. ಆದ್ರೆ, ಅನುಭವಿಗಳಾಗಿ ತಂಡವನ್ನ ಲೀಡ್ ಮಾಡಬೇಕಿದ್ದ ಪೂಜಾರ-ರಹಾನೆ, ಬೇಜವಾಬ್ದಾರಿ ಆಟವನ್ನ ಮುಂದುವರೆಸಿದ್ದಾರೆ. ಹೀಗಾಗಿ ಈ ಇಬ್ಬರಲ್ಲೇ ಒಬ್ಬರು 2ನೇ ಟೆಸ್ಟ್ನಲ್ಲಿ ಬೆಂಚ್ ಕಾಯಲಿದ್ದಾರೆ ಅನ್ನೋದು ಕ್ರಿಕೆಟ್ ಎಕ್ಸ್ಪರ್ಟ್ಗಳ ಅಭಿಪ್ರಾಯವಾಗಿದೆ.
ಸೆಂಚುರಿ ಹೀರೋ ಅಯ್ಯರ್ಗೆ 4ನೇ ಸ್ಲಾಟ್ ಫಿಕ್ಸ್..?
ಹೌದು.! ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ, ಭಾರತದ ಮುನ್ನಡೆಗೆ ಕಾರಣವಾಗಿದ್ದ ಶ್ರೇಯಸ್ ಅಯ್ಯರ್, 2ನೇ ಇನ್ನಿಂಗ್ಸ್ನಲ್ಲಿ ಅರ್ಧಶತಕದ ಕಾಣಿಕೆ ನೀಡಿದ್ದಾರೆ. ಡೆಬ್ಯೂ ಮ್ಯಾಚ್ನಲ್ಲಿ ಭರವಸೆ ಮೂಡಿಸಿದ್ರೂ, ಕೊಹ್ಲಿ ಕಮ್ಬ್ಯಾಕ್ ಮಾಡಿದ ಬಳಿಕ ಅಯ್ಯರ್ಗೆ ಬೆಂಚ್ ಕಾಯೋದು ಕನ್ಫರ್ಮ್ ಎಂಬ ಮಾತಿತ್ತು. ಆದರೆ ರಹಾನೆ ಮತ್ತು ಪೂಜಾರ ವೈಫಲ್ಯ, ಅಯ್ಯರ್ ಸ್ಥಾನವನ್ನ ಭದ್ರಪಡಿಸಿದೆ.
ರಹಾನೆ-ಪೂಜಾರ ಜೋಡಿಯ ಕೆಟ್ಟ ಪ್ರದರ್ಶನ ತಂಡದ ಹಿನ್ನಡೆಗೆ ಕಾರಣವಾಗಿದೆ. ಆದರೆ ಉಪನಾಯಕ ಅನ್ನೋ ಕಾರಣಕ್ಕೆ ರಹಾನೆಗೆ ತಂಡದ ಸ್ಥಾನ ಸಿಗೋ ಸಾಧ್ಯತೆಯಿದೆ. ಹಾಗಂತ ಪೂಜಾರ ಅನುಭವವನ್ನೂ ಕಡೆಗಣಿಸೋದು ಮ್ಯಾನೇಜ್ಮೆಂಟ್ ಪಾಲಿಗೆ ಕಷ್ಟವಾಗಿದೆ. ಹೀಗಾಗಿ ರಹಾನೆ ಮತ್ತು ಪೂಜಾರರನ್ನ ಇಬ್ಬರನ್ನೂ ಬೆಂಚ್ಗೆ ಸೀಮಿತಗೊಳಿಸಿ, ಕೊಹ್ಲಿ ಜೊತೆಗೆ ಸೂರ್ಯಕುಮಾರ್ ತಂಡಕ್ಕೆ ಎಂಟ್ರಿಯಾಗೋ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.