2ನೇ ದಿನ IPL ಮೆಗಾ ಹರಾಜು.. ಓಪನರ್​​​ಗಾಗಿ RCB ಹುಡುಕಾಟ.. ಯಾರ ಮೇಲೆ ಕಣ್ಣು?


ಎರಡನೇ ದಿನದ ಇಂಡಿಯನ್​​ ಪ್ರೀಮಿಯರ್​​ ಲೀಗ್​ ಸೀಸನ್​​ 15 ಮೆಗಾ ಹರಾಜು ಇನ್ನೇನು ಕೆಲವೇ ನಿಮಿಷಗಳಲ್ಲಿ ಶುರುವಾಗಲಿದೆ. ಸರಿಯಾಗಿ ಮಧ್ಯಾಹ್ನ 12 ಗಂಟೆಗೆ 2ನೇ ದಿನದ ಹರಾಜು ಪ್ರಕ್ರಿಯೆ ಶುರುವಾಗಲಿದ್ದು, ಇಂದು ಸಾಕಷ್ಟು ಸ್ಟಾರ್​​ ಆಟಗಾರರು ಭಾರೀ ಮೊತ್ತಕ್ಕೆ ಸೇಲ್​ ಆಗಲಿದ್ದಾರೆ.

ಮೊದಲ ದಿನದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸುಮಾರು 8 ಆಟಗಾರರನ್ನು ಖರೀದಿಸಿದೆ. ಹರ್ಷಲ್ ಪಟೇಲ್, ವನಿಂದು ಹಸರಂಗ ಮೇಲೆ 11 ಕೋಟಿ ಮತ್ತು ಫಾಫ್ ಡುಪ್ಲೆಸಿಸ್ ಮೇಲೆ 7 ಕೋಟಿ ಹೂಡಿಕೆ ಮಾಡಿ ಅಚ್ಚರಿ ಮೂಡಿಸಿದೆ.

ಸದ್ಯ ಆರ್​ಸಿಬಿ ಬಳಿ 9.25 ಕೋಟಿ ರೂಪಾಯಿ ಮೊತ್ತ ಉಳಿಸಿಕೊಂಡಿದೆ. ಇಂದಿನ ಹರಾಜಿನಲ್ಲಿ ಆರ್​​ಸಿಬಿಗೆ ಮತ್ತೊಬ್ಬ ಓಪನರ್​ ಬೇಕಾಗಿದ್ದಾರೆ. ಈ ಲಿಸ್ಟ್​ನಲ್ಲಿ ಆ್ಯರೋನ್ ಫಿಂಚ್, ಮಾರ್ನಸ್ ಲ್ಯಾಬುಶೇನ್, ಡೇವಿಡ್ ಮಲನ್, ಇಯಾನ್ ಮಾರ್ಗನ್ ಇದ್ದು, ಎಷ್ಟು ಮೊತ್ತ ನೀಡಲಿದ್ದಾರೆ ಎಂಬುದು ಕುತೂಹಲಕಾರಿ ಪ್ರಶ್ನೆ.

News First Live Kannada


Leave a Reply

Your email address will not be published.