ಬೆಂಗಳೂರು: ಇಡೀ ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡಲಾಗಿದೆ. ಇದೇ ವೇಳೆ ಲಸಿಕೆ ನೀಡೋದ್ರಲ್ಲಿ ಕರ್ನಾಟಕ ರಾಜ್ಯ ಇತಿಹಾಸ ನಿರ್ಮಿಸಿದೆ. ಕರ್ನಾಟಕ ಇದುವರೆಗೂ 2 ಕೋಟಿ ಜನರಿಗೆ ಲಸಿಕೆ ನೀಡಿ ಹೊಸ ದಾಖಲೆಯನ್ನು ಬರೆದಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಇದನ್ನೂ ಓದಿ:  ಹೋಟೆಲ್, ರೆಸಾರ್ಟ್, ವಸತಿ ಗೃಹಗಳ ವಿದ್ಯುತ್, ನೀರಿನ ಬಿಲ್ ಮನ್ನಾ ಮಾಡಿ: ಸಿದ್ದರಾಮಯ್ಯ ಪತ್ರ

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್ ಕರ್ನಾಟಕ ಲಸಿಕೆ ನೀಡಿಕೆಯಲ್ಲಿ ಇತಿಹಾಸ ನಿರ್ಮಿಸಿದೆ ಇದೊಂದು ದೊಡ್ಡ ಸಾಧನೆ. ಇದಕ್ಕೆ ಕೆಲಸ ಮಾಡಿದ ಎಲ್ಲಾ ವೈದ್ಯರು, ದಾದಿಯರಿಗೆ, ಆಸ್ಪತ್ರೆಗಳಿಗೆ ಧನ್ಯವಾದ ಎಂದು ಅಂತ ಹೆಮ್ಮೆಯಿಂದ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಜನರ ಲಸಿಕೆ ಉತ್ಸಾಹಕ್ಕೂ ಧನ್ಯವಾದ ತಿಳಿಸಿದ ಸಚಿವರು, ಜನರು ಕೂಡಾ ಲಸಿಕೆ ಹಾಕಿಸಿಕೊಳ್ಳೋಕೆ ಬರುತ್ತಿದ್ದಾರೆ. ಇದರಿಂದಾಗಿಯೇ ಲಸಿಕೆ ಅಭಿಯಾನ 2 ಕೋಟಿ ದಾಟಿದೆ. ಯೋಗ ದಿನದಂದು ಒಂದೇ ದಿನ 11 ಲಕ್ಷ ಲಸಿಕೆ ಕೊಟ್ಟಿದ್ದೇವೆ. ದೇಶದಲ್ಲಿ ಅತಿ ಹೆಚ್ಚು ಲಸಿಕೆ ಕೊಟ್ಟ ಎರಡನೇ ಸ್ಥಾನದಲ್ಲಿ ನಾವು ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

ಲಸಿಕೆ ಉಚಿತವಾಗಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವ್ರಿಗೆ ಧನ್ಯವಾದ. ಜನರು ಕೂಡಾ ಆತಂಕ ಇಲ್ಲದೆ ಎಲ್ಲರೂ ಲಸಿಕೆ ಪಡೆಯಬೇಕು. ಇದೇ ವೇಳೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಮಾತನಾಡಿದ ಅವರು, ಮಕ್ಕಳಿಗೆ ಲಸಿಕೆ ಟ್ರಯಲ್ ನಡೆಯುತ್ತಿದೆ. ಟ್ರಯಲ್ ಪ್ರಕ್ರಿಯೆ ಮುಗಿದ ಮೇಲೆ ಈ ಬಗ್ಗೆ ನಿರ್ಧಾರ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.

The post 2 ಕೋಟಿ ಲಸಿಕೆ ನೀಡಿ ಇತಿಹಾಸ ನಿರ್ಮಿಸಿದ ಕರ್ನಾಟಕ: ಸುಧಾಕರ್ appeared first on Public TV.

Source: publictv.in

Source link