ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನ್ನುವಂತೆ ಇದೀಗ ಕೊರೊನಾ ಹೊಸ ವೇಷ ತೊಟ್ಟು ಮನಬಂದಂತೆ ದಾಳಿ ಮಾಡ್ತಿದೆ. ದೂರದ ಆಫ್ರಿಕದಿಂದಲೇ ವರ್ಲ್ಡ್ ಟೂರ್ ಹೊರಡಲು ಹೆಮ್ಮಾರಿ ರೆಡಿಯಾಗಿ ನಿಂತಿದ್ದು, ಇದು ಜಾಗತಿಕ ಅತಂಕಕ್ಕೆ ಕಾರಣವಾಗಿದೆ. ಒಮಿಕ್ರಾನ್ ವೈರಸ್ ಯಾಕಿಷ್ಟು ಅಪಾಯಕಾರಿ..? ಒಮಿಕ್ರಾನ್ ವೇಗವಾಗಿ ಹರಡಲು ಕಾರಣವಾಗಿರುವ ಅಂಶಗಳೇನು?
ಒಮಿಕ್ರಾನ್ ಸದ್ಯ ಜಗತ್ತನ್ನೇ ತಲ್ಲಣಗೊಳಿಸಿರುವ ಹೆಸರು. ಕೊರೊನಾ ತನ್ನ ಎರಡನೇ ಅಲೆಯ ವೇಳೆ ಸೃಷ್ಟಿಸಿದ ಕರಾಳ ಸನ್ನಿವೇಶಗಳ ನೋವು ಮರೆಯು ಮುನ್ನವೇ ಅಟ್ಯಾಕ್ ಮಾಡಲು ಮತ್ತೆ ಜನ್ಮವೆತ್ತಿ ಬಂದಿರುವ ಹೊಸ ರುಪಾಂತರಿ ತಳಿ. ಈ ಅಗೋಚರ ವೈರಸ್ ವೇಷ ಬದಲಾಯಿಸಿ ದೂರದಲ್ಲೇ ಕೂತು ದಿಗಿಲು ಉಂಟು ಮಾಡಿದೆ. ಯಾವುದೇ ಸರಪಳಿಗೂ ಸಿಲುಕದೆ ಹಾವಳಿ ಎಬ್ಬಿಸಲು ಹೊಸ ತಳಿ ರೆಡಿಯಾಗಿ ನಿಂತಿದೆ. ವಿಶ್ವದ ಜನರ ನೆಮ್ಮದಿಯನ್ನ ಮತ್ತೆ ಬುಡಮೇಲು ಮಾಡಲು ದಂಡ ಯಾತ್ರೆ ಹೊರಡಲು ವೈರಸ್ ಸನ್ನದ್ಧವಾಗಿದ್ದು, ಜಾಗತಿಕ ಆತಂಕಕ್ಕೆ ಕಾರಣವಾಗಿದೆ.
ಒಮಿಕ್ರಾನ್ ಅತ್ಯಂತ ಅಪಾಯಕಾರಿ-WHO..!
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಒಮಿಕ್ರಾನ್ ವೈರಸ್ ಅತ್ಯಂತ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹಿಂದೆ ಕಾಣಿಸಿಕೊಂಡಿದ್ದ ಡೆಲ್ಟಾ ರೂಪಾಂತರಿ ವೈರಸ್ಗಿಂತಲೂ ಒಮಿಕ್ರಾನ್ ಹೆಚ್ಚು ಅಪಾಯಕಾರಿ ಎಂದು ವಿಶ್ವ ಸಂಸ್ಥೆ ಹೇಳಿದ್ದು, ಎಚ್ಚರವಹಿಸುವಂತೆ ಸೂಚನೆ ನೀಡಿದೆ.
ಇದುವರೆಗೆ ಕೊರೊನಾ ರುಪಾಂತರಿ ತಳಿ ಡೆಲ್ಟಾ ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿತ್ತು. ಆದ್ರೆ ಕೊರೊನಾವೈರಸ್ ಹೊಸ ರೂಪಾಂತರ ತಳಿ ಬಿ.1.1.529 ಒಮಿಕ್ರಾನ್ ಡೆಲ್ಟಾಗಿಂತಲೂ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಾಥಮಿಕ ಪುರಾವೆಗಳಲ್ಲಿ ಒಮಿಕ್ರಾನ್ ರೂಪಾಂತರ ತಳಿ ಮರುಸೋಂಕಿನ ಅಪಾಯವನ್ನು ಹೆಚ್ಚಿಸುತ್ತಿರುವುದು ಗೊತ್ತಾಗಿದೆ. ಈ ಹಿಂದೆ ಕೊವಿಡ್-19 ಸೋಂಕಿನಿಂದ ಬಳಲಿದವರಿಗೆ ಮತ್ತೊಮ್ಮೆ ಒಮಿಕ್ರಾನ್ ಸೋಂಕು ತಗುಲುವ ಸಾಧ್ಯತೆ ಇದೆ . ಡೆಲ್ಟಾ ಮತ್ತು ಇತರ ರೂಪಾಂತರಿಗಳಿಗೆ ಹೋಲಿಸಿದರೆ ಒಮಿಕ್ರಾನ್ ಹೆಚ್ಚು ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಸುಲಭವಾಗಿ ಹರಡುತ್ತದೆಯೇ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾದ್ರೆ ಒಮ್ರಿಕಾನ್ ವೇಗವಾಗಿ ಹರಡಲು ಕಾರಣವೇನು ಅನ್ನೋದನ್ನೇ ಹೇಳ್ತೀವಿ ನೋಡಿ.
ಒಮ್ರಿಕಾನ್ ಕೊರೊನಾ ವೈರಸ್ ಮೇಲ್ಮೈನಲ್ಲಿ ಮುಳ್ಳಿನ ರೀತಿಯ 50ಕ್ಕೂ ಅಧಿಕ ಸ್ಪೈಕ್ ಪ್ರೋಟಿನ್ಗಳಿವೆ. ಇವುಗಳಲ್ಲಿ 30ಕ್ಕೂ ಅಧಿಕ ಸ್ಪೈಕ್ ಪ್ರೊಟೀನ್ಗಳು ಪರಸ್ಪರ ಭಿನ್ನವಾಗಿದೆ. ಸ್ಪೈಕ್ ಪ್ರೊಟೀನ್ ಮುಳ್ಳುಗಳ ಮೂಲಕ ವೈರಸ್ ಜೀವ ಕೋಶ ಸೇರುತ್ತದೆ. ಇಂತಹಸ್ಪೈ ಪ್ರೊಟೀನ್ ಹೆಚ್ಚು ಇದ್ದಷ್ಟು ವೇಗವಾಗಿ ಹರಡುವ ಸಾಧ್ಯತೆ ಇದೆ.ಒಮ್ರಿಕಾನ್ 50ಕ್ಕೂ ಅಧಿಕ ಸ್ಪೈಕ್ ಪ್ರೊಟೀನ್ ಹೊಂದಿರುವುದರಿಂದ ವೇಗವಾಗ ಒಮ್ರಿಕಾನ್ ವೇಗವಾಗಿ ಹರಡುವ ಸಾಧ್ಯತೆ ಇದೆ.
2 ಡೋಸ್ ವ್ಯಾಕ್ಸಿನ್ಗೂ ಬಗ್ಗಲ್ವಾ ಒಮಿಕ್ರಾನ್?
ಇದೇ ಇದೇ ಈಗ ಜನರ ಆತಂಕಕ್ಕೆ ಕಾರಣವಾಗಿರೋದು. ಇಷ್ಟು ದಿನ ಎರಡು ಡೋಸ್ ಹಾಕಿದವರು ಮಾಸ್ಕ್ ಮೂಲೆಗಿಟ್ಟು ಬಿಂದಾಸ್ ಆಗಿ ಓಡಾಡ್ತಿದ್ರು. ಆದ್ರೆ ಇದೀಗ ಆಫ್ರಿಕಾದಲ್ಲಿ ಜನ್ಮವೆತ್ತಿ ವಲ್ಡ್ ಟೂರ್ ಹೊರಡಲು ಸಜ್ಜಾಗಿರುವ ಈ ಅಗೋಚರ ವೈರಸ್ ವ್ಯಾಕ್ಸಿನ್ಗೂ ಬಗ್ಗಲ್ಲ ಅನ್ನೋ ಮಾತು ಕೇಳಿ ಬರ್ತಿದೆ.
‘ಲಸಿಕೆಗೆ ಸೋಲದೇ ಇರಬಹುದು’
ದಕ್ಷಿಣ ಆಫ್ರಿಕಾದ ಹೆಚ್ಚು ಜನಸಂಖ್ಯೆ ಹೊಂದಿರುವ ಗೌಟೆಂಗ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ವೈರಸ್, ಲಸಿಕೆಗೆ ಸೋಲದೇ ಇರಬಹುದು. ಹೊಸದಾಗಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ಒಮಿಕ್ರಾನ್ ವೈರಸ್ ಸುಮಾರು 30ಕ್ಕೂ ರೂಪಾಂತರಗಳನ್ನು ಹೊಂದಿದ್ದು, ಅದರ ಪ್ರೋಟಿನ್ ಕವಚ ಮನುಷ್ಯರ ರೋಗ ನಿರೋಧಕ ಶಕ್ತಿಯಿಂದ ಪಾರಾಗುವಂತೆ ಮಾಡುತ್ತದೆ. ಇದರಿಂದ ಕೋವಿಡ್ ವ್ಯಾಕ್ಸಿನ್ ಕೊರೊನಾದೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಕಠಿಣ ಪರೀಕ್ಷೆಗೆ ಒಳಪಡಿಸಬೇಕಾಗಿದೆ
-ಡಾ.ರಂದೀಪ್ ಗುಲೇರಿಯಾ, ಏಮ್ಸ್ ಮುಖ್ಯಸ್ಥ
ಮತ್ತೊಂದು ಆಘಾತಕಾರಿ ವಿಷಯ ಎಂದರೆ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ಜನರಲ್ಲಿ ಈ ಹೊಸ ರೂಪಾಂತರಿ ಮತ್ತೆ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಬಹುದು ಎನ್ನಲಾಗಿದ್ದು, ಇದು ಸಹಜವಾಗಿಯೇ ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಒಮಿಕ್ರಾನ್ ಅಪಾಯದ ಕುರಿತು ತಜ್ಷರು ಕೂಡ ಆತಂಕಕಾರಿ ಮಾತುಗಳನ್ನಾಡಿದ್ದಾರೆ.
ಒಮಿಕ್ರಾನ್ ನಾವು ನೋಡಿದ ವೈರಸ್ನ ಅತ್ಯಂತ ಹೆಚ್ಚು ರೂಪಾಂತರಿ ತಳಿ. ಒಂದೇ ವೈರಸ್ನಲ್ಲಿ ಹಿಂದೆಂದೂ ನೋಡಿರದ ಸಂಭಾವ್ಯ ಆತಂಕಕಾರಿ ಬದಲಾವಣೆಗಳು ಕಂಡು ಬಂದಿವೆ
– ಲಾರೆನ್ಸ್ ಯಂಗ್, ಸೂಕ್ಷ್ಮರೋಗಾಣು ಶಾಸ್ತ್ರಜ್ಞ
ಓಮಿಕ್ರಾನ್ ಒಂದು ರೂಪಾಂತರ ಪ್ರಭೇದ ಆಗಿದೆ ಎಂದಿರುವ WHO, ಜಗತ್ತಿನಾದ್ಯಂತ ಸೋಂಕು ಹರಡುವ ಅಪಾಯವನ್ನು ಸೂಚಿಸಿದ್ದು, ಜಾಗೃತರಾಗಿರುವಂತೆ ತಿಳಿಸಿದೆ.
ಎಚ್ಚರವಹಿಸುವಂತೆ ಏಷ್ಯಾ ರಾಷ್ಟ್ರಗಳಿಗೆ WHO ಕರೆ..!
ಒಮ್ರಿಕಾನ್ ವೇಗವಾಗಿ ಹರುಡುವ ಕಾರಣ ಎಚ್ಚರಿಕೆಯಿಂದ ಇರುವಂತೆ ಏಷ್ಯಾ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ಎಲ್ಲಾ ಕಾರ್ಯಕ್ರಮಗಳನ್ನ ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ನಡೆಸಲು ಹೇಳಿದೆ. ಸೋಂಕು ಪಸರಿಸದಂತೆ, ಸಮಗ್ರ ಮತ್ತು ಕ್ರಮಬದ್ಧ ಮತ್ತು ಸಾಮಾಜಿಕ ಕ್ರಮಗಳನ್ನu ಕೈಗೊಳ್ಳುವಂತೆ ತಿಳಿಸಿದೆ.
ಒಮಿಕ್ರಾನ್ ಕುರಿತು ಲಸಿಕಾ ಕಂಪನಿಗಳು ಹೇಳಿದ್ದೇನು?
ಈಗಿರುವ ಲಸಿಕೆಗಳು ಒಮಿಕ್ರಾನ್ ವಿರುದ್ಧ ಕೆಲಸ ಮಾಡುವ ಬಗ್ಗೆ ಈಗಲೇ ಹೇಳಲಾಗದು ಎಂದು ಫೈಝರ್ ಹಾಗೂ ಬಯೋನ್ಟೆಕ್ ಕಂಪನಿಗಳು ಹೇಳಿದ್ದು, ಹೊಸ ತಳಿಯ ಬಗ್ಗೆ ಹೆಚ್ಚಿನ ದತ್ತಾಂಶ ಅಗತ್ಯವಿದೆ ಎಂದು ತಿಳಿಸಿದೆ. ಈಗಿರುವ ಲಸಿಕೆ ಹೊಸ ತಳಿಯ ವಿರುದ್ಧ ಪರಿಣಾಮಕಾರಿಯೇ ಅನ್ನೋದರ ಬಗ್ಗೆ ಪರೀಕ್ಷೆ ನಡೆಸುವುದಾಗಿ ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆ ತಿಳಿಸಿದೆ.
ಕೋವಿಡ್ ಬಂದು ಗುಣಮುಖರಾದವರಿಗೆ ಒಮಿಕ್ರಾನ್ ಮೂಲಕ ಕೋವಿಡ್ ಬರುತ್ತದೆಯೇ ಇಲ್ಲವೇ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಬಂದರೂ ಅದರ ತೀವೃತೆ ಎಷ್ಟಿರಲಿದೆ ಅನ್ನೋದು ಇನ್ನೂ ಪರೀಕ್ಷೆಯಿಂದಷ್ಟ ಸ್ಪಷ್ಟವಾಗಬೇಕಾಗಿದೆ. ಒಂದು ಕಡೆ ಒಮಿಕ್ರಾನ್ ದಿಗಿಲು ಉಂಟು ಮಾಡಿದ್ರೆ, ಆಫ್ರಿಕಾ ವೈದ್ಯರು ಮಾತ್ರ ಈ ತಳಿಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದಿದೆ.
ಒಂದು ಕಡೆ ಈ ಹೊಸ ತಳಿಗೆ ಹೇಗೆ ಬಿಗಿ ಸರಪಳಿ ಹಾಗ್ಬೇಕೆಂದು ಜಗತ್ತು ಚಿಂತನೆ ನಡೆಸುತ್ತಿದ್ರೆ. ಒಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಿರುವ ಆಫ್ರಿಕಾ ವೈದ್ಯರು ಇದು ಡೇಂಜರಸ್ ತಳಿ ಅಲ್ಲ ಎಂದು ಹೇಳಿದೆ. ಹಾಗಾದ್ರೆ ಒಮಿಕ್ರಾನ್ ತಳಿ ಡೆಲ್ಟಾ ಹೆಮ್ಮಾರಿಯ ಹೆಡೆ ಮುರಿ ಕಟ್ಟುತ್ತಾ..? ಆ ಇಂಟ್ರೆಸ್ಟಿಂಗ್ ಕಹಾನಿಯನ್ನ ಹೇಳ್ತೀವಿ.. ಆಫ್ಟರ್ ಎ ಶಾರ್ಟ್ ಬ್ರೇಕ್.
The post 2 ಡೋಸ್ ವ್ಯಾಕ್ಸಿನ್ಗೂ ಬಗ್ಗಲ್ವಾ ಒಮಿಕ್ರಾನ್? ಲಸಿಕಾ ಕಂಪನಿಗಳು ಹೇಳಿದ್ದೇನು? appeared first on News First Kannada.