ನವದೆಹಲಿ: ಭಾರತವೂ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಡೆಲ್ಟಾ ಪ್ಲಸ್ ಕೊರೊನಾ ಸೊಂಕಿನ ಆತಂಕ ಎದುರಾಗಿದೆ. ದಿನೇ ದಿನೇ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರೋದು ಮತ್ತೆ ಭಯ ಹುಟ್ಟಿಸಿದೆ.

ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆಯನ್ನ ನೀಡಿದ್ದು, ಯಾರೆಲ್ಲಾ ವ್ಯಾಕ್ಸಿನೇಷನ್ ಪಡೆದುಕೊಂಡಿದ್ದಿರೋ ಅವರೆಲ್ಲರೂ ಸೇರಿದಂತೆ ಕೂಡಲೇ ಎಲ್ಲರೂ ಜಾಗೃತರಾಗಬೇಕು. ಸಾಮಾಜಿಕ ಅಂತರ, ಮಾಸ್ಕ್​ ಧಾರಣೆಯನ್ನ ಕಡ್ಡಯವಾಗಿ ಮುಂದುವರಿಸಬೇಕು. ಯಾಕಂದ್ರೆ ಡೆಲ್ಟಾ ವೈರಸ್​ ತುಂಬಾ ಮಾರಕವಾಗಿದೆ, ಅತೀ ವೇಗದಲ್ಲಿ ಈ ರೂಪಾಂತರಿ ವೈರಸ್​ ಮನುಷ್ಯರನ್ನ ಕಾಡ್ತಿದೆ ಎಂದು ಎಚ್ಚರಿಕೆಯನ್ನ ನೀಡಿದೆ.

ಈ ಬಗ್ಗೆ ಮಾತನಾಡಿರುವ WHOನ ಅಧಿಕಾರಿ ಮರಿಯಾಂಜೆಲಾ ಸಿಮಾವೊ.. ಯಾರೆಲ್ಲಾ ಕೊರೊನಾದ ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೋ ಅವರೆಲ್ಲಾ ಸುರಕ್ಷಿತ ಎಂದು ಭಾವಿಸೋದು ಬೇಡ. ನಿಮ್ಮಿಂದ ಸಮುದಾಯಕ್ಕೆ ಹರಡೋದನ್ನ ವ್ಯಾಕ್ಸಿನ್ ತಪ್ಪಿಸಲ್ಲ. ಹೀಗಾಗಿ ಜನರು ಮಸ್ಕ್​​ ಅನ್ನ ಧರಿಸೋದನ್ನ ನಿಲ್ಲಿಸಬಾರದು. ಸ್ವಚ್ಛವಾದ ಗಾಳಿಯಿರುವ ಸ್ಥಳಗಳಲ್ಲಿ ಇರೋದನ್ನ ರೂಢಿಸಿಕೊಳ್ಳಿ. ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಿ. ಜನ ಸಂದಣಿ ಪ್ರದೇಶಗಳಲ್ಲಿ ಸೇರಬಾರದು. ಒಬ್ಬರಿಂದ ಒಬ್ಬರಿಗೆ ಡೆಲ್ಟಾ ವೈರಸ್​ ಹರಡುತ್ತಿರುವ ಸಂದರ್ಭದಲ್ಲಿ ನೀವು ವ್ಯಾಕ್ಸಿನೇಷನ್ ಪಡೆದುಕೊಂಡರೂ, ಕೊರೊನಾ ನಿಯಮ ಪಾಲನೆ ಕಡ್ಡಾಯವಾಗಿದೆ. ಯಾಕಂದ್ರೆ ನಿಮ್ಮಿಂದಲೂ ಬೇರೆಯವ್ರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಂತಾ ಎಚ್ಚರಿಸಿದ್ದಾರೆ.

ಎರಡೂ ಡೋಸ್ ವ್ಯಾಕ್ಸಿನ್ ಪಡೆದುಕೊಂಡವರು ಸೇಫ್​ ಆಗಿಯೇ ಇರುತ್ತಾರೆ. ಆದರೆ ಮ್ಯೂಟೆಂಟ್ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ ಹಲವು ದೇಶಗಳನ್ನ ಡೆಲ್ಟಾ ರೂಪಾಂತರಿ ವೈರಸ್​ ಕಾಟ ಕೊಡುತ್ತಿದೆ. ಭಾರತದಲ್ಲಿ 50ಕ್ಕೆ ಹೆಚ್ಚು ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್​ ಕಾಣಿಸಿಕೊಂಡಿದೆ. ಈಗಾಗಲೇ 11 ರಾಜ್ಯಗಳ 15 ಜಿಲ್ಲೆಗಳಲ್ಲಿ ಈ ವೈರಸ್​ ಕಾಣಿಸಿಕೊಂಡಿದೆ.

The post 2 ಡೋಸ್ ವ್ಯಾಕ್ಸಿನ್ ಪಡ್ಕೊಂಡ್ರೂ ಮಾಸ್ಕ್​​​ ಧರಿಸೋದನ್ನ ಬಿಡಬೇಡಿ -ಡೆಲ್ಟಾ ಪ್ಲಸ್ ಬಗ್ಗೆ WHO ಎಚ್ಚರಿಕೆ appeared first on News First Kannada.

Source: newsfirstlive.com

Source link