ದಾವಣಗೆರೆ: ಪ್ರಜಾಕೀಯದಿಂದ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಗೊಂಡಿರುವ ದಾವಣಗೆರೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿಯ ಗ್ರಾಮದ ಚೇತನ್ ಕುಮಾರ್ ಅರೇಹಳ್ಳಿ ಎರಡು ದಿನಗಳ ರಜೆ ಕೋರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಅಪರೂಪದ ಘಟನೆ ನಡೆದಿದೆ.

ತಮ್ಮನ ಮದುವೆ ಇರೋ ಕಾರಣ ಎರಡು ದಿನಗಳ ರಜೆ ಕೋರಿ ಪತ್ರ ಬರೆದ ಗ್ರಾಮ ಪಂಚಾಯತಿ ಸದಸ್ಯ.. ಇದೆ ದಿನಾಂಕ 29 ರಂದು ತಮ್ಮನ ಮದುವೆ ಇರುವ ಕಾರಣ ರಜೆ ಬೇಕೆಂದು PDO ಮತ್ತು ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಚೇತನ್ ಕುಮಾರ್ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮ ಪಂಚಾಯತಿಯ ಅರೇಹಳ್ಳಿ ವಾರ್ಡ್ ನಂ 4 ರ ಸದಸ್ಯರಾಗಿದ್ದಾರೆ. ಪ್ರಜಾಕೀಯ ಪಕ್ಷದಿಂದ ಗ್ರಾಮ ಪಂಚಾಯತ್ ಸದಸ್ಯ ಆಗಿ ಖಾತೆ ತೆರೆದಿರುವ ಚೇತನ್ ಕುಮಾರ್ ತಾನೊಬ್ಬ ಜನರ ಸೇವಕ ಅನ್ನೋದನ್ನ ತೋರಿಸಲು ರಜೆ ಕೋರಿ ಪತ್ರ ಬರೆದಿದ್ದಾರೆ. ಈ ಮೂಲಕ ಅಧ್ಯಕ್ಷ ಮತ್ತು ಪಿಡಿಓ ಅವರಿಗೆ ಅಚ್ಚರಿ ಚೇತನ್ ಕುಮಾರ್ ಅಚ್ಚರಿ ಮೂಡಿಸಿದ್ದಾರೆ ಎನ್ನಲಾಗಿದೆ.

The post 2 ದಿನ ರಜೆ ಕೋರಿ ಪತ್ರ ಬರೆದ ಪ್ರಜಾಕೀಯದ ಗ್ರಾ. ಪಂ ಸದಸ್ಯ: ಶಾಕ್ ಆದ PDO appeared first on News First Kannada.

Source: newsfirstlive.com

Source link