ಗುಜರಾತ್​:  ಈ ಹಿಂದೆಯಲ್ಲ ದೆವ್ವಗಳು ಮನೆ ಹತ್ರ ಬರ್ತಿದ್ವು ಅಂತ ಹೇಳಿ, ಮನೆ ಬಾಗಿಲಿಗೆ ‘ನಾಳೆ ಬಾ’ ಅಂತ ಬರಿತಾಯಿದ್ರಂತೆ. ಕಾಲ ಚೇಂಜ್​ ಆಗ್ತಾಯಿದ್ದ ಹಾಗೇ, ಟ್ರೆಂಡ್​ ಕೂಡ ಚೇಂಜ್​ ಆಗುತ್ತೆ. ಯಾಕೆ ದೆವ್ವಗಳ ಬಗ್ಗೆ ಮಾತಾಡ್ತಾಯಿದ್ದೀನಿ ಅಂದ್ರೆ, ಗುಜರಾತ್​ನಲ್ಲಿ, ಪೊಲೀಸ್ರು ಎರಡು ದೆವ್ವಗಳ ಮೇಲೆ ಕೇಸ್​ ದಾಖಲಿಸಿದ್ದಾರಂತೆ.

ಹೌದೂ, ಪಂಚಮಹಲ್​ ಜಿಲ್ಲೆಯ ರೈತರೊಬ್ಬರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಳ್ಳಬೇಕಾದ್ರೆ, ಅವ್ರಿಗೆ ಎರಡು ದೆವ್ವಗಳು, ತುಂಬಾ ತೊಂದ್ರೆ ಕೊಡ್ತಿತ್ತಂತೆ. ಅಲ್ಲದೇ, ಅವ್ರಿಗೆ ಕೊಲ್ಲೋದಾಗಿ ಬೆದರಿಕೆಯನ್ನು ಹಾಕಿತ್ತಂತೆ. ಹಾಗಾಗಿ, ಆ ರೈತ ಸೀದ ಜಂಬೂಗೋಢ ಪೊಲೀಸ್​ ಠಾಣೆಗೆ ನುಗ್ಗಿ ತನಗೆ ಆಗ್ತಾಯಿರೋ ಕಷ್ಟ, ತನಗೆ ಆ ದೆವ್ವಗಳು ಹೆದರಿಸಿರೋದು ಎಲ್ಲವನ್ನೂ ಹೇಳಿದ್ದಾರೆ. ಅಲ್ಲಿದ್ದ, ಸಬ್​ ಇನ್ಸ್​ಪೆಕ್ಟರ್​ ಮಯಾಂಕ್​ ಸಿಂಗ್​, ಈ ಬಗ್ಗೆ ತಿಳಿದುಕೊಂಡು, ಆ ಎರಡು ದೆವ್ವಗಳ ಮೇಲೂ ಕಂಪ್ಲೈಂಟ್​ನ್ನ ರಿಜಿಸ್ಟರ್​ ಮಾಡಿಕೊಂಡು, ರೈತನನ್ನ ವಾಪಸ್​ ಕಳುಹಸಿದ್ದಾರಂತೆ.

The post 2 ದೆವ್ವಗಳ ಮೇಲೆ ಕೇಸ್​ ಬುಕ್​ ಮಾಡಿದ ಗುಜರಾತ್​ ಪೊಲೀಸ್ರು.. ಯಾಕೆ ಗೊತ್ತಾ? appeared first on News First Kannada.

Source: newsfirstlive.com

Source link