2 ವರ್ಷಗಳ ಬಳಿಕ ಶತಕ -ಟೀಕಾಕಾರರಿಗೆ ಸಿಂಹದಂತೆ ಘರ್ಜಿಸಿ ಉತ್ತರಿಸಿದ ಕನ್ನಡಿಗ ಮಯಾಂಕ್


ನಿನ್ನೆ ಕುಸಿತ ಕಂಡಿದ್ದ ಟೀಮ್ ಇಂಡಿಯಾಕ್ಕೆ ವಾಲ್ ಆಗಿದ್ದು, ಕನ್ನಡಿಗ ಮಯಾಂಕ್ ಅಗರ್ವಾಲ್​. ದಿಗ್ಗಜ ಬ್ಯಾಟ್ಸ್​ಮನ್​ಗಳು ಪೆವಲಿಯನ್ ಪರೇಡ್​ ನಡೆಸಿದ್ರೆ, ಮಯಾಂಕ್ ಏಕಾಂಗಿ ಹೋರಾಟ ನಡೆಸಿದ್ರು.

ಮುಂಬೈ ಟೆಸ್ಟ್​ನಲ್ಲಿ ಒಂದೆಡೆ ಮಳೆಯಾಟ.. ಮತ್ತೊಂದೆಡೆ ಮಯಾಂಕ್ ಆರ್ಭಟ.. ಯೆಸ್.. ನಿನ್ನೆ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್​ನ ಮೊದಲ ಸೆಷನ್​​ನಲ್ಲಿ ಮಳೆಯಾಟವಾಡಿದ್ರೆ, ಅಂತಿಮ ಸೆಷನ್​​​ನಲ್ಲಿ ನಡೆದಿದ್ದು ಕನ್ನಡಿಗ ಮಯಾಂಕ್​ ಅಗರ್ವಾಲ್​ರ ಶತಕದ ವೈಭವ.. ಹೋರಾಟದ ಇನ್ನಿಂಗ್ಸ್​ ಕಟ್ಟಿದ ಅಗರ್ವಾಲ್​, ಟೀಮ್ ಇಂಡಿಯಾಕ್ಕೆ ವಾಲ್ ಆಗಿ ನಿಂತರು. ಟೀಕಾಕಾರರಿಗೆ ಬ್ಯಾಟ್​​​​​​​​​​​​​​​​​​ನಿಂದ ಉತ್ತರಿಸಿದರು.

ಮುಂಬೈನಲ್ಲಿ ಕನ್ನಡಿಗ ಮಯಾಂಕ್ ದರ್ಬಾರ್
ಕಾನ್ಪುರದ ಮೊದಲ ಟೆಸ್ಟ್​ನಲ್ಲಿ ವೈಫಲ್ಯ ಕಂಡಿದ್ದ ಮಯಾಂಕ್, ಮುಂಬೈನ ವಾಂಖೆಡೆಯಲ್ಲಿ ಅಕ್ಷರಶಃ ಕಿವೀಸ್​ ಬೌಲರ್​ಗಳನ್ನ ಬೆಂಡಿತ್ತಿದ್ದರು. ಅದರಲ್ಲೂ ಟೀಮ್ ಇಂಡಿಯಾದ ದಿಗ್ಗಜ ಆಟಗಾರರು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಸೇರಿದಾಗ ತಂಡಕ್ಕೆ ಆಸರೆಯಾದ ಮಯಾಂಕ್, ಟರ್ನಿಂಗ್ ಟ್ರ್ಯಾಕ್​ನಲ್ಲಿ ಮಾಸ್ಟರ್​ ಕ್ಲಾಸ್​ ಇನ್ನಿಂಗ್ಸ್​ ಕಟ್ಟಿದರು.. ಬ್ಯಾಟಿಂಗ್ ದರ್ಬಾರ್​​ ನಡೆಸಿದ ಮಯಾಂಕ್, 196 ಎಸೆತಗಳಲ್ಲಿ ಶತಕ ಪೂರೈಸಿ ಸಂಭ್ರಮಿಸಿದರು.. ಈ ಅದ್ಬುತ ಇನ್ನಿಂಗ್ಸ್​ನಲ್ಲಿ 14 ಬೌಂಡರಿ, 04 ಸಿಕ್ಸರ್​ ಒಳಗೊಂಡಿರುವುದು ವಿಶೇಷ.

ಎರಡು ವರ್ಷಗಳ ಬಳಿಕ ಶತಕ ಸಿಡಿಸಿದ ಕನ್ನಡಿಗ
2019ರ ನವೆಂಬರ್​ನಲ್ಲಿ​ ಬಾಂಗ್ಲಾ ವಿರುದ್ದ ದ್ವಿಶತಕ ಸಿಡಿಸಿದ್ದ ಮಯಾಂಕ್, ಈ ಬಳಿಕ ಆಡಿದ್ದ 14 ಇನ್ನಿಂಗ್ಸ್​ಗಳಲ್ಲಿ ರನ್​ಬರ ಎದುರಿಸಿದ್ದರು. ಆದ್ರೆ, ನಿನ್ನೆಯ ತಂಡದಲ್ಲಿ ಆಡುವ ಅದೃಷ್ಟ ಪಡೆದ ಮಯಾಂಕ್, 2 ವರ್ಷಗಳ ಬಳಿಕ ಶತಕ ಸಿಡಿಸಿ ಮಿಂಚಿದರು.

ಟೀಕಾಕಾರರಿಗೆ ಮಯಾಂಕ್ ಶತಕದ ಉತ್ತರ..!
ಯೆಸ್..! ಸಿಕ್ಕ ಸಿಕ್ಕ ಅವಕಾಶ ಕೈಚೆಲ್ಲಿದ್ದ ಮಯಾಂಕ್​​​​, ಕಾನ್ಪುರದ ಟೆಸ್ಟ್​ನಲ್ಲೂ ವೈಫಲ್ಯ ಅನುಭವಿಸಿದ್ದರು. ಇದರೊಂದಿಗೆ ನಿನ್ನೆಯ ಆಡುವ ಹನ್ನೊಂದರಲ್ಲಿ ಹೊರಗುಳಿಯುವ ಆತಂಕಕ್ಕೆ ಸಿಲುಕಿದ್ದರು. ಆದ್ರೆ, ಪ್ರಮುಖ ಆಟಗಾರ ರಹಾನೆ, ಇಂಜುರಿಯಿಂದ ಅವಕಾಶ ಪಡೆದ ಮಯಾಂಕ್, ತಂಡದಿಂದ ಕೈಬಿಡುವಂತೆ ಟೀಕಿಸಿದ್ದವರಿಗೆ ಶತಕದ ಉತ್ತರ ನೀಡಿದ್ದಾರೆ.

ಮಯಾಂಕ್ ಪ್ರದರ್ಶನ

  • ಎಸೆತ 246
  • ರನ್ 120
  • 4/6 14/4
  • ಸ್ಟ್ರೈಕ್​ರೇಟ್​ 48.78

ಶತಕ ಸಿಡಿಸಿದ್ರೂ ತಂಡದಲ್ಲೇ ಉಳಿದುಕೊಳ್ತಾರಾ ಮಯಾಂಕ್​..?
ಅದೃಷ್ಟದ ಅವಕಾಶವನ್ನ ಮಯಾಂಕ್ ಎರಡು ಕೈಗಳಿಂದ ಬಾಂಚಿಕೊಂಡಿದ್ದಾರೆ. ಇದರಿಂದಾಗಿ ಮುಂದಿನ ಸಿರೀಸ್​ನಲ್ಲಿ ತಂಡದಲ್ಲಿ ಸ್ಥಾನ ಉಳಿದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದ್ರೆ, ಈಗಾಗಲೇ ಆರಂಭಿಕರಾಗಿ ರೋಹಿತ್-ರಾಹುಲ್ ಸಾಲಿಡ್ ಪರ್ಫಾಮೆನ್ಸ್ ನೀಡಿದ್ದಾರೆ.

ಮತ್ತೊಂದೆಡೆ ಶುಭ್​ಮನ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡಿರುವ ಮಯಾಂಕ್, ವೈಫಲ್ಯ ಕಾಣುತ್ತಿರುವ ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರಗೆ ಸಂಕಷ್ಟಕ್ಕೆ ದೂಡಿರೋದಂತು ಪಕ್ಕ. ಇದು ಸೆಲೆಕ್ಷನ್ ಕಮಿಟಿಯನ್ನೂ ಇಕ್ಕಟ್ಟಿಗೆ ದೂಡಿರೋದು ಸುಳ್ಳಲ್ಲ.

News First Live Kannada


Leave a Reply

Your email address will not be published. Required fields are marked *