2 ವರ್ಷದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುದೀಪ್​ ಅಭಿಮಾನಿ ಸಾವು.. HDK ಕಂಬನಿ


ಮರದ ಕೊಂಬೆ ಬಿದ್ದು 2 ವರ್ಷದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕಿಚ್ಚನ ಅಭಿಮಾನಿ ಬಾಲಕಿ ರೆಚೆಲ್ ಪ್ರಿಷಾ ಕೊನೆಯುಸಿರೆಳೆದಿದ್ದಾಳೆ. ಮುದ್ದು ಕಂದಮ್ಮ ಸಾವಿಗೆ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಈ ನಡುವೆ ರೆಚೆಲ್ ಪ್ರಿಷಾ ಸಾವಿಗೆ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಟ್ವೀಟ್​​ ಮಾಡಿ ಸಂತಾಪ ಸೂಚಿಸಿದ್ದಾರೆ.

ಒಣ ಮರದ ಕೊಂಬೆ ತಲೆಯ ಮೇಲೆ ಬಿದ್ದು ಗಾಯಗೊಂಡು 702 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ರೆಚೆಲ್ ಪ್ರಿಷಾ ಇಂದು ಉಸಿರು ಚೆಲ್ಲಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಆ ಮಗು ಬದುಕಿ ಬರುತ್ತಾಳೆ ಎಂಬ ನಿರೀಕ್ಷೆ ನನ್ನದಾಗಿತ್ತು ಎಂದು ಟ್ವೀಟ್​ ಮಾಡಿದ್ದಾರೆ ಎಚ್​ಡಿಕೆ.

ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕ್ಷೇಮ ವಿಚಾರಿಸಿದ್ದೆ. ಕೆಲ ಸಮಯ ಮಗುವಿನ ಜತೆಯಲ್ಲೇ ಸಮಯ ಕಳೆದಿದ್ದೆ. ಸತತ ಎರಡು ವರ್ಷ ನಿರಂತರವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ರಚೆಲ್ ಅಗಲಿಕೆ ಸಹಿಸಲು ನನಗೆ ಆಗುತ್ತಿಲ್ಲ. ಆ ಕಂದಮ್ಮನಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ. ಇಷ್ಟು ದೀರ್ಘಕಾಲ ಮಗು ಮನೆಗೆ ಬರುತ್ತಾಳೆ ಎಂದು ನಂಬಿ ಪರಿತಪಿಸಿದ್ದ ತಂದೆ-ತಾಯಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಇನ್ನಾದರೂ ಈ ಬಗೆಯ ಸಾವುಗಳು ನಿಲ್ಲಲಿ ಹಾಗೂ ಬಿಬಿಎಂಪಿಯ ಇಂಥ ನಿರ್ಲಕ್ಷ್ಯ ಮರುಕಳಿಸುವುದು ಬೇಡ ಎಂದು ಬರೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published.