ಕೊಡಿಗೆಹಳ್ಳಿ ಠಾಣೆ
ಬೆಂಗಳೂರು: ಪ್ರಿಯಕರನ ಮೇಲೆ ಪ್ರಿಯತಮೆ ಹಲ್ಲೆ ಮಾಡಿಸಿದ ಘಟನೆ ಬೆಂಗಳೂರಿನ ಸಹಕಾರನಗರದಲ್ಲಿ ನಡೆದಿದೆ. ಪ್ರಿಯಕರ ಸಂತೋಷ್(23) ಮನೆಗೆ ನುಗ್ಗಿ ಯುವತಿಯ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್, 2 ವರ್ಷದಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಕಾರಣ ಹೇಳದೆ ಯುವತಿ ಇತ್ತೀಚೆಗೆ ಬ್ರೇಕಪ್ ( Love Breakup) ಮಾಡಿದ್ದಳು. ಆದರೆ ಸಂತೋಪ್ ಪದೇ ಪದೇ ಕರೆ ಮಾಡಿ ಟಾರ್ಚರ್ ಕೊಡುತ್ತಿದ್ದ. ಹೀಗಾಗಿ ಬುದ್ಧಿ ಕಲಿಸಬೇಕೆಂದು ತನ್ನ ಸ್ನೇಹಿತನಿಗೆ ತಿಳಿಸಿದ್ದ ಯುವತಿ ನ.16ರ ರಾತ್ರಿ ಸಂತೋಷ್ ಇದ್ದ ಮನೆಯ ಮೇಲೆ ದಾಳಿ ಮಾಡಿಸಿದ್ದಾಳೆ.
ಮನೆಗೆ ನುಗ್ಗಿ ಸಂತೋಷ್ ಮೇಲೆ ದಾಳಿ ಮಾಡಿದ್ದ ಯುವಕರ ಗುಂಪು, ಹಲ್ಲೆ ನಡೆಸಿ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಹೀಗಾಗಿ ಕೊಡಿಗೆಹಳ್ಳಿ ಠಾಣೆಗೆ ಸಂತೋಷ್ ದೂರು ನೀಡಿದ್ದು, ಪೊಲೀಸರು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಪ್ರಕರಣದ ಅಸಲಿಯತ್ತು ಬಯಲಾಗಿದೆ.
ಇದನ್ನೂ ಓದಿ:
ಕೊಡಿಗೆಹಳ್ಳಿಯಲ್ಲಿ ಯುವಕನ ಮೇಲೆ ಹಲ್ಲೆ; ಪ್ರಭಾತ್ ಶಾಖೆ ಮುಚ್ಚುವಂತೆ ದುಷ್ಕರ್ಮಿಗಳಿಂದ ಧಮ್ಕಿ
Crime Update: ಊಟ ಖಾಲಿ ಎಂದಿದ್ದಕ್ಕೆ ಚಾಕು ಇರಿತ, ಬೈಕ್ಗಳು ಮುಖಾಮುಖಿ ಇಬ್ಬರು ಸಾವು, ಪ್ರಿಯಕರನಿಂದ ಯುವತಿಯ ಹತ್ಯೆ