ಶಿವಕುಮಾರ್ ಸುಬ್ರಮಣಿಯಂ
ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದ ನಟ ಶಿವಕುಮಾರ್ ಸುಬ್ರಮಣಿಯಂ (Shiv Kumar Subramaniam) ಅವರು ನಿಧನರಾಗಿದ್ದಾರೆ. ಸೋಮವಾರ (ಏ.11) ಮುಂಜಾನೆ ಅವರ ಮರಣದ ಸುದ್ದಿ ಕೇಳಿ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ವಿಪರ್ಯಾಸ ಎಂದರೆ, ಕೇವಲ ಎರಡು ತಿಂಗಳ ಹಿಂದೆ ಶಿವಕುಮಾರ್ ಶಿವಸುಬ್ರಮಣಿಯಂ ಅವರು ಮಗನನ್ನು ಕಳೆದುಕೊಂಡಿದ್ದರು. ಕ್ಯಾನ್ಸರ್ನಿಂದ (Cancer) ಅವರ ಪುತ್ರನ ಸಾವು ಸಂಭವಿಸಿತ್ತು. ಆ ನೋವು ಮಾಸುವ ಮುನ್ನವೇ ಶಿವಕುಮಾರ್ ಶಿವಸುಬ್ರಮಣಿಯಂ ಕೊನೆಯುಸಿರು ಎಳೆದಿರುವುದು (Shiv Kumar Subramaniam Death) ಇಡೀ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ‘2 ಸ್ಟೇಟ್ಸ್’, ‘ಮೀನಾಕ್ಷಿ ಸುಂದರೇಶ್ವರ್’, ‘ನೇಲ್ ಪಾಲಿಶ್’, ‘ಹಿಚ್ಕಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕಥೆ ಮತ್ತು ಚಿತ್ರಕಥೆ ಬರಹಗಾರರಾಗಿಯೂ ಅವರು ಗುರುತಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…