ನವದೆಹಲಿ: ಭಾರತದ ಸ್ವದೇಶಿ ಕೋವ್ಯಾಕ್ಸಿನ್​ ಲಸಿಕೆಯನ್ನ ಎರಡು ಮತ್ತು ಮೂರನೇ ಹಂತದ ಕ್ಲೀನಿಕಲ್​ ಟ್ರಯಲ್​​ನಲ್ಲಿ 2 ರಿಂದ 18 ವರ್ಷ ವಯಸ್ಸಿನವರ ಮೇಲೆ ಪ್ರಯೋಗ ಮಾಡಲು, ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನ 18 ವರ್ಷ ಮೇಲ್ಪಟ್ಟವರಿಗೆ ನೀಡಲು ಈಗಾಗಲೇ ತುರ್ತು ಬಳಕೆ ಅನುಮತಿ ಸಿಕ್ಕಿದೆ. ಈಗ ಮಕ್ಕಳ ಮೇಲೆ ಲಸಿಕೆಯ ಪರಿಣಾಮಕಾರಿತ್ವವನ್ನ ತಿಳಿದುಕೊಳ್ಳಲು ಟ್ರಯಲ್ ನಡೆಸಲಾಗುತ್ತದೆ. ದೆಹಲಿ ಮತ್ತು ಪಾಟ್ನಾದ ಏಮ್ಸ್​ ಹಾಗೂ ನಾಗ್​ಪುರ್​ನ ಮೆಡಿಟ್ರಿನಾ ಇನ್ಸ್​​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​ ಸೇರಿದಂತೆ ವಿವಿಧ ಸ್ಥಳಗಳಲ್ಲಿ 525 ಮಂದಿ ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ ಎಂದು ವರದಿಯಾಗಿದೆ.

2ರಿಂದ 18 ವರ್ಷ ನಡುವಿನ ವಯಸ್ಸಿನವರ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಪ್ರತಿಕ್ರಿಯಾತ್ಮಕತೆ ಮತ್ತು ಪ್ರತಿರೋಧಕ ಶಕ್ತಿಯನ್ನ ತಿಳಿದುಕೊಳ್ಳಲು ಎರಡು/ಮೂರನೇ ಹಂತದ  ಪ್ರಯೋಗ ನಡೆಸಲು ಅನುಮತಿ ಕೋರಿ ಭಾರತ್​ ಬಯೋಟೆಕ್​ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ನಿನ್ನೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್​​(CDSCO)ದ ಕೊರೊನಾ ಕುರಿತ ವಿಷಯ ತಜ್ಞರ ಸಮಿತಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಸಂಸ್ಥೆಗೆ ಅನುಮತಿ ನೀಡಿದೆ ಅಂತ ತಿಳಿದುಬಂದಿದೆ.

ಇನ್ನು ಮೂರನೇ ಹಂತದ ಕ್ಲೀನಿಕಲ್ ಟ್ರಯಲ್ ಅರಂಭಿಸೋ ಮುನ್ನ, ಭಾರತ್ ಬಯೋಟೆಕ್ ಸಂಸ್ಥೆ ಎರಡನೇ ಹಂತದ ಪ್ರಯೋಗದ ಮಧ್ಯಂತರ ಸೇಫ್ಟಿ ಡೇಟಾವನ್ನು DSMB ಶಿಫಾರಸ್ಸಿನೊಂದಿಗೆ CDSCOಗೆ ಒದಗಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

The post 2-18 ವರ್ಷ ವಯಸ್ಸಿನವರ ಮೇಲೆ ಕೋವ್ಯಾಕ್ಸಿನ್ ಲಸಿಕೆ ಕ್ಲೀನಿಕಲ್ ಟ್ರಯಲ್​ಗೆ ಅನುಮತಿ appeared first on News First Kannada.

Source: newsfirstlive.com

Source link