2.75 ಕೋಟಿ ವರ್ಷಕ್ಕೊಮ್ಮೆ ಭೂಮಿಯ ಹೃದಯಬಡಿತ: ಹೀಗಾದಾಗ್ಲೆಲ್ಲ ಸಂಭವಿಸಿದೆ ಭಾರೀ ಅನಾಹುತ

2.75 ಕೋಟಿ ವರ್ಷಕ್ಕೊಮ್ಮೆ ಭೂಮಿಯ ಹೃದಯಬಡಿತ: ಹೀಗಾದಾಗ್ಲೆಲ್ಲ ಸಂಭವಿಸಿದೆ ಭಾರೀ ಅನಾಹುತ

ಭೂಮಿ ಮೇಲಿನ ಪ್ರತಿಯೊಂದು ಜೀವಕ್ಕೂ ಹೃದಯ ಇರುತ್ತದೆ.. ಮತ್ತು ಈ ಹೃದಯಬಡಿತದ ಆಧಾರದ ಮೇಲೆ ಮನುಷ್ಯ ಬದುಕಿದ್ದಾನೋ ಇಲ್ಲವೋ ಎಂಬುದನದನ ನಿಖರಪಡಿಸಿಕೊಳ್ಳಲಾಗುತ್ತದೆ. ಹೃದಯ ರಕ್ತವನ್ನ ಶುದ್ಧೀಕರಿಸಿ ನರಗಳ ಮೂಲಕ ದೇಹದ ಎಲ್ಲ ಭಾಗಗಳಿಗೂ ರವಾನೆ ಮಾಡುತ್ತದೆ. ಹೀಗೆ ರಕ್ತಗಳ ಮೂಲಕ ಹರಿಯುವ ನಾಡಿಮಿಡಿತದ ಮೂಲಕವೂ ಹೃದಯದ ಕಾರ್ಯವನ್ನ ಅಳೆಯಲಾಗುತ್ತದೆ.

ಈ ನಾಡಿಮಿಡಿತ ನಮ್ಮನ್ನು ಅಸ್ತಿತ್ವದಲ್ಲಿರುವ ಭೂಮಿಯಲ್ಲೂ ಇದೆ ಅಂದ್ರೆ ನೀವು ನಂಬಲೇಬೇಕು. ಇದನ್ನ ಇತ್ತೀಚೆಗೆ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಭೂಮಿಗೆ ನಾಡಿಮಿಡಿತ ಇದೆ ಎನ್ನುವುದಕ್ಕಿಂತಲೂ ಈ ನಾಡಮಿಡಿತದ ಅಂತರ ಅಚ್ಚರಿ ಮೂಡಿಸುವಂಥದ್ದು. ಯಾಕಂದ್ರೆ ಭೂಮಿ ನಾಡಿ ಮಿಡಿಯುವುದು ಬರೋಬ್ಬರಿ 2.75 ಕೋಟಿ ವರ್ಷಗಳಿಗೊಮ್ಮೆಯಂತೆ.

ಇನ್ನು ಹೀಗೆ ಪ್ರತಿಬಾರಿ ಭೂಮಿಯ ನಾಡಿ ಮಿಡಿದಾಗಲೂ ಘೋರನಾಶವೇ ನಡೆದುಹೋಗಿವೆ ಎಂದು ಅಂದಾಜಿಸಲಾಗಿದೆ. ಭೂಕಂಪ, ಮಹಾಮಳೆ, ಭೂ ಸ್ಫೋಟಕ ಹೀಗೆ ಯಾವ ರೂಪದಲ್ಲಿ ಬೇಕಾದರೂ ವಿನಾಶ ಸಂಭವಿಸಬಹುದು ಎನ್ನಲಾಗಿದೆ. ಇನ್ನು ಈ ಘಟನೆಗಳಿಂದ ಜ್ವಾಲಾಮುಖಿ ಸಿಡಿಯುವುದು, ಭಾರೀ ಸಿಡಿಲುಗಳ ಜೊತೆಗೆ ಧಾರಾಕಾರ ಮಳೆ ಸುರಿಯುವುದು, ಸಮುದ್ರ ಮಟ್ಟದಲ್ಲಿ ಏಕೆ ಕಾಣುವುದು ಹೀಗೆ ಹಲವು ಬಗೆಯ ಗಂಡಾಂತರಗಳು ಘಟಿಸಿ ಎಷ್ಟೋ ಜೀವಿಗಳು ಸಂಪೂರ್ಣ ನಾಶವಾಗಲು ಭೂಮಿಯ ನಾಡಿ ಮಿಡಿತ ಕಾರಣವಾಗಿದೆ ಎಂದು ಹೇಳಲಾಗಿದೆ.

ಡೈನೋಸಾರ್​ಗಳ ಅವನತಿ ಇಂಥ ಮಹಾವಿನಾಶಕ್ಕೆ ಉದಾಹರಣೆ ಎನ್ನುತ್ತಾರೆ ವಿಜ್ಞಾನಿಗಳು.. ಕೋಟ್ಯಂತರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಡೈನೋಸಾರ್​ಗಳು ಇದ್ದಕ್ಕಿದ್ದಂತೆ ನಶಿಸಿ ಹೋಗಿದ್ದಕ್ಕೆ ಮಹಾ ಉಲ್ಕೆಯೊಂದು ಭೂಮಿಗೆ ಬಡಿದದ್ದೇ ಕಾರಣ ಎಂದು ಅಂದಾಜಿಸಲಾಗಿದೆ. ಈ ವಿನಾಶ ಸಂಭವಿಸಿದಾಗಲೂ ಭೂಮಿಯ ನಾಡಿ ಮಿಡಿದಿತ್ತಂತೆ.

ಸದ್ಯ ಈ ಬಗ್ಗೆ ಅಮೆರಿಕಾದ ನ್ಯೂಯಾರ್ಕ್ ಯೂನಿವರ್ಸಿಟಿಯಿಂದ ಮಾಹಿತಿ ಹೊರಬಿದ್ದಿದ್ದು ಮೈಖೆಲ್ ರಾಂಪಿನೋ ನೇತೃತ್ವದ ವಿಜ್ಞಾನಿಗಳ ತಂಡದಿಂದ ಸಂಶೋಧನೆಗಳು ನಡೆಯುತ್ತಿವೆ. ಬರೋಬ್ಬರಿ 89 ಭೂ ಬದಲಾವಣೆ ಘಟನೆ ಆಧರಿಸಿ ವರದಿಯೊಂದನ್ನೂ ತಯಾರಿಸಿದ್ದಾರೆ.

The post 2.75 ಕೋಟಿ ವರ್ಷಕ್ಕೊಮ್ಮೆ ಭೂಮಿಯ ಹೃದಯಬಡಿತ: ಹೀಗಾದಾಗ್ಲೆಲ್ಲ ಸಂಭವಿಸಿದೆ ಭಾರೀ ಅನಾಹುತ appeared first on News First Kannada.

Source: newsfirstlive.com

Source link