20 ಕೆಜಿ ತೂಕ ಇಳಿಸಿಕೊಂಡು ನಾನೀಗ ಮತ್ತಷ್ಟು ‘ಬ್ಯೂಟಿ’ ಅಂದ್ರು ಖುಷ್ಬೂ..!


ಬಹುಭಾಷಾ ನಟಿ, ಖುಷ್ಬೂ ಸುಂದರ್​ ಬರೋಬರಿ 20 ಕೆ. ತೂಕ ಇಳಿಸಿಕೊಂಡು ಸಖತ್​ ಸ್ಲಿಮ್​ ಆಗಿದ್ದಾರೆ. 80, 90ರ ದಶಕದ ಟಾಪ್​ ನಟಿಮಣಿಯಾಗಿದ್ದ ಖುಷ್ಬೂ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸದೆ ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.

 

ಕಳೆದ ಕೆಲ ದಿನಗಳ ಹಿಂದೆ ಸುಮಾರು 14 ಕೆ. ಜಿ ದೇಹದ ತೂಕವನ್ನು ಇಳಿಸಿಕೊಂಡು ಸುದ್ದಿಯಾಗಿದ ಖುಷ್ಬೂ ಮತ್ತಷ್ಟು ಹೆಚ್ಚು ವರ್ಕೌಟ್​ ಮಾಡಿ ಸುಮಾರು 6 ಕೆ.ಜಿ ತೂಕವನ್ನು ಮತ್ತೆ ಇಳಿಸಿಕೊಂಡಿದ್ದಾರೆ. ಸದ್ಯ 20 ಕೆ. ಜಿ ತೂಕ ಇಳಿಸಿಕೊಂಡ ಖುಷ್ಬೂ ತಮ್ಮ ಹಳೆಯ ಫೋಟೋ ಮತ್ತು ತಾವು ಸ್ಲಿಮ್​ ಆಗಿರುವ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ತಾವು ಸ್ಲಿಮ್ ಆಗಲು ಯಾವೆಲ್ಲ ಕ್ರಮಗಳನ್ನು ಅನುಸರಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದಾರೆ.

“ನಾನು ಅಲ್ಲಿಂದ ಇಲ್ಲಿಯವರೆಗೆ ಸುಮಾರು 20 ಕೆ.ಜಿ ತೂಕವನ್ನು ಇಳಿಸಿಕೊಂಡು ತುಂಬಾ ಆರೋಗ್ಯಕರವಾಗಿದ್ದೇನೆ. ಮೊದಲು ನೀವು ನಿಮ್ಮನು ನೋಡಿಕೊಳ್ಳಿ. ಆರೋಗ್ಯವೇ ಭಾಗ್ಯ. ನನ್ನ ಆರೋಗ್ಯ ಸರಿ ಇಲ್ಲವೇ ಅಂತ ಕೆಲವರು ಪ್ರಶ್ನೆ ಮಾಡುತ್ತಿದ್ದರು. ನಿಮ್ಮ ಕಾಳಜಿಗೆ ಧನ್ಯವಾದಗಳು. ಈ ಹಿಂದೆ ಯಾವಾಗಲೂ ನಾನು ಇಷ್ಟು ಫಿಟ್​ ಆಗಿರಲಿಲ್ಲ. ನೀವು ತೂಕವನ್ನು ಇಳಿಸಿಕೊಂಡನ್ನು ನೋಡಿ.. ಕನಿಷ್ಠ 10 ಜನರು ತೂಕವನ್ನ ಇಳಿಸಿಕೊಂಡು ಫಿಟ್​ ಆದರೆ, ನಾನು ಗೆದ್ದಿದ್ದೇನೆ ಅಂತ ಬರೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *