ಹಿರಿಯ ರಂಗಕರ್ಮಿ, ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಪೋಷಕ ನಟ ಕೃಷ್ಣೇ ಗೌಡರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದೇ ಸಂದರ್ಭ ಕೃಷ್ಣೇ ಗೌಡರ ಪುತ್ರ ಇಪ್ಪತ್ತು ದಿನಗಳ ಹಿಂದಷ್ಟೇ ಕೊರೊನಾದಿಂದ ನಿಧನರಾಗಿದ್ದರು ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಆದರೆ ವಿಪರ್ಯಾಸವೋ ಏನೋ.. ಈ ವಿಚಾರ ನಟ ಕೃಷ್ಣೇ ಗೌಡ ಅವರಿಗೆ ತಮ್ಮ ಕೊನೆಯ ಕ್ಷಣದವರೆಗೂ ಗೊತ್ತೇ ಆಗಲಿಲ್ಲ.

ತಿಂಗಳ ಹಿಂದೆ ಕೃಷ್ಣೇ ಗೌಡರಿಗೆ ಕೊರೊನಾ ಪಾಸಿಟಿವ್​ ದೃಢವಾಗಿದ್ದು, ಅದರಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ವಾಪಾಸಾಗಿದ್ದರು. ನಂತರ ಕಾಣಿಸಿಕೊಂಡ ಶ್ವಾಸಕೋಶದ ಇನ್ಫೆಕ್ಷನ್ ಇವರನ್ನ ಐಸಿಯುಗೆ ಸೇರುವಂತೆ ಮಾಡಿತ್ತು. ಕೃಷ್ಣೇ ಗೌಡರು ಐಸಿಯು ಸೇರಿದ ಸಂದರ್ಭದಲ್ಲೇ ಮಗನನ್ನ ಕಳೆದುಕೊಂಡಿದ್ದರು. ಆದರೆ ಈ ಬಗ್ಗೆ ಕೃಷ್ಣೇ ಗೌಡರಿಗೆ ಕೊನೆಯವರೆಗೂ ತಿಳಿಯಲೇ ಇಲ್ಲ. ಕೊರೊನಾದಿಂದ ಗುಣಮುಖರಾಗಿದ್ದರೂ ಕೂಡ, ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಟ ಮುಖ್ಯಮಂತ್ರಿ ಚಂದ್ರು ಈ ಬಗ್ಗೆ ತಿಳಿಸಿದ್ದು, ಸ್ನೇಹಿತನನ್ನ ಕಳೆದುಕೊಂಡ ದುಃಖ ಹಂಚಿಕೊಂಡಿದ್ದಾರೆ. ಕೃಷ್ಣೇ ಗೌಡರು ಮುಖ್ಯಮಂತ್ರಿ ಚಂದ್ರು ಅವರ ನಾಟಕ ಸಂಸ್ಥೆಯಲ್ಲೂ ನಟನೆ ನಿಲ್ಲಿಸುವವರೆಗೂ ಕೆಲಸ ಮಾಡಿದ್ದರು. ಹಲವಾರು ನಾಟಕಗಳು, ಖ್ಯಾತ ಧಾರಾವಾಹಿಗಳು, ಬಹಳಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಕೃಷ್ಣೇ ಗೌಡರು ಕಳೆದ ಮೂರು-ನಾಲ್ಕು ವರ್ಷಗಳವರೆಗೂ ನಟನೆಯಲ್ಲಿ ತೊಡಗಿಸಿಕೊಂಡಿದ್ದರು.

The post 20 ದಿನಗಳ ಹಿಂದೆ ಮಗ ಕೊರೊನಾಕ್ಕೆ ಬಲಿ.. ಅದು ಗೊತ್ತಾಗೋ ಮೊದಲೇ ಜೀವ ಬಿಟ್ಟ ಹಿರಿ ಜೀವ appeared first on News First Kannada.

Source: newsfirstlive.com

Source link