200 ಕೋಟಿ ರೂ. ವಂಚನೆ ಕೇಸ್​; ‘ರಕ್ಕಮ್ಮ’ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಿಕ್ತು ಮಧ್ಯಂತರ ಜಾಮೀನು | Jacqueline Fernandez gets interim bail in 200 Cr extortion case involving Sukesh Chandrashekar


ಸುಕೇಶ್​ ಚಂದ್ರಶೇಖರ್​ ಸಹವಾಸ ಮಾಡಿದ್ದರಿಂದ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಈ ಕೇಸ್​ನಲ್ಲಿ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.

200 ಕೋಟಿ ರೂ. ವಂಚನೆ ಕೇಸ್​; ‘ರಕ್ಕಮ್ಮ’ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಿಕ್ತು ಮಧ್ಯಂತರ ಜಾಮೀನು

ಜಾಕ್ವೆಲಿನ್ ಫರ್ನಾಂಡಿಸ್

TV9kannada Web Team

| Edited By: Madan Kumar

Sep 26, 2022 | 11:02 AM
ಖ್ಯಾತ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ವಂಚನೆ ಕೇಸ್​ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಬಂಧನ ಭೀತಿಯಲ್ಲಿ ಇರುವ ಅವರು ಸದ್ಯಕ್ಕೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ. ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪವನ್ನು ಸುಕೇಶ್​ ಚಂದ್ರಶೇಖರ್​ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕ ಹೊಂದಿದ್ದ ಕಾರಣದಿಂದ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಅನೇಕ ಬಾರಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.