ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆಲುವು ಸಾಧಿಸಿದ್ದಾರೆ.

ಸತೀಶ್ ಜಾರಕಿಹೊಳಿ ಸೋಲಿನ ವಿಚಾರವನ್ನ ಫೋನ್ ಮೂಲಕ ತಿಳಿದುಕೊಂಡ ಸಿದ್ದರಾಮಯ್ಯ ಕೆಲಕಾಲ ಸಪ್ಪಗೆ ಕುಳಿತಿದ್ದದ್ದು ಕಂಡುಬಂತು. 2,000 ಚಿಲ್ಲರೆ ವೋಟಿಂದ ಸೋತ್ಬಿಟ್ನಂತಲ್ಲ ಎಂದು ಪಕ್ಕದಲ್ಲಿದ್ದವರಿಗೆ ಹೇಳಿದ ಸಿದ್ದರಾಮಯ್ಯ ಕೆಲಕಾಲ ಸಪ್ಪಗೆ ಕೂತುಬಿಟ್ಟರು.

ನಂತರ ಯಾರೊಂದಿಗೋ ಫೋನ್​ನಲ್ಲಿ ಮಾತನಾಡುತ್ತಾ.. ಹೌದು ಭಾಳಾ ಅನ್ಯಾಯ.. ಕೊನೆವರೆಗೂ ಇದ್ದ ಪಾಪ ಲೀಡ್​ನಲ್ಲಿ.. ಕೊನೆ ಐದಾರು ರೌಂಡ್​ನಲ್ಲಿ ಹೋಗ್ಬಿಡ್ತು. ಒಳ್ಳೆದಾಯ್ತು ಅಷ್ಟು ಲೀಡ್ ಬರ್ತದೆ ಅಂತ ನಾವು ಲೆಕ್ಕ ಹಾಕಿರ್ಲಿಲ್ಲ ಎಂದು ತಮ್ಮ ಬೇಸರ ಹಂಚಿಕೊಂಡರು.

The post 2,000 ಚಿಲ್ಲರೆ ವೋಟಿಂದ ಸೋತ್ಬಿಟ್ನಂತಲ್ಲ.. ಸತೀಶ್ ಸೋಲಿನ ಸುದ್ದಿ ಕೇಳಿ ಸಪ್ಪಗೆ ಕುಳಿತ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link