2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಹೀಗೆ ಸಂಭ್ರಮಿಸಿದ್ದ ಯುವಕನೇ ಈಗ ಟ್ವಿಟರ್​ CEO


ನವದೆಹಲಿ: ಭಾರತೀಯ ಪರಾಗ್ ಅಗರ್ವಾಲ್ ಟ್ವಿಟರ್​ ಲೋಕದ ಅಧಿಪತಿ ಸ್ಥಾನವನ್ನ ಅಲಂಕರಿಸಿದ್ದಾರೆ. ಐಐಟಿ ಬಾಂಬೆಯಲ್ಲಿ ಬ್ಯಾಚೂಲರ್ ಪದವಿ ಪಡೆದು, Stanford ವಿವಿಯಲ್ಲಿ PhD ಪಡೆದು ಕೊಂಡು 2011ರಿಂದ ಟ್ವಿಟರ್​ನಲ್ಲಿ ಕೆಲಸ ಮಾಡ್ತಿದ್ದ ಪರಾಗ್ ಇಂದು ಸಿಒಓ ಆಗಿ ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಯಾವಾಗ ಪರಾಗ್ ಟ್ವಿಟರ್​ ಸಂಸ್ಥೆಯ ಸಿಇಓ ಆಗಿದ್ದಾರೆ ಅನ್ನೋ ಸುದ್ದಿ ಹೊರ ಬಿತ್ತೋ, ಆಗಲೇ ಅವರಿಗೆ ಸಂಬಂಧಿಸಿದ ಒಂದಿಷ್ಟು ಕುತೂಹಲಕಾರಿ ವಿಷಯಗಳು ಒಂದೊಂದೆಯಾಗಿ ಹೊರ ಬರುತ್ತಿವೆ. ಅಂತೆಯೇ ಪರಾಗ್ ಭಾರತ ತಂಡದ ಕ್ರಿಕೆಟ್ ಅಭಿಮಾನಿ ಅನ್ನೋದು ಕೂಡ ಈಗ ತಿಳಿದುಬಂದಿದೆ. 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಪಂದ್ಯ ಗೆದ್ದಾಗ ವಿಜಯೋತ್ಸವ ಆಚರಿಸುತ್ತಿರುವ ಒಂದೆರಡು ಫೋಟೋಗಳು ವೈರಲ್ ಆಗಿವೆ.

ಇದನ್ನೂ ಓದಿ: BIG BREAKING: ಟ್ವಿಟರ್​​​ ಸಿಇಒ ಹುದ್ದೆ ತೊರೆದ ಜಾಕ್ ಡೋರ್ಸೆ; ಭಾರತದ ವ್ಯಕ್ತಿಗೆ ಈ ಸ್ಥಾನ

ಟೀಂ ಇಂಡಿಯಾದ ಜರ್ಸಿ ತೊಟ್ಟು ಭಾರತ ಧ್ವಜವನ್ನ ಹಿಡಿದು ಸಂಭ್ರಮಿಸುತ್ತಿರುವ ಫೋಟೋಗಳು ಅವಾಗಿದೆ. ಒಂದು ಪೋಸ್ಟ್​ನಲ್ಲಿ ಸಂಭ್ರಮಾಚರಣೆ ಎಂದು ಬರೆದುಕೊಂಡಿದ್ರೆ, ಇನ್ನೊಂದು ಪೋಸ್ಟ್​ನಲ್ಲಿ ಭಾರತಕ್ಕೆ ಶುಭಾಶಯ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಭಾರತೀಯ ಈಗ ಟ್ವಿಟರ್​​​ ದೊರೆ; ಸಿಇಒ ಆದ ಪರಾಗ್​​​​ ಅಗರವಾಲ್​​ ಯಾರು?

News First Live Kannada


Leave a Reply

Your email address will not be published. Required fields are marked *