2017ರಿಂದ 6 ಲಕ್ಷಕ್ಕೂ ಹೆಚ್ಚು ಭಾರತೀಯರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ: ಸರ್ಕಾರ | Over 6 lakh Indians gave up Indian citizenship since 2017 government informed Parliament Tuesday


2017ರಿಂದ 6 ಲಕ್ಷಕ್ಕೂ ಹೆಚ್ಚು ಭಾರತೀಯರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ: ಸರ್ಕಾರ

ನಿತ್ಯಾನಂದ ರಾಯ್

ದೆಹಲಿ: 2017 ಮತ್ತು 30 ಸೆಪ್ಟೆಂಬರ್ 2021 ರ ನಡುವೆ 6 ಲಕ್ಷಕ್ಕೂ ಹೆಚ್ಚು ಭಾರತೀಯರು ಬೇರೆ ದೇಶಕ್ಕಾಗಿ ಭಾರತೀಯ ಪೌರತ್ವವನ್ನು (Indian citizenship) ತ್ಯಜಿಸಿದ್ದಾರೆ ಎಂದು ಸರ್ಕಾರ ಮಂಗಳವಾರ ಸಂಸತ್​​ಗೆ ತಿಳಿಸಿದೆ. 2017ರಲ್ಲಿ 1.33 ಲಕ್ಷ ಭಾರತೀಯರು ಪೌರತ್ವ ತ್ಯಜಿಸಿದ್ದರೆ 2018ರಲ್ಲಿ 1.34 ಲಕ್ಷ, 2019ರಲ್ಲಿ 1.44 ಲಕ್ಷ, 2020ರಲ್ಲಿ 85,248 ಮತ್ತು 2021ರಲ್ಲಿ 1.11 ಲಕ್ಷ  ಜನರು ಪೌರತ್ಮ ತ್ಯಜಿಸಿದ್ದಾರೆ ಎಂದು  ಲೋಕಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ (Nityanand Rai) ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಒಟ್ಟು 1,33,83,718 ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ರಾಯ್ ಹೇಳಿದ್ದಾರೆ.  2016 ಮತ್ತು 2020 ರ ನಡುವೆ 4,177 ಜನರಿಗೆ ಭಾರತೀಯ ಪೌರತ್ವವನ್ನು ಸಹ ನೀಡಲಾಗಿದೆ ಎಂದು ರೈ ಹೇಳಿದರು. ಇದೇ ಅವಧಿಯಲ್ಲಿ ಒಟ್ಟು 10,645 ಮಂದಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಇದರಲ್ಲಿ ಗರಿಷ್ಠ ಪಾಕಿಸ್ತಾನ (7,782), ಅಫ್ಘಾನಿಸ್ತಾನ (795), ಯುಎಸ್ (227), ಶ್ರೀಲಂಕಾ (205), ಬಾಂಗ್ಲಾದೇಶ (184), ನೇಪಾಳ (167) ಮತ್ತು ಕೀನ್ಯಾ (185) ನಂತರದ ಸ್ಥಾನದಲ್ಲಿವೆ.  2016 ರಲ್ಲಿ ಒಟ್ಟು 2,262 ಜನರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, 2017 ರಲ್ಲಿ 855, 2018 ರಲ್ಲಿ 1,758, 2019 ರಲ್ಲಿ 4,224 ಮತ್ತು 2020 ರಲ್ಲಿ 1,546 ಜನರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳು ಹೇಳುತ್ತವೆ.

ಪೌರತ್ವ (ತಿದ್ದುಪಡಿ) ಕಾಯಿದೆ (CAA) ಅಡಿಯಲ್ಲಿ ಅರ್ಹತೆ ಹೊಂದಿರುವ ಜನರು ನಿಯಮಗಳನ್ನು ಸೂಚಿಸಿದ ನಂತರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ರಾಯ್ ಲೋಕಸಭೆಗೆ ತಿಳಿಸಿದರು. ಮುಸ್ಲಿಂ ಬಹುಸಂಖ್ಯಾತ ನೆರೆಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ಭಾರತೀಯ ಪೌರತ್ವವನ್ನು ತ್ವರಿತವಾಗಿ ಪತ್ತೆಹಚ್ಚಲು ಸಿಎಎ ಪ್ರಯತ್ನಿಸುತ್ತದೆ.  ಸಿಎಎಯನ್ನು 12 ಡಿಸೆಂಬರ್ 2019 ರಂದು ಅಧಿಸೂಚನೆ ನೀಡಿದ್ದು   ಜನವರಿ 10, 2020 ರಿಂದ ಜಾರಿಗೆ ಬಂದರೂ ನಿಯಮಗಳನ್ನು ಸೂಚಿಸದ ಕಾರಣ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ರಾಷ್ಟ್ರೀಯ ಮಟ್ಟದಲ್ಲಿ ಎನ್‌ಆರ್‌ಸಿ ಬಗ್ಗೆ ಯಾವುದೇ ನಿರ್ಧಾರವಿಲ್ಲ
ರಾಷ್ಟ್ರೀಯ ನಾಗರಿಕರ ರಾಷ್ಟ್ರೀಯ ನೋಂದಣಿ (NRC) ಅನ್ನು ತಯಾರಿಸಲು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ರಾಯ್ ಹೇಳಿದ್ದಾರೆ. 20 ನವೆಂಬರ್ 2019 ರಂದು ಅಂದಿನ ಪೌರತ್ವ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಕಾರ್ಯದಲ್ಲಿದ್ದಾರೆ ಎಂದು ಹೇಳಿದ್ದರು. ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರ ಅಥವಾ ಸಂಸತ್ ಎನ್‌ಆರ್‌ಸಿ ಬಗ್ಗೆ ಚರ್ಚಿಸಿಲ್ಲ. “ಅದರ ಬಗ್ಗೆ ಯಾವುದೇ ಮಾತುಕತೆಗಳಿಲ್ಲ” ಎಂದು ಅವರು ಹೇಳಿದರು. ಸಿಎಎ ಅನ್ನು ಅಂಗೀಕರಿಸುವ ಸರ್ಕಾರದ ನಿರ್ಧಾರವು 2019 ರಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾಗಿತ್ತು.

ಇದನ್ನೂ ಓದಿ: Parliament Winter Session: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಶ್ಮೀರ, ಸಿಎಎ, ಎನ್ಆರ್‌ಸಿ ಬಗ್ಗೆ ಸಂಸದರಿಂದ ಪ್ರಶ್ನೆಗಳ ಸುರಿಮಳೆ

TV9 Kannada


Leave a Reply

Your email address will not be published. Required fields are marked *