2019ರ ನಂತರ ವಿದೇಶಗಳಲ್ಲಿ ಐವರ ಕಳಪೆಯಾಟ- ರಾಹುಲ್​, ಮಯಾಂಕ್ ಕೂಡ​ ಹಾಡಿದ್ದೇ ಹಾಡು

2019ರ ನಂತರ ವಿದೇಶಗಳಲ್ಲಿ ಐವರ ಕಳಪೆಯಾಟ- ರಾಹುಲ್​, ಮಯಾಂಕ್ ಕೂಡ​ ಹಾಡಿದ್ದೇ ಹಾಡು

ವಿಶ್ವಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​ನಲ್ಲಿ ಮುಗ್ಗರಿಸಿದ ಟೀಮ್​ ಇಂಡಿಯಾ, ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿಗೆ ರಣತಂತ್ರ ರೂಪಿಸ್ತಿದೆ. ಆದ್ರೆ ಇಂಗ್ಲೆಂಡ್​ ನೆಲದಲ್ಲೇ ಆಡ್ತಿರುವ ಕಾರಣ, ಭಾರತ ಈ ಸರಣಿಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಆದರೆ ಭಾರತಕ್ಕೆ ಇದೀಗ ಆತಂಕವೊಂದು ಎದುರಾಗಿದೆ. ಫೈನಲ್​​​ ಸೋತ ಭಾರತ, ಇಂಗ್ಲೆಂಡ್​ ಸರಣಿಯನ್ನೂ ಕಳೆದುಕೊಳ್ಳುವ ಭೀತಿಗೆ ಸಿಲುಕಿದೆ.

ಕಳೆದೆರಡು ವರ್ಷಗಳಿಂದ ದೇಶ-ವಿದೇಶಗಳಲ್ಲಿ ಟೀಮ್​ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. ಹೋದ ಕಡೆಯಲ್ಲೆಲ್ಲಾ ಸರಣಿ ಗೆಲ್ತಿರುವ ವಿರಾಟ್​ ಪಡೆ, ಇದೀಗ ಇಂಗ್ಲೆಂಡ್​ ಸರಣಿ ಮೇಲೆ ಕಣ್ಣಿಟ್ಟಿದೆ. ಸ್ವದೇಶ ಮಾತ್ರವಲ್ಲ, ವಿದೇಶದಲ್ಲೂ ನಾವು ಹುಲಿಗಳೇ ಅನ್ನೋದನ್ನ ಭಾರತ ಸಾಬೀತುಪಡಿಸಿದೆ. ಆದರೆ ಟೀಮ್​ ಇಂಡಿಯಾದ ಈ ಐವರು ಮಾತ್ರ, ತವರಿನಲ್ಲೇ ಘರ್ಜಿಸಿದ್ರೆ, ವಿದೇಶದಲ್ಲಿ ಮಾತ್ರ ಅವರ ಆಟ ಮಂಕಾಗಿದೆ. ಅದರಲ್ಲೂ 2019ರಿಂದ ಈಚೆಗೆ ಈ ಘಟಾನುಘಟಿಗಳ ಪ್ರದರ್ಶನ ತೀರಾ ಕೆಟ್ಟದಾಗಿದೆ.

2020ರಲ್ಲಿ ನ್ಯೂಜಿಲೆಂಡ್​ನಲ್ಲಿ ಟೆಸ್ಟ್​ ಸೋತ ನಂತರ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯದಲ್ಲಿ ಭಾರತ ಸೋತಿದೆ. ಇದನ್ನು ಬಿಟ್ಟರೆ ಉಳಿದೆಲ್ಲಾ ಸರಣಿಗಳಲ್ಲೂ, ಅಂದ್ರೆ 2019ರ ಬಳಿಕ ಭಾರತ, ಫಾರಿನ್​ ಪಿಚ್​​​ಗಳಲ್ಲಿ ಹಿಡಿತ ಸಾಧಿಸಿದೆ. ಇದೀಗ ಆಗಸ್ಟ್​ 4ರಿಂದ ಶುರುವಾಗುವ ಇಂಗ್ಲೆಂಡ್​ ಸರಣಿಯನ್ನೂ ಗೆಲ್ಲೋದಕ್ಕೆ ಕೊಹ್ಲಿ ಪಡೆ ಸಜ್ಜಾಗ್ತಿದೆ. ಆದರೆ ಐವರ ಕಳೆಪೆಯಾಟ ಟೀಮ್​ ಮ್ಯಾನೇಜ್​ಮೆಂಟ್​ ಅನ್ನ ಚಿಂತೆಗೆ ದೂಡಿದೆ. ತಂಡದ ಆಧಾರ ಸ್ಥಂಭ ಅಂತಿದ್ದವರೇ ಕೈ ಕೊಡ್ತಿರೋದ್ರಿಂದ, ಇಂಗ್ಲೆಂಡ್ ಟೆಸ್ಟ್​​ ಸಿರೀಸ್​ನಲ್ಲಿ ಹಿಡಿತ ಸಾಧಿಸ್ತಾರಾ ಅನ್ನೋ ಪ್ರಶ್ನೆ ಹುಟ್ಟು ಕೂಡ ಹಾಕಿದೆ.

ಕಿಂಗ್​​ ಕೊಹ್ಲಿ, ನ್ಯೂವಾಲ್​ ಪೂಜಾರ, ರೋಹಿತ್ ಫೇಲ್​ ಫೇಲ್​..!


2019ರ ನಂತರ ಫಾರಿನ್​​​​​ ಸರಣಿಗಳಲ್ಲಿ ಟೀಮ್​ ಇಂಡಿಯಾವೇನೋ ಗೆದ್ದಿದೆ. ಆದರೆ ಈ ಪಿಚ್​​ಗಳಲ್ಲಿ ಈ ಐವರ ಕೆಟ್ಟ ಪ್ರದರ್ಶನ ಮರೀಚಿಕೆಯಾಗಿದೆ. ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ನ್ಯೂ ವಾಲ್​ ಎಂದೇ ಖ್ಯಾತಿ ಪಡೆದ ಚೇತೇಶ್ವರ್​ ಪೂಜಾರ, ರೋಹಿತ್​ ಶರ್ಮಾ ಅಟ್ಟರ್​​ ಫ್ಲಾಪ್​ ಪ್ರದರ್ಶನ ತೋರಿರೋದು ಟೀಮ್​ ಮ್ಯಾನೇಜ್​ಮೆಂಟ್​ಗೆ ತಲೆನೋವು ತರಿಸಿದೆ. ಇವರ ಜೊತೆಗೆ ಕನ್ನಡಿಗರಾದ ಕೆ.ಎಲ್​.ರಾಹುಲ್​, ಮಯಾಂಕ್​ ಅಗರ್​ವಾಲ್​ ಕೂಡ ಈ ಸಾಲಿನಲ್ಲಿದ್ದಾರೆ. ಈ ಐವರು ಘಟಾನುಘಟಿಗಳ ಫೈಲ್ಯೂರ್​ನಿಂದಾಗಿ ಇದೀಗ ಟೀಮ್​ ಇಂಡಿಯಾಗೆ ಆತಂಕ ಹೆಚ್ಚಿಸಿದೆ. ಅದಕ್ಕೆ ಕಾರಣ 2019ರ ನಂತರ ಅವರ ಪ್ರದರ್ಶನ ಹೀಗಿದೆ ನೋಡಿ.

ವಿದೇಶಿ ಪಿಚ್​​​ಗಳಲ್ಲಿ ಕೈಕೊಟ್ಟಿದ್ದಾರೆ ತಂಡದ ಆಪತ್ಬಾಂಧವರು
ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅದರಲ್ಲೂ ಚೇಸಿಂಗ್​ ಮಾಸ್ಟರ್​​ರ 2019ರ ಬಳಿಕ ಪ್ರದರ್ಶನ ನೋಡಿದ್ರೆ, ವಿರಾಟ್​​ ಕೊಹ್ಲಿ ಆಟವೇನಾ ಅನಿಸುತ್ತೆ. 2019ರ ನಂತರ ಫಾರಿನ್​ ಪಿಚ್​​ಗಳಲ್ಲಿ ಫ್ಲಾಪ್​ ಮೇಲೆ ಫ್ಲಾಪ್​ ಶೋ ತೋರಿಸುತ್ತಿರುವ ಕೊಹ್ಲಿಯಿಂದ, ಒಂದೇ ಒಂದು ಶತಕ ಕೂಡ ಮೂಡಿ ಬರದಿರೋದೆ ಅದಕ್ಕೆ ಎಕ್ಸಾಂಪಲ್​, ಇನ್ನು ಚೇತೇಶ್ವರ್​​ ಪೂಜಾರ, ಟೀಮ್​ ಇಂಡಿಯಾದ ಗೋಡೆಯೆಂದೇ ಖ್ಯಾತಿ ಪಡೆದಿದ್ದಾರೆ. ಎಂತಹ ಒತ್ತಡದಲ್ಲಾದ್ರು ತಡೆಗೋಡೆಯಂತೆ ತಂಡಕ್ಕೆ ಗೆಲುವಿನ ಕೊಡುಗೆ ನೀಡ್ತಿದ್ದ ಆಪತ್ಬಾಂಧವ. ಆದರೆ 2019ರ ನಂತರ ವಿದೇಶಿ​​ಗಳಲ್ಲಿ ಪೂಜಾರ ತೋರಿರೋದು ಕೆಳಮಟ್ಟದ ಪ್ರದರ್ಶನ.

ವಿದೇಶದಲ್ಲಿ ಕೊಹ್ಲಿ-ಪೂಜಾರ ಪ್ರದರ್ಶನ (2019-21)
2019-2021ರ ನಡುವೆ ವಿದೇಶದಲ್ಲಿ ಕೊಹ್ಲಿ 6 ಪಂದ್ಯಗಳನ್ನ ಆಡಿದ್ದು, ಬರೀ 25.53ರ ಸರಾಸರಿಯಂತೆ 275 ಮಾತ್ರ ಕಲೆಹಾಕಿದ್ದಾರೆ. 76 ರನ್​ ಇನ್ನಿಂಗ್ಸ್​ವೊಂದರ ಗಳಿಸಿದ್ದೇ ಕೊಹ್ಲಿಯ ಬೆಸ್ಟ್​ ಸ್ಟೋರ್​​. ಇನ್ನು ಪೂಜಾರ 9 ಪಂದ್ಯಗಳನ್ನ ಆಡಿದ್ದು, 36.70ರ ಸರಾಸರಿಯಂತೆ 624 ರನ್​ ಕಲೆಹಾಕಿದ್ದಾರೆ. ಅವರ ಇನ್ನಿಂಗ್ಸ್​​ವೊಂದರ ಬೆಸ್ಟ್​ ಸ್ಕೋರ್​ 193 ಆಗಿದೆ.

ಹಿಟ್​​ಮ್ಯಾನ್ ರೋಹಿತ್​ರಿಂದ​ ತೀರಾ ಕಳಪೆ ಪ್ರದರ್ಶನ..!!
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಟೂರ್ನಿಯಲ್ಲಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ ರೋಹಿತ್​​ ಶರ್ಮಾ 6ನೇ ಆಟಗಾರ. ಜೊತೆಗೆ ಆರಂಭಿಕನಾಗಿ ಕೂಡ ಉತ್ತಮ ಅಡಿಪಾಯ ಹಾಕ್ತಿದ್ರು. ಆದರೆ ಅಷ್ಟರಮಟ್ಟಿಗೆ ಭರವಸೆ ಮೂಡಿಸಿದ್ದ ರೋಹಿತ್​, 2019ರ ಬಳಿಕ ವಿದೇಶಿ ಪಿಚ್​​​ಗಳಲ್ಲಿ ಹಳಿ ತಪ್ಪಿದ್ದಾರೆ. ಟೀಮ್​ ಇಂಡಿಯಾ ಮ್ಯಾನೇಜ್​​ಮೆಂಟ್​ ಕೂಡ, ಹಿಟ್​ ಮ್ಯಾನ್​ ರೋಹಿತ್​ ಶರ್ಮಾ ಅನ್ನೋ ಆಶಾಕಿರಣಗೆ ಏನಾಗಿದೆ ಅಂತ, ತಲೆಮೇಲೆ ಕೈಹೊತ್ತು ಕೂತಿದೆ.

ವಿದೇಶದಲ್ಲಿ ರೋಹಿತ್​​ ಪ್ರದರ್ಶನ (2019-21)
2019-2021ರ ನಡುವೆ ವಿದೇಶದಲ್ಲಿ ರೋಹಿತ್​ ಆಡಿರೋದು 2 ಪಂದ್ಯಗಳಷ್ಟೆ. 32.25ರ ಸರಾಸರಿಯಂತೆ 129 ರನ್​ ಮಾತ್ರ ಕಲೆಹಾಕಿದ್ದಾರೆ. ಅವರ ಇನ್ನಿಂಗ್ಸ್​​ವೊಂದರ ಬೆಸ್ಟ್​ ಸ್ಕೋರ್ 52 ಆಗಿದೆ.

ಫಾರಿನ್​ ಪಿಚ್​​​ಗಳಲ್ಲಿ ನಡೆಯದ ಮಯಾಂಕ್​-ರಾಹುಲ್​​ ಆಟ..!!
ಟೀಮ್​ ಇಂಡಿಯಾ ಟೆಸ್ಟ್​​ ತಂಡದಲ್ಲಿ ಕಾಂಪಿಟೇಷನೇನೋ ಹೆಚ್ಚಾಗಿದೆ. ಆದರೆ ಸಿಕ್ಕ ಅವಕಾಶಗಳಲ್ಲಿ ಸದುಪಯೋಗಪಡಿಸಿಕೊಳ್ಳುವಲ್ಲಿ ರಾಹುಲ್​-ಮಯಾಂಕ್​ ಎಡವಿದ್ದಾರೆ. 2019ರ ನಂತರ ಕನ್ಸಿಸ್ಟೆನ್ಸಿ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ, ಕೆ.ಎಲ್.ರಾಹುಲ್- ಮಯಾಂಕ್ ಅಗರ್ವಾಲ್​​ ಬೆಂಚ್​​ಗೆ ಸೀಮಿತವಾಗಿದ್ದಾರೆ. ಯಾಕಂದರೆ ಇಬ್ಬರು 2019ರ ಬಳಿಕ ವಿದೇಶಿ ಪಿಚ್​​​ಗಳಲ್ಲಿ ನೀಡಿರುವ ಪ್ರದರ್ಶನ ಹಾಗಿದೆ.

ವಿದೇಶದಲ್ಲಿ ಮಯಾಂಕ್​-ರಾಹುಲ್​​ ಪ್ರದರ್ಶನ (2019-21)
2019-2021ನಡುವೆ ಮಯಾಂಕ್​ 8 ಪಂದ್ಯಗಳನ್ನಾಡಿದ್ದು 22.46ರ ಸರಾಸರಿಯಲ್ಲಿ 337 ರನ್​ ಸಿಡಿಸಿದ್ರೆ, 77ರನ್​ ಮಯಾಂಕ್ ಬೆಸ್ಟ್​ ಸ್ಕೋರ್​​​ ಆಗಿದೆ. ಇನ್ನು ರಾಹುಲ್​ 3 ಪಂದ್ಯಗಳನ್ನಾಡಿದ್ದು 22ರ ಸರಾಸರಿಯಲ್ಲಿ 110 ರನ್​ ಗಳಿಸಿದ್ದಾರೆ. 44 ರನ್ ಕನ್ನಡಿಗನ​​ ಬೆಸ್ಟ್​ ಸ್ಕೋರ್​ ಆಗಿದೆ.

ಟೀಮ್​ ಇಂಡಿಯಾದ ಆಟಗಾರರ ಈ ಕಳಪೆ ಪ್ರದರ್ಶನ, ಇಂಗ್ಲೆಂಡ್​​ ಸರಣಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತಂಡದ ಆಧಾರ ಸ್ಥಂಭಗಳೆಂದೇ ಬಿಂಬಿತವಾಗಿರುವ ಕೊಹ್ಲಿ, ಪೂಜಾರ, ರೋಹಿತ್​​, ರಾಹುಲ್​ ಮತ್ತು ಮಯಾಂಕ್​ ಕಳಪೆ ಪ್ರದರ್ಶನ, ತಂಡಕ್ಕೆ ಲಾಭವಾಗುತ್ತಾ ಅನ್ನೋ ಪ್ರಶ್ನೆ ಕೂಡ ಹುಟ್ಟು ಹಾಕಿದೆ.

ಸದ್ಯ ಈ ಆಟಗಾರರು ವಿದೇಶಿ ಪಿಚ್​ಗಳಲ್ಲಿ ಫ್ಲಾಪ್​ ಶೋ ತೋರಿಸುತ್ತಿದ್ದಾರೆ. ಅದಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ತೋರಿದ ಕಳಪೆ ಪ್ರದರ್ಶನ ಮತ್ತು ತೋರಿಸಿದ ಅಂಕಿ-ಅಂಶಗಳೇ ಸಾಕ್ಷಿ. ಒಟ್ಟಿನಲ್ಲಿ ಇದೇ ಕಳಪೆ ಫಾರ್ಮ್​​ ಇಂಗ್ಲೆಂಡ್​ ಸರಣಿಯಲ್ಲೂ ಮುಂದುವರೆದ್ರೆ, ತಂಡಕ್ಕೆ ಭಾರೀ ಹಿನ್ನಡೆಯಾಗೋದ್ರಲ್ಲಿ ಅನುಮಾನವೇ ಇಲ್ಲ.

The post 2019ರ ನಂತರ ವಿದೇಶಗಳಲ್ಲಿ ಐವರ ಕಳಪೆಯಾಟ- ರಾಹುಲ್​, ಮಯಾಂಕ್ ಕೂಡ​ ಹಾಡಿದ್ದೇ ಹಾಡು appeared first on News First Kannada.

Source: newsfirstlive.com

Source link