ನವದೆಹಲಿ: ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕಾಶ್ಮೀರಿ ನಾಯಕರ ಜೊತೆಗೆ ಸರ್ವಪಕ್ಷ ಸಭೆ ನಡೆಸಿದರು.. ಸಭೆಯ ನಂತರ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ನಾಯಕ ಒಮರ್ ಅಬ್ದುಲ್ಲಾ.. ಎಲ್ಲಾ ನಾಯಕರು ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ರಾಜ್ಯತ್ವಕ್ಕಾಗಿ ಒತ್ತಾಯಿಸಿದೆವು ಎಂದು ಹೇಳಿದ್ದಾರೆ.

ಒಮರ್ ಅಬ್ದುಲ್ಲಾ ಹೇಳಿದ್ದೇನು..? 

ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗಳನ್ನು ನಡೆಸಲು ಹಾಗೂ ರಾಜ್ಯತ್ವವನ್ನ ಮರುಸ್ಥಾಪಿಸಲು ಶೀಘ್ರವೇ ಕಾರ್ಯಾರಂಭ ಮಾಡುವುದಾಗಿ ಹೇಳಿದ್ದಾರೆ. ಆಜಾದ್ ಅವರು ಜಮ್ಮು ಕಾಶ್ಮೀರದಲ್ಲಿ ಮೊದಲು ರಾಜ್ಯತ್ವ ಸ್ಥಾಪನೆಯಾಗಬೇಕು.. ನಂತರ ಚುನಾವಣೆಗಳು ನಡೆಯಬೇಕು ಎಂದಿದ್ದಾರೆ. ಈ ವಿಚಾರವಾಗಿ ಪ್ರಧಾನಿಗಳು ಏನನ್ನೂ ಹೇಳಲಿಲ್ಲ.

ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರಧಾನಿಗೆ ನಾವು ಹೇಳಿದ್ದೇವೆ ಮತ್ತು ಜಮ್ಮು ಕಾಶ್ಮೀರಕ್ಕೆ ಹಿತವಲ್ಲದ ಕೆಲವು ನಿರ್ಧಾರಗಳನ್ನು ವಾಪಸ್ ಪಡೆದುಕೊಳ್ಳುವಂತೆ ಮನವಿ ಮಾಡಿದ್ದೇವೆ. ಈ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರಾಡಳಿತ ಪ್ರದೇಶ ಸ್ಥಾನವನ್ನು ಕೊಡಲಾಗಿದೆ. ಜನರಿಗೆ ಇದು ಇಷ್ಟವಿಲ್ಲ. ಜನರಿಗೆ ಜಮ್ಮು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವ ನೀಡುವುದು ಬೇಕಾಗಿದೆ.

2019 ರ ಆಗಸ್ಟ್ 5 ರಂದು ನಡೆದಿದ್ದರ ಪರವಾಗಿ ನಾವು ನಿಲ್ಲುವುದಿಲ್ಲ ಎಂದು ನಾವು ಹೇಳಿದ್ದೇವೆ. ಆದರೆ ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಇದರ ಬಗ್ಗೆ ಕೋರ್ಟ್​ನಲ್ಲೇ ಹೋರಾಟ ನಡೆಸಲಿದ್ದೇವೆ. ಅಲ್ಲದೇ ಕೇಂದ್ರ ಮತ್ತು ರಾಜ್ಯದ ನಂಬಿಕೆಯಲ್ಲಿ ಸೋರಿಕೆಯಾಗಿರುವುದನ್ನೂ ನಾವು ಪ್ರಧಾನಿಗೆ ಹೇಳಿದ್ದೇವೆ. ಅದನ್ನ ಸರಿಪಡಿಸುವುದು ಕೇಂದ್ರದ ಕರ್ತವ್ಯ.

ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಪಾಕಿಸ್ತಾನದ ಜೊತೆಗೆ ಈಗಾಗಲೇ ಮಾತುಕತೆ ಆರಂಭಿಸಿದೆ. ಓಪನ್ ಮಾತುಕತೆಗಳು ಅಲ್ಲದಿದ್ದರೂ ಹಿಂಬಾಗಿಲಿನಿಂದ ಮಾತುಕತೆ ನಡೆಯಬೇಕು. ಈ ಮಾತುಕತೆಗಳು ನಡೆಯುತ್ತಿದ್ದರೆ ನಾವದನ್ನು ಸ್ವಾಗತಿಸುತ್ತೇವೆ.- ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ನಾಯಕ

The post 2019 ರ ಆಗಸ್ಟ್ 5 ರಂದು ನಡೆದ ಘಟನೆಗೆ ನಮ್ಮ ಬೆಂಬಲವಿಲ್ಲ- ಒಮರ್ ಅಬ್ದುಲ್ಲಾ ಹೇಳಿದ್ದಿದು.. appeared first on News First Kannada.

Source: newsfirstlive.com

Source link