2020ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 1,31,714 ಮಂದಿ ಸಾವು


ನವದೆಹಲಿ: ದೇಶದಲ್ಲಿ ಕಳೆದ ವರ್ಷ ಒಟ್ಟು 3,66,138 ರಸ್ತೆ ಅಪಘಾತ ಸಂಭವಿಸಿದ್ದು 1 ಲಕ್ಷದ 31 ಸಾವಿರದ 714 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಕೇಂದ್ರ ಸಾರಿಗೆ ಸಚಿವ ನಿತಿನ್​​ ಗಡ್ಕರಿ ಹೇಳಿದ್ದಾರೆ.

ಉಳಿದಂತೆ 2019ರಲ್ಲಿ ಒಟ್ಟು 4 ಲಕ್ಷದ 49 ಸಾವಿರದ 2 ರಸ್ತೆ ಅಪಘಾತ ಸಂಭವಿಸಿದ್ದು, ಈ ವೇಳೆ 1 ಲಕ್ಷದ 51 ಸಾವಿರದ 113 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆಂಬ ಮಾಹಿತಿ ನೀಡಿದ್ದಾರೆ.. 2018ರಲ್ಲಿ 1 ಲಕ್ಷದ 40 ಸಾವಿರದ 843 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಮಾಹಿತಿ ಸಹ ಲೋಕಸಭೆಗೆ ನೀಡಿದ್ದಾರೆ.

ಇದೇ ವೇಳೆ 3,400 ಕಿಲೋ ಮೀಟರ್​ ರಾಷ್ಟ್ರೀಯ ಹೆದ್ದಾರಿಯನ್ನ ಸಿಕ್ಸ್​​ ಲೈನ್​ಗೆ ವರ್ಗಾವಣೆ ಮಾಡಲಾಗಿದೆ. 6,250 ಕಿಲೋ ಮೀಟರ್​ ರಸ್ತೆ ಹೆದ್ದಾರಿಯನ್ನ ಸಿಕ್ಸ್​​​ ಲೈನ್​ ಹಾಗೂ ಅದಕ್ಕಿಂತಲೂ ಮೇಲಿನ ದರ್ಜೆಗೆ ಸೇರ್ಪಡೆ ಮಾಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡರು.

News First Live Kannada


Leave a Reply

Your email address will not be published. Required fields are marked *