2020ರಲ್ಲಿ 47,221 ಪೋಕ್ಸೋ ಪ್ರಕರಣ ದಾಖಲು: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ | 47,221 Pocso cases were registered in the year 2020 government informed the Lok Sabha


2020ರಲ್ಲಿ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ 6,898 ಪ್ರಕರಣಗಳು ದಾಖಲಾಗಿದ್ದು ಮಹಾರಾಷ್ಚ್ರದಲ್ಲಿ 5,687 ಮತ್ತು ಮಧ್ಯಪ್ರದೇಶದಲ್ಲಿ 5,648 ಪ್ರಕರಣಗಳು ದಾಖಲಾಗಿವೆ.

2020ರಲ್ಲಿ 47,221 ಪೋಕ್ಸೋ ಪ್ರಕರಣ ದಾಖಲು: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ

ಸ್ಮೃತಿ ಇರಾನಿ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, 2012(Pocso) ಅಡಿಯಲ್ಲಿ 2020ರಲ್ಲಿ 47,221 ಪ್ರಕರಣಗಳು ದಾಖಲಾಗಿದ್ದು, ಶೇ 39.6 ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸರ್ಕಾರಕ್ಕೆ ತಿಳಿಸಿದೆ. ಪೋಕ್ಸೋ ಕಾಯ್ದೆಯಡಿ ಎಷ್ಟು ಪ್ರಕರಣಗಳು ಬಾಕಿ ಇವೆ ಎಂದು ಸಿಪಿಐ(ಎಂ) ಸಂಸದ ಎಸ್ ವೆಂಕಟೇಶನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ರಾಷ್ಟ್ರೀಯ ಅಪರಾಧ ಬ್ಯೂರೋದಿಂದ ಸಂಗ್ರಹಿಸಿದ ರಾಜ್ಯವಾರು ಡೇಟಾಗಳನ್ನು ನೀಡಿದ್ದಾರೆ. 2020ರಲ್ಲಿ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ 6,898 ಪ್ರಕರಣಗಳು ದಾಖಲಾಗಿದ್ದು ಮಹಾರಾಷ್ಚ್ರದಲ್ಲಿ 5,687 ಮತ್ತು ಮಧ್ಯಪ್ರದೇಶದಲ್ಲಿ 5,648 ಪ್ರಕರಣಗಳು ದಾಖಲಾಗಿವೆ. ಅಂಕಿ ಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಶೇ 70.7ರಷ್ಟು ಶಿಕ್ಷೆಯಾಗಿದ್ದು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಅಂಕಿಅಂಶಗಳು ಕ್ರಮವಾಗಿ ಶೇ 30.9 ಮತ್ತು ಶೇ 37.2 ರಷ್ಟಿದೆ. ಮಣಿಪುರ ಸತತ ಮೂರು ವರ್ಷಗಳವರೆಗೆ ಶೇ 100 ಶಿಕ್ಷೆಯ ಪ್ರಮಾಣವನ್ನು ಹೊಂದಿರುವ ಏಕೈಕ ರಾಜ್ಯ/ಕೇಂದ್ರಾಡಳಿತ ಪ್ರದೇಶವಾಗಿದೆ.

2020ರ ಅಂತ್ಯದಲ್ಲಿ 170,000 ಕೇಸುಗಳ ವಿಚಾರಣೆಗೆ ಬಾಕಿ ಇದ್ದು ಅವು 2018ರಲ್ಲಿ ಇದ್ದದ್ದಕಿಂತ ಶೇ 57.4 ಆಗಿದೆ.
2020 ರಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್ ಮತ್ತು ಚಂಡೀಗಢದಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿವೆ. ರಾಜ್ಯಗಳ ಪೈಕಿ, ಗೋವಾ ಮತ್ತು ಹಿಮಾಚಲ ಪ್ರದೇಶದಲ್ಲಿ ಕಡಿಮೆ ಸಂಖ್ಯೆಯ ಪ್ರಕರಣಗಳು ಅಂದರೆ ತಲಾ ಐದು ಪ್ರಕರಣಗಳು ದಾಖಲಾಗಿವೆ.

ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿಗಾಗಿ 389 ವಿಶೇಷ ಪೋಕ್ಸೊ ನ್ಯಾಯಾಲಯಗಳು ಸೇರಿದಂತೆ 1,023 ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳನ್ನು (ಎಫ್‌ಟಿಎಸ್‌ಸಿ) ಸ್ಥಾಪಿಸಲು ನ್ಯಾಯ ಇಲಾಖೆ ಯೋಜನೆಯನ್ನು ಜಾರಿಗೊಳಿಸುತ್ತಿದೆ. 2022 ರಲ್ಲಿ 892 ಎಫ್‌ಟಿಎಸ್‌ಸಿಗಳು ಸಕ್ರಿಯವಾಗಿದ್ದರೆ, 2021 ರಲ್ಲಿ 898 ಇವೆ ಎಂದು ಕೇಂದ್ರ ಸಚಿವೆ ಇರಾನಿ ಹೇಳಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *