ಭಾರತಕ್ಕೆ 2021ರಲ್ಲಿಯೇ ಬರೋಬ್ಬರಿ 5 ಕೋಟಿ ಡೋಸ್​ನಷ್ಟು ವ್ಯಾಕ್ಸಿನ್ ನೀಡೋದಾಗಿ ಅಮೆರಿಕಾದ ಫಾರ್ಮಾ ದೈತ್ಯ ಫೈಜರ್ ಸಂಸ್ಥೆ ಹೇಳಿದೆ. ಈಗಾಗಲೇ ವಿಶ್ವಾದ್ಯಂತ ಸುಮಾರು 14.7 ಕೋಟಿ ಡೋಸ್​ನಷ್ಟು ವ್ಯಾಕ್ಸಿನ್ ಅನ್ನು ಫೈಜರ್ ನೀಡಿದೆ. ಅಮೆರಿಕಾದ ಫೈಜರ್ ಹಾಗೂ ಜರ್ಮನಿಯ ಬಯೋ-ಎನ್​ಟೆಕ್ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಈ ಎಂಆರ್​ಎನ್​ಎ ವ್ಯಾಕ್ಸಿನ್​ಗೆ ವಿಶ್ವಾದ್ಯಂತ ಬೇಡಿಕೆ ಇದೆ. ಈಗಾಗಲೇ ಅಮೆರಿಕಾ, ಇಂಗ್ಲೆಂಡ್, ಕೆನಡಾ ಮುಂತಾದ ದೇಶಗಳಲ್ಲಿ ಈ ವ್ಯಾಕ್ಸಿನ್ ಬಳಕೆ ಮಾಡಲಾಗ್ತಿದೆ. ಇನ್ನೊಂದು ಕಡೆ ನೋಡಿದ್ರೆ ಕಳೆದ ಡಿಸೆಂಬರ್​ನಲ್ಲಿ ಎಮರ್ಜೆನ್ಸಿ ಅನುಮತಿ ಕೋರಿ ಭಾರತದಲ್ಲಿ ಫೈಜರ್ ಸಂಸ್ಥೆ ಮೊದಲಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಅರ್ಜಿ ಸಲ್ಲಿಸಿತ್ತು. ಹಾಗಿದ್ದು ಇಂದಿಗೂ ಫೈಜರ್ ವ್ಯಾಕ್ಸಿನ್ ಭಾರತಕ್ಕೆ ಎಂಟ್ರಿಯಾಗಲು ಸಾಧ್ಯವಾಗಿಲ್ಲ. ಆದ್ರೆ ಈಗ ಮತ್ತೆ ಭಾರತ ಸರ್ಕಾರದ ಕದ ತಟ್ಟಿದೆ.

ಕದ ತಟ್ಟಿದ್ರೂ ಕಂಡೀಷನ್ಸ್ ಎಂದ ಫೈಜರ್ 

ಹೌದು.. ಮತ್ತೆ ಕೇಂದ್ರ ಸರ್ಕಾರದ ಕದ ತಟ್ಟಿರೋ ಫೈಜರ್ ಸಂಸ್ಥೆ, 2021ರಲ್ಲಿಯೇ 5 ಕೋಟಿ ಡೋಸ್​ ನಷ್ಟು ವ್ಯಾಕ್ಸಿನ್ ಪೂರೈಕೆ ಮಾಡೋದಾಗಿ ತಿಳಿಸಿದೆ. ಸದ್ಯದ ಮಟ್ಟಿಗೆ ಭಾರತ ವ್ಯಾಕ್ಸಿನ್ ವಿಷಯದಲ್ಲಿ ಅತೀವ ಅಭಾವ ಎದುರಿಸುತ್ತಿರೋದನ್ನ ಮನಗಂಡಿರುವ ಫೈಜರ್, ಇದೇ ವರ್ಷ ನಿಮಗೆ ನಾವು 5 ಕೋಟಿ ಡೋಸ್​ನಷ್ಟು ಫೈಜರ್ ವ್ಯಾಕ್ಸಿನ್ ಕೊಡ್ತೀವಿ ಎಂದಿದೆ.

ಜುಲೈನಲ್ಲಿ 1 ಕೋಟಿ, ಅಗಸ್ಟ್​ನಲ್ಲಿ 1 ಕೋಟಿ
ಸೆಪ್ಟಂಬರ್​ನಲ್ಲಿ 2 ಕೋಟಿ, ಅಕ್ಟೋಬರ್​ನಲ್ಲಿ 1
5 ಕೋಟಿ ಡೋಸ್​ ನೀಡಲು ಸಿದ್ಧ ಎಂದ ಸಂಸ್ಥೆ

ಅದೂ ಕೂಡ ಜುಲೈ ತಿಂಗಳಿನಲ್ಲಿಯೇ 1 ಕೋಟಿ ಡೋಸ್​, ಅಗಸ್ಟ್​ನಲ್ಲಿ 1 ಕೋಟಿ ಡೋಸ್,  ಸೆಪ್ಟಂಬರ್​ನಲ್ಲಿ 2 ಕೋಟಿ ಹಾಗೂ ಅಕ್ಟೋಬರ್​ನಲ್ಲಿ 1 ಕೋಟಿ ಡೋಸ್​ ನೀಡಲು ನಾವು ಸಕ್ಷಮವಾಗಿದ್ದೇವೆ ಅಂತಾ ಫೈಜರ್ ಸಂಸ್ಥೆ ಹೇಳಿಕೆ ನೀಡಿದೆ. ಆದ್ರೆ, ಹೀಗೆ ವ್ಯಾಕ್ಸಿನ್ ನೀಡಬೇಕಾದ್ರೆ ನೀವು ನಮ್ಮ ಕಂಡೀಷನ್ಸ್​ಗೆ ಒಪ್ಪಿಗೆ ನೀಡಬೇಕು ಅನ್ನೋ ದಾಳವನ್ನೂ ಉರುಳಿಸಿದೆ.

ಹೌದು.. ಈಗಾಗಲೇ 116 ದೇಶಗಳಲ್ಲಿ ಫೈಜರ್ ಸಂಸ್ಥೆ ಕಾನೂನು-ಕಟ್ಟಳೆಯಿಂದ ಆಯಾ ದೇಶಗಳ ಸರ್ಕಾರದಿಂದ ಇಮ್ಯುನಿಟಿ ಪಡೆದಿದೆ. ಅದರಂತೆಯೇ ಭಾರತದಲ್ಲಿಯೂ ನಮಗೆ ಕಾನೂನು-ಕಟ್ಟಳೆಯಿಂದ ಸುರಕ್ಷೆ ನೀಡಬೇಕು ಅಂತಾ ಫೈಜರ್ ಹೇಳಿದ್ರೆ. ಅಂದ್ರೆ ಒಂದು ವೇಳೆ ನಾಳೆ ಏನಾದ್ರೂ ಫೈಜರ್ ವ್ಯಾಕ್ಸಿನ್ ಕಾರಣದಿಂದಾಗಿ ಯಾರಿಗಾದ್ರೂ ತೊಂದ್ರೆ ಆದ್ರೆ, ಅಂಥವರು ಆ ಸಂಸ್ಥೆ ಮೇಲೆ ಕೇಸ್ ದಾಖಲಿಸಲು ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲ ಏನೇ ಪರಿಹಾರ ನೀಡಬೇಕಿದ್ರೆ ಆ ದೇಶಗಳ ಸರ್ಕಾರವೇ ನೀಡಬೇಕೇ ಹೊರತು, ಫೈಜರ್ ಸಂಸ್ಥೆಯಲ್ಲ.

ಇಷ್ಟು ಮಾತ್ರವಲ್ಲ ಭಾರತದಲ್ಲಿ ಯಾವುದೇ ವ್ಯಾಕ್ಸಿನ್ ನೀಡಬೇಕು ಅಂದ್ರೂ ನಮ್ಮ ದೇಶದಲ್ಲಿ ಬ್ರಿಡ್ಜ್ ಸ್ಟಡಿ ನಡೆಸಬೇಕಾಗುತ್ತೆ. ಅಂದ್ರೆ ಈಗಿನ ನಿಯಮದಂತೆ ಕನಿಷ್ಠ 100 ಜನರಿಗೆ ವ್ಯಾಕ್ಸಿನ್ ನೀಡಿ 7 ದಿನಗಳ ಕಾಲ ಅವರ ಮೇಲೆ ನಿಗಾ ಇರಿಸಲಾಗುತ್ತೆ. ವ್ಯಾಕ್ಸಿನ್ ಪಡೆದವರಿಗೆ ಯಾವುದೇ ತೊಂದರೆ ಆಗಿಲ್ಲ ಅಂದ್ರೆ ಮಾತ್ರ ಉಳಿದವರಿಗೆ ವ್ಯಾಕ್ಸಿನ್ ನೀಡಲಾಗುತ್ತೆ. ಜೊತೆಗೆ, ದೇಶಿ ಸಂಸ್ಥೆಯೊಂದರ ಜೊತೆ ಒಪ್ಪಂದ ಮಾಡಿಕೊಂಡು ಆ ಮೂಲಕ ಇಂಥ ವಿದೇಶಿ ಸಂಸ್ಥೆಗಳು ಬ್ರಿಡ್ಜ್ ಸ್ಟಡಿ ಮಾಡುವುದು ಮತ್ತು ವ್ಯಾಕ್ಸಿನ್ ಪೂರೈಕೆ ಮಾಡುವುದನ್ನು ಮಾಡಬಹುದು. ಈಗ ಲೇಟೆಸ್ಟ್ ಉದಾಹರಣೆ ಅಂದ್ರೆ ರಷ್ಯಾದ ಸ್ಫುಟ್ನಿಕ್ ವ್ಯಾಕ್ಸಿನ್ ಸಂಸ್ಥೆ ಡಾ. ರೆಡ್ಡೀಸ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆ ಮೂಲಕ ಸವಿವರವಾದ ಬ್ರಿಡ್ಜ್ ಸ್ಟಡಿ ಮಾಡಿತು. ಜೊತೆಗೆ ಈಗ ಅನುಮತಿಯನ್ನೂ ಪಡೆದಕೊಂಡಿದೆ.

ಆದ್ರೆ ಈ ವಿಷಯದಲ್ಲೂ ಫೈಜರ್ ವ್ಯಾಕ್ಸಿನ್ ತಗಾದೆ ತೆಗೆದಿದೆ ಎನ್ನಲಾಗಿದೆ. ತಮಗೆ ಈ ನಿಯಮದಿಂದಲೂ ವಿನಾಯ್ತಿ ಬೇಕು ಎಂದು ಕೇಳಿದೆ ಎನ್ನಲಾಗ್ತಿದೆ. ಜೊತೆಗೆ, ಅಡ್ವಾನ್ಸ್​​ ಪೇಯ್ಮೆಂಟ್​ ಕೂಡ ಮಾಡಬೇಕು ಮತ್ತು ಆರ್ಡರ್ ಕೂಡ ನೀಡಬೇಕು ಅಂತಾ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಹೀಗಾಗಿ, ಸದ್ಯದ ಮಟ್ಟಿಗಂತೂ ಭಾರತ ಸರ್ಕಾರ ಮತ್ತು ಫೈಜರ್ ಸಂಸ್ಥೆ ನಡುವೆ ಯಾವುದೇ ಒಪ್ಪಂದವಂತೂ ಏರ್ಪಟ್ಟಿಲ್ಲ.

The post 2021ರಲ್ಲೇ ಭಾರತಕ್ಕೆ 5 ಕೋಟಿ ವ್ಯಾಕ್ಸಿನ್ ಕೊಡ್ತೀವಿ.. ಆದ್ರೆ ಕಂಡೀಷನ್ಸ್ ಅಪ್ಲೈ ಎಂದ ಫೈಜರ್ appeared first on News First Kannada.

Source: newsfirstlive.com

Source link