2021 ಮತ್ತು 2022ನೇ ಸಾಲಿನ ಬಯಲಾಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟ: ಇಲ್ಲಿದೆ ಪ್ರಶಸ್ತಿ ಪಡೆದವರ ಪಟ್ಟಿ | Bayalata Honors and Annual Awards for 2021 and 2022 Announced: Here’s the List of Awardees


ಕರ್ನಾಟಕ ಬಯಲಾಟ ಅಕಾಡೆಮಿಯಿಂದ 2022ನೇ ಸಾಲಿನ ಬಯಲಾಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟ ಮಾಡಲಾಗಿದೆ.

2021 ಮತ್ತು 2022ನೇ ಸಾಲಿನ ಬಯಲಾಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟ: ಇಲ್ಲಿದೆ ಪ್ರಶಸ್ತಿ ಪಡೆದವರ ಪಟ್ಟಿ

ಕರ್ನಾಟಕ ಬಯಲಾಟ ಅಕಾಡೆಮಿ (ಸಂಗ್ರಹ ಚಿತ್ರ)

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯಿಂದ 2022ನೇ ಸಾಲಿನ ಬಯಲಾಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ಜಿಲ್ಲೆಯ ಬಯಲಾಟ ಅಕಾಡೆಮಿ ಕೇಂದ್ರ ಕಚೇರಿಯಿಂದ 2021 ಮತ್ತು 2022ರ ಪ್ರತ್ಯೇಕ ಪ್ರಶಸ್ತಿ ಪಟ್ಟಿಯನ್ನು ಅಕಾಡೆಮಿ ಪ್ರಕಟಿಸಿದ್ದು, 50 ಸಾವಿರ ರೂ. ನಗದು ಪ್ರಶಸ್ತಿಯನ್ನು ಗೌರವ ಪ್ರಶಸ್ತಿ ಒಳಗೊಂಡಿದ್ದು, 25 ಸಾವಿರ ರೂ. ನಗದು ಪ್ರಶಸ್ತಿಯನ್ನು ವಾರ್ಷಿಕ ಪ್ರಶಸ್ತಿ ಒಳಗೊಂಡಿದೆ.

2021 ನೇ ವರ್ಷದ ಗೌರವ ಪ್ರಶಸ್ತಿ ಪಡೆದವರ ಪಟ್ಟಿ:

ಶ್ರೀಮತಿ ಅನುಸೂಯಾ ವಡ್ಡರ-ಶ್ರೀಕೃಷ್ಣ ಪಾರಿಜಾತ (ವಿಜಯಪುರ), ನರಸಪ್ಪ ಶಿರಗುಪ್ಪಿ-ಬಯಲಾಟ (ಬೆಳಗಾವಿ), ವೀರಪ್ಪ ಬಿಸರಳ್ಳಿ- ದೊಡ್ಡಾಟ (ಕೊಪ್ಪಳ), ಎಸ್.ಎ.ಕೃಷ್ಣಯ್ಯ-ತೊಗಲು ಗೊಂಬೆಯಾಟ (ಉಡುಪಿ), ಗೋವಿಂದಪ್ಪ ತಳವಾರ- ದೊಡ್ಡಾಟ (ಹಾವೇರಿ).

2021ನೇ ವರ್ಷದ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ:

ಶ್ರೀಮತಿ ಸುಂದ್ರವ್ವ ಮೇತ್ರಿ – ಶ್ರೀಕೃಷ್ಣ ಪಾರಿಜಾತ (ಬಾಗಲಕೋಟೆ), ಫಕ್ಕಿರಪ್ಪ ಗೌರಕ್ಕನವರ – ಬಯಲಾಟ (ಹಾವೇರಿ), ಚಂದ್ರಶೇಖರ್ ಮೇಲಿನಮನಿ- ಶ್ರೀಕೃಷ್ಣ ಪಾರಿಜಾತ (ವಿಜಯಪುರ), ದುಂಡಪ್ಪ ಗುಡ್ಲಾ – ಬಯಲಾಟ (ಕಲಬುರಗಿ), ಚಂದ್ರಶೇಖರಯ್ಯ ಗುರಯ್ಯನವರ – ದೊಡ್ಡಾಟ (ಧಾರವಾಡ), ಶ್ರೀಮತಿ ಸುಶೀಲಾ ಮಾದರ – ಸಣ್ಣಾಟ (ಬೆಳಗಾವಿ), ವೆಂಕೋಬ ಮುನಿಯಪ್ಪ – ದೊಡ್ಡಾಟ (ರಾಯಚೂರು), ಎಸ್. ಚಂದ್ರಪ್ಪ – ದೊಡ್ಡಾಟ (ದಾವಣಗೆರೆ), ಎಂ.ಆರ್.‌ವಿಜಯ -ಸೂತ್ರದ ಗೊಂಬೆಯಾಟ (ಬೆಂಗಳೂರು), ದಾನಪ್ಪ ಹಡಪದ – ದೊಡ್ಡಾಟ (ಗದಗ).

2022ನೇ ವರ್ಷದ ಗೌರವ ಪ್ರಶಸ್ತಿ ಪಡೆದವರ ಪಟ್ಟಿ:

ಕೆ. ಮೌನಾಚಾರಿ- ಬಯಲಾಟ (ಬಳ್ಳಾರಿ), ಸುರೇಂದ್ರ ಹುಲ್ಲಂಬಿ – ಸಣ್ಣಾಟ (ಧಾರವಾಡ), ಮಲ್ಲೇಶಯ್ಯ ಶತಕಂಠ- ದೊಡ್ಡಾಟ (ತುಮಕೂರು), ಶ್ರೀಮತಿ‌ ಚಂದ್ರಮ್ಮ – ತೊಗಲು ಗೊಂಬೆಯಾಟ (ಮಂಡ್ಯ), ಅಶೋಕ ಸುತಾರ – ದೊಡ್ಡಾಟ (ಗದಗ).

2022ನೇ ವರ್ಷದ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ:

ಮಲ್ಲಪ್ಪ ಗಣಿ- ಸಣ್ಣಾಟ (ಬಾಗಲಕೋಟೆ), ಫಕ್ಕೀರೇಶ ಬಿಸೆಟ್ಟಿ- ದೊಡ್ಡಾಟ (ಹಾವೇರಿ), ಶ್ರೀಮತಿ ನಾಗರತ್ನಮ್ಮ- ಬಯಲಾಟ (ವಿಜಯನಗರ), ಕೆಂಪಣ್ಣ ಚೌಗಲಾ- ಶ್ರೀಕೃಷ್ಣ ಪಾರಿಜಾತ (ಬೆಳಗಾವಿ), ರಾಮಚಂದ್ರಪ್ಪ‌ ಕಟ್ಟಿಮನಿ- ದೊಡ್ಡಾಟ (ಯಾದಗಿರಿ), ಶ್ರೀಮತಿ ಅಂಬುಜಮ್ಮ ಸುಂಕಣ್ಣ- ಬಯಲಾಟ (ಬಳ್ಳಾರಿ), ಕೆ.ಪಿ. ಭೂತಯ್ಯ- ದೊಡ್ಡಾಟ ( ಚಿತ್ರದುರ್ಗ), ಜಿ. ರಾಮಪ್ರಭು- ಬಯಲಾಟ (ದಾವಣಗೆರೆ), ಶ್ರೀಮತಿ ಬಿ.ರತ್ನಮ್ಮ ಸೋಗಿ- ದೊಡ್ಡಾಟ (ಶಿವಮೊಗ್ಗ), ಫಕ್ಕಿರಪ್ಪ ನೆರ್ತಿ- ದೊಡ್ಡಾಟ( ಧಾರವಾಡ).

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.