Categories
Cinema

ಅದಿತಿ ಪ್ರಭುದೇವ ನಟನೆಯ 'ಆನ' ಚಿತ್ರದ ಡಬ್ಬಿಂಗ್ ರೈಟ್ಸ್'ಗೆ ಹೆಚ್ಚಿದ ಬೇಡಿಕೆ

ಬೆಂಗಳೂರು: ದೇಶಕ್ಕಾಗಿ 23ನೇ ವಯಸ್ಸಿನಲ್ಲಿಯೇ ತನ್ನ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮ ಸೈನಿಕರ  ಸ್ಮರಣಾರ್ಥ ತಯಾರಿಸಿರುವ ಕಿರುಚಿತ್ರ ಮಹಾತ್ ಹುತಾತ್ಮ, ಏಪ್ರಿಲ್ 3ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರಣಯರಾಜ ಶ್ರೀನಾಥ್, ಅಕ್ಷಯ್ ಚಂದ್ರಶೇಖರ್, ಅದ್ವಿತಿ ಶೆಟ್ಟಿ ಮತ್ತಿತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾತ್ ಹುತಾತ್ಮ ಕಿರುಚಿತ್ರ ಬಿಡುಗಡೆ ಸುಮಾರು ಎರಡೂವರೆ ವರ್ಷಗಳಿಂದಲೂ ಕಾಯಲಾಗುತಿತ್ತು. ಇದಕ್ಕೆ ಕಾರಣವೇನು ಎಂಬುದನ್ನು ವಿವರಿಸುವ ನಿರ್ದೇಶಕ ಸಾಗರ್ ಪುರಾಣಿಕ್, ಇದೊಂದು ದೊಡ್ಡ ಬಜೆಟ್  ಸಿನಿಮಾವಾಗಿದ್ದು, ಬಿಡುಗಡೆಗೆ ಮುನ್ನ ಹಣವನ್ನು ಸಂಗ್ರಹಿಸಬೇಕಾಗಿತ್ತು. ಈ ಚಿತ್ರದ ಮೇಲೆ 20 ಲಕ್ಷ ವೆಚ್ಚ ಮಾಡಲಾಗಿದೆ. ಖುರ್ಚು ಮಾಡಿರುವುದರಲ್ಲಿ ಅರ್ಧ ಭಾಗವನ್ನಾದರೂ ಸಂಗ್ರಹಿಸಿ ನಂತರ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಕೊರೋನಾ ಸಾಂಕ್ರಾಮಿಕದಿಂದಲೂ ಬಿಡುಗಡೆ ವಿಳಂಬವಾಯಿತು ಎಂದು ತಿಳಿಸಿದರು.

ಬಹುತೇಕ ದೃಶ್ಯವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿಯೇ ಚಿತ್ರೀಕರಿಸಲಾಗಿದೆ. ತುರಹಳ್ಳಿ ಅರಣ್ಯದಲ್ಲಿ ಕೆಲವೊಂದು ಗಡಿಯ ದೃಶ್ಯಗಳನ್ನು ತೆಗೆಯಲಾಗಿದೆ. ಅದಕ್ಕಾಗಿ ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆಯಲಾಗಿತ್ತು ಎಂದು ಹೇಳಿದ ನಿರ್ದೇಶಕರು, ಕಿರುಚಿತ್ರವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

 ಹಾಲಿವುಡ್‌ ಸಿಲ್ವರ್‌ ಸ್ಕ್ರೀನ್‌ ಫೆಸ್ಟಿವಲ್,  ಜೈಪುರ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಸೇರಿದಂತೆ ಅನೇಕ ಚಿತ್ರೋತ್ಸವಗಳಿಗೆ ಅಧಿಕೃತವಾಗಿ ಆಯ್ಕೆಯಾಗಿ ಮಹಾನ್ ಹುತಾತ್ಮ ಪ್ರದರ್ಶನ ಕಂಡಿದೆ. ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲಚಿತ್ರೋತ್ಸವ 2020ರಲ್ಲಿ ವಿಶೇಷ ಮನ್ನಣೆ ಪಡೆದಿರುವುದಾಗಿ ನಿರ್ದೇಶಕರು ತಿಳಿಸಿದರು. 

ಒಟಿಟಿ ವೇದಿಕೆಯಲ್ಲೂ ಕಿರುಚಿತ್ರ ಬಿಡುಗಡೆ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದ ಪುರಾಣಿಕ್, ಏಪ್ರಿಲ್ 3 ರಂದು ಈ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ ತಿಳಿಸಿದರು.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಅಣ್ಣಾವ್ರಂತೇ ನೇತ್ರದಾನದ ಪ್ರತಿಜ್ಞೆ ಮಾಡಿದ ಶಿವರಾಜ್‍ಕುಮಾರ್: 'ಅಕ್ಷಿ' ಚಿತ್ರದ ಬಗ್ಗೆ ಮೆಚ್ಚುಗೆ

ಏಷ್ಯಾದ ಮುಂಚೂಣಿಯ ನೇತ್ರ ಚಿಕಿತ್ಸಾ ಸಂಸ್ಥೆ ನಾರಾಯಣ ನೇತ್ರಾಲಯವು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ಕನ್ನಡ ಚಲನಚಿತ್ರ ಪುರಸ್ಕಾರ ಪಡೆದ ಅಕ್ಷಿ ಚಿತ್ರದ ಪ್ರೇರಶಕ್ತಿಯಾಗಿದೆ. ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಭುಜಂಗ ಶೆಟ್ಟಿ ಇಡೀ ಚಿತ್ರತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ.

ಈ ಕುರಿತು ಚಿತ್ರತಂಡದ ಜತೆ ಇಂದು ಡಾ.ಕೆ. ಭುಜಂಗ ಶೆಟ್ಟಿ ಚೆರ್ಚೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಕ್ಷಿ ನೇತ್ರದಾನಕ್ಕೆ ಉತ್ತೇಜನಕ್ಕೆ ಬೂಸ್ಟರ್ ಡೋಸ್ ಆಗಿದೆ ಮತ್ತು ಹೆಮ್ಮೆ, ವಿನಯಪೂರ್ವಕವಾಗಿ ಇಂದು ನಾನು ಈ ಶ್ರೇಷ್ಠ ಚಲನಚಿತ್ರ `ಅಕ್ಷಿ’ ನೀಡಿದ ತಂಡದೊಂದಿಗೆ ಇಲ್ಲಿ ಭಾಗವಹಿಸಿದ್ದೇನೆ. ಈ ಚಲನಚಿತ್ರದ ವಿಷಯವು ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದೆ ಮತ್ತು ನಾರಾಯಣ ನೇತ್ರಾಲಯದ ಧ್ಯೇಯೋದ್ದೇಶವನ್ನು ಪ್ರತಿಪಾದಿಸುತ್ತಿದೆ. ನೇತ್ರದಾನ ಕುರಿತು ಬೆಳ್ಳಿತೆರೆಯ ಮಾಧ್ಯಮದ ಮೂಲಕದ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವ ಈ ಪ್ರಯತ್ನದ ಭಾಗವಾಗಲು ನಾನು ಬಹಳ ಸಂತೋಷಗೊಂಡಿದ್ದೇನೆ” ಎಂದು ಹೇಳಿದರು.

ಅಕ್ಷಿ ಚಲನಚಿತ್ರವು ಖ್ಯಾತ ನಟ ದಿವಂಗತ ಡಾ. ರಾಜ್‍ಕುಮಾರ್ ಅವರ ಹಾಗೂ ಅವರ ಹೆಸರಿನಲ್ಲಿರುವ ನಾರಾಯಣ ನೇತ್ರಾಲಯದ ಡಾ. ರಾಜ್‍ಕುಮಾರ್ ನೇತ್ರ ಬ್ಯಾಂಕ್‍ನ ಧ್ಯೇಯೋದ್ದೇಶವಾದ ನೇತ್ರದಾನವನ್ನು ಪ್ರತಿಪಾದಿಸುತ್ತದೆ. 1994ರಲ್ಲಿ ಡಾ. ರಾಜ್‍ಕುಮಾರ್ ನೇತ್ರ ಬ್ಯಾಂಕ್ ಅನ್ನು ಸ್ವತಃ ಡಾ. ರಾಜ್‍ಕುಮಾರ್ ಉದ್ಘಾಟಿಸಿದ್ದರು. 2006ರಲ್ಲಿ ಅವರು ಮರಣ ಹೊಂದಿದಾಗ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ನೀಡಲಾಯಿತು. ಅವರ ಆದರ್ಶನೀಯ ಮಹೋನ್ನತ ನೇತ್ರದಾನವು ಅಕ್ಷಿಯಲ್ಲಿ ಕಾಣಿಸಿಕೊಂಡಿದೆ. ದಿವಂಗತ ಪಾರ್ವತಮ್ಮ ರಾಜ್‍ಕುಮಾರ್ ಕೂಡಾ ತಮ್ಮ ನೇತ್ರಗಳನ್ನು ದಾನ ಮಾಡಿದರು. ರಾಜ್ಯದ ಶೇ.50ರಷ್ಟು ನೇತ್ರದಾನವನ್ನು ನಾರಾಯಣ ನೇತ್ರಾಲಯದ ಮೂಲಕ ನಡೆಸಲಾಗುತ್ತಿದೆ ಎಂದರು.

ಡಾ. ರಾಜ್‍ ಅವರ ಹಿರಿಯ ಪುತ್ರ ಡಾ. ಶಿವರಾಜ್‍ಕುಮಾರ್ ಅಕ್ಷಿ ಚಲನಚಿತ್ರ ತಂಡವನ್ನು ಸನ್ಮಾನಿಸಿದರು. “ನನ್ನ ತಂದೆಗೆ ಬಹಳ ಪ್ರೀತಿಪಾತ್ರವಾದ ವಿಷಯ ನೇತ್ರದಾನವು ಒಂದು ಚಲನಚಿತ್ರದಲ್ಲಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿರುವುದು ಬಹಳ ಸಂತಸ ತಂದಿದೆ. ಈ ತಂಡವು ಈ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದೆ. ಇದು ಭಾವನಾತ್ಮಕ ಹಾಗೂ ಸ್ಫೂರ್ತಿದಾಯಕ ಕ್ಷಣವಾಗಿದೆ” ಎಂದರು. ಅವರು ಕೂಡಾ ತಮ್ಮ ನೇತ್ರದಾನ ಮಾಡುವ ಪ್ರತಿಜ್ಞೆಯ ಮೂಲಕ ತಮ್ಮ ತಂದೆಯ ಆಸೆಯನ್ನು ಈಡೇರಿಸಿದರು.

ಅಕ್ಷಿ ಚಲನಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ,“ಅಕ್ಷಿ ಚಲನಚಿತ್ರವು ನೇತ್ರದಾನ ಕುರಿತು ಹೆಚ್ಚು ಗಮನ ನೀಡುವಲ್ಲಿ ಹಾಗೂ ಸಮಾಜ ಈ ವಿಷಯವನ್ನು ಹೇಗೆ ನೋಡುತ್ತದೆ ಎನ್ನುವ ಕುರಿತು ತಿಳಿಸಲು ನಮ್ಮ ಪ್ರಯತ್ನವಾಗಿದೆ. ನೇತ್ರದಾನವು ಹೆಚ್ಚು ಚರ್ಚೆಗೆ ಒಳಪಡಬೇಕಾದ ವಿಷಯವಾಗಿದೆ. ಡಾ. ಭುಜಂಗ ಶೆಟ್ಟಿ ಹಾಗೂ ಅವರ ತಂಡದೊಂದಿಗೆ ನಾವು ಮಾತನಾಡಲು ಪ್ರಾರಂಭಿಸಿದ ನಂತರ ಈ ಕುರಿತು ಅಪಾರವಾಗಿ ತಿಳಿದೆವು” ಎಂದು ಹೇಳಿದರು.

ನಿರ್ಮಾಪಕ ಎನ್. ರಮೇಶ್, “ನಾವು ಯಾವುದೇ ರೀತಿಯಲ್ಲೂ ರಾಷ್ಟ್ರಪ್ರಶಸ್ತಿ ಲಭಿಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಕಥೆಯ ಮಹೋನ್ನತ ಅಂಶ ಹಾಗೂ ತಂಡದ ಪ್ರಾಮಾಣಿಕ ಪ್ರಯತ್ನ ಮತ್ತು ಜನರ ಆಶೀರ್ವಾದ ಈ ಪ್ರಶಸ್ತಿಯನ್ನು ತಂದುಕೊಟ್ಟಿದೆ” ಎಂದರು.

ಮತ್ತೊಬ್ಬ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್, ಈ ಚಲನಚಿತ್ರವು ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವವೂ ಸಲ್ಲಿಸಿದೆ. ಅವರಿಗೆ ನೇತ್ರದಾನ ಕುರಿತು ಸಮಾಜದ ದೃಷ್ಟಿಕೋನ ಬದಲಾಯಿಸುವ ಭಾಗವಾಗುವ ಬಯಕೆ ಇತ್ತು. ಅವರು ಹಾಡಿದ ಕೊನೆಯ ಕೆಲವೇ ಗೀತೆಗಳಲ್ಲಿ ಇದೂ ಒಂದು” ಎಂದು ಹೇಳಿದರು

ಕಾರ್ಯಕ್ರಮದಲ್ಲಿ ನಿರ್ಮಾಪಕ ರವಿ.ಎಚ್.ಎಸ್.(ಹೊಳಲು), ಛಾಯಾಗ್ರಾಹಕ ಮುಕುಲ್ ಗೌಡ, ಚಿತ್ರಕಥೆ ಬರಹಗಾರ ದೇವೇಂದ್ರ ನಾಯ್ಡು, ಸಹ ನಿರ್ದೇಶಕರಾದ ಮೀನಾ ರಘು ಮತ್ತು ಸುನೀಲ್ ರಾಜ್ ಇದ್ದರು. ಈ ಚಿತ್ರದಲ್ಲಿ ಪಾತ್ರ ವಹಿಸಿರುವ ಮಾಸ್ಟರ್ ಮಿಥುನ್ ಎಂ.ಬೈ.., ಬೇಬಿ ಸೌಮ್ಯ ಪ್ರಭು ಮತ್ತು ನಾಗರಾಜ್‍ರಾವ್ ಕೂಡಾ ಉಪಸ್ಥಿತರಿದ್ದರು.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ರಿಯಲ್ ಲೈಫ್ ನಲ್ಲೂ ಒಂದಾಗಲಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದನ್ ಮತ್ತು ಕವಿತಾ ಗೌಡ!

ಬೆಂಗಳೂರು: ಈ ಹಿಂದೆ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಜೋಡಿಯಾಗಿ ನಟಿ ಖ್ಯಾತಿ ಗಳಿಸಿದ್ದ ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಜೋಡಿ ಇದೀಗ ನಿಜ ಜೀವನದಲ್ಲೂ ಜೋಡಿಯಾಗಲು ಹೊರಟಿದ್ದಾರೆ.

ಹೌದು.. ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಮದುವೆಗೆ ಸಿದ್ಧರಾಗಿದ್ದು ಈ ಬಗ್ಗೆ ಸ್ವತಃ ನಟ ಚಂದನ್ ಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

We are getting fooled on April first..

Posted by Chandan Kumar on Tuesday, 30 March 2021

ಈ ಹಿಂದೆ ಸಾಕಷ್ಟು ಕಡೆಗಳಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಆಗ ಈ ಇಬ್ಬರ ನಡುವೆ ಏನೋ ಇದೆ ಎಂದು ಎಲ್ಲರೂ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಗ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಹೇಳಿ ತಪ್ಪಿಸಿಕೊಂಡಿದ್ದ ಈ ಜೋಡಿ ಇದೀಗ ದಿಢೀರನೆ ಮದುವೆ ಮಾಹಿತಿ ನೀಡಿದೆ.  

ನಟ ಚಂದನ್ ಕುಮಾರ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಏಪ್ರಿಲ್ 1ಕ್ಕೆ ನಾವು ಮೂರ್ಖರಾಗುತ್ತಿದ್ದೇವೆ ಎಂದು ಪೋಸ್ಟ್ ಮಾಡಿ ಕವಿತಾ ಗೌಡ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಆದ್ರೆ ಏಪ್ರಿಲ್ 1ಕ್ಕೆ ಚಂದನ್ ಹಾಗೂ ಕವಿತಾ ಮದುವೆಯಾಗುತ್ತಿದ್ದಾರೆಯೋ ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆಯೋ ಇನ್ನೂ ತಿಳಿದಿಲ್ಲ. ಆದರೆ ನಾಳೆ ತಮ್ಮ ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನಂತೂ ನೀಡಲಿದ್ದಾರೆ.  
 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

'ಶುಗರ್ ಫ್ಯಾಕ್ಟರಿ'ಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್!

ಬಿಗ್ ಬಾಸ್ ಕನ್ನಡ ಸೀಸನ್ 6ರಲ್ಲಿ ಜನಸಾಮಾನ್ಯರ ವಿಭಾಗದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ಶಶಿಕುಮಾರ್ ಅವರು ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆಧುನಿಕ ಕೃಷಿ ಪದ್ಧತಿ ಮೂಲಕ ಜನಪ್ರಿಯರಾಗಿರುವ ಶಶಿಕುಮಾರ್ ಅವರು, ಪ್ರಸ್ತುತ ಅನೂಪ್ ಆ್ಯಂಟೋನಿ ನಿರ್ದೇಶನದ ಮೆಹಬೂಬಾ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಅಂತಿಮ ಹಂತದಲ್ಲಿವೆ. ಈ ಚಿತ್ರ ತೆರೆಗೆ ಬರುವುದಕ್ಕೂ ಮುನ್ನವೇ ಶಶಿ ಅವರು ಮತ್ತೊಂದು ಚಿತ್ರದಲ್ಲಿ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.

ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಶಶಿ ಅವರು ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಮಹತ್ವವಾದ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಸ್ತುತ ಚಿತ್ರದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಅಲ್ಲಿ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಬಹುದಿನಗಳ ಬಳಿಕ ದೀಪಕ್ ಅರಸ್ ಅವರು ಶುಗರ್ ಫ್ಯಾಕ್ಟರಿ ಚಿತ್ರದ ಮೂಲಕ ನಿರ್ದೇಶಕರಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ನಟಿಸುತ್ತಿದ್ದು,  ನಾಯಕಿ ನಟಿಯಾಗಿ ಸೋನಲ್ ಮಂಥೇರೋ ಕಾಣಿಸಿಕೊಳ್ಳುತ್ತಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರು ಈ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದು ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌

ಚಿತ್ರದಲ್ಲಿ 7 ಹಾಡುಗಳನ್ನು ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ, ಚಂದನ್ ಶೆಟ್ಟಿ, ರಾಘವೇಂದ್ರ ಕಾಮತ್ ಬರೆದಿದ್ದಾರೆ.

ಕಬೀರ್ ರಫಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿರುವ ‘ಶುಗರ್ ಫ್ಯಾಕ್ಟರಿ’ಗೆ ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

'ಅವತಾರ ಪುರುಷ' ಮೊದಲ ಹಾಡು ಏಪ್ರಿಲ್ 9ಕ್ಕೆ ಬಿಡುಗಡೆ 

ಬೆಂಗಳೂರು: ಪ್ರತಿವರ್ಷ ರಾಜಸ್ಥಾನದ ಜೋಧಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ನಲ್ಲಿ ಸ್ಪರ್ಧೆಗೆ ಹಲವಾರು ದೇಶ ವಿದೇಶಗಳಿಂದ ಬಂದಿರುವ ಚಿತ್ರಗಳು ಸ್ಕ್ರೀನಿಂಗ್ ಆಗುತ್ತವೆ. ಕನ್ನಡದಿಂದ "ದಾರಿ ಯಾವುದಯ್ಯಾ ವೈಕುಂಠಕೆ" ಚಿತ್ರವೂ ಪ್ರದರ್ಶನ ಕಂಡು ಎಲ್ಲರಿಂದ ಉತ್ತಮ ಮೆಚ್ಚುಗೆ ಗಳಿಸಿದೆ.

ಅಂತಿಮ ಹಂತದಲ್ಲಿ ಉತ್ತಮ ಕಥೆಗಾಗಿ ನೀಡುವ ಪ್ರಶಸ್ತಿ ಈ ಚಿತ್ರದ ಪಾಲಾಗಿದೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಚಿತ್ರ ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ ಕಂಡು, 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ದೋಚಿಕೊಂಡಿದೆ. ಅದರಲ್ಲಿ ನಾಲ್ಕು ಕಡೆ "ಬೆಸ್ಟ್ ಡೈರೆಕ್ಟರ್" ಅವಾರ್ಡ್ ಬಂದಿದೆ. ಬಿಡುಗಡೆಗೂ ಮುನ್ನ ಎಲ್ಲಾ ಕಡೆ ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.

ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ 'ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರವನ್ನು ಸಿದ್ದು ಪೂರ್ಣಚಂದ್ರ ನಿರ್ದೇಶಿಸಿದ್ದಾರೆ.

ವರ್ಧನ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅನುಷ, 'ತಿಥಿ' ಚಿತ್ರದ ಖ್ಯಾತಿ ಪೂಜಾ, ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್‌ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್. ಸುಚಿತ್, ಮೈಸೂರು ಬಸವರಾಜ್ ಮುಂತಾದವರಿದ್ದಾರೆ. ಲೋಕಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Health

ಮಕ್ಕಳ ಆರಾಮದಾಯಕ ನಿದ್ದೆಗೆ ಈ ಆಹಾರ ಸಹಕಾರಿ

ವೈದ್ಯರು ಹೇಳುವಂತೆ ಮಕ್ಕಳು ಹೆಚ್ಚು ಸಮಯ ನಿದ್ದೆ ಮಾಡಬೇಕು. ಆದರೆ, ಕೆಲ ಮಕ್ಕಳಲ್ಲಿ ನಿದ್ದೆ ಮಾಡುವ ಸಮಯದ ಪ್ರಮಾಣ ಕಡಿಮೆಯಾಗಿರುತ್ತದೆ. ಮಕ್ಕಳು ಆರಾಮದಾಯಕ ಹಾಗೂ ಆರೋಗ್ಯಯುತ ನಿದ್ದೆ ಮಾಡಬೇಕಾದರೆ ಏನು ಮಾಡಬೇಕು ಎನ್ನುವ ಚಿಂತೆ ಪೋಷಕರಲ್ಲಿ ಇದ್ದೇ ಇರುತ್ತದೆ.

ಪೂರ್ಣ ಪ್ರಮಾಣದಲ್ಲಿ ನಿದ್ದೆ ಮಾಡುವುದು ಎಲ್ಲ ವಯಸ್ಸಿನವರಿಗೂ ಅತ್ಯವಶ್ಯಕ.ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಪೂರ್ಣ ನಿದ್ದೆ ಬೇಕೇಬೇಕು. ಅನೇಕ ಸಂಶೋಧನೆ ಹಾಗೂ ಅಧ್ಯಯನ ಪ್ರಕಾರ ಸಂಪೂರ್ಣ ನಿದ್ದೆಯಿಂದ ಮಕ್ಕಳ ಮೆದುಳಿನ ಬೆಳವಣಿಗೆಯಾಗುತ್ತದೆ ಎಂಬ ಅಂಶ ಗೊತ್ತಾಗಿದೆ.

ನೆಮ್ಮದಿ ನಿದ್ದೆಗೆ ಈ ಆಹಾರ ಸಹಕಾರಿ :

ಮಕ್ಕಳಲ್ಲಿ ನಿದ್ದೆಯ ಪ್ರಮಾಣ ಹೆಚ್ಚಿಸುವಲ್ಲಿ ಅವರು ಸೇವಿಸುವ ಆಹಾರ ಪದ್ಧತಿ ಕೂಡ ಬಹುಮುಖ್ಯವಾಗಿರುತ್ತದೆ. ಹಾಗಾದರೆ ಮಕ್ಕಳಿಗೆ ಯಾವ ಆಹಾರ ನೀಡಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ

  1. ಬಾಳೆ ಹಣ್ಣು, ಟ್ರೈ ಫ್ರೂಟ್ಸ್ ಹಾಗೂ ಹಸಿರು ತರಕಾರಿ
  2. ಮಕ್ಕಳಲ್ಲಿ ಮಿದುಳು ಬೆಳವಣೆಗೆ ಆಗುವಲ್ಲಿ ಒಮೆಗಾ ಪ್ರಮಾಣ ಬಹುಮುಖ್ಯ ಪಾತ್ರ ನಿಭಾಯಿಸುತ್ತದೆ. ಆದ್ದರಿಂದ ಒಮೆಗಾ ಅಂಶ ಹೊಂದಿರುವ ಚಿಯಾ ಬೀಜ, ಅಗಸೆ ಬೀಜ, ಸಾಲ್ಮನ್ ಹಾಗೂ ವಾಲ್‍ನಟ್‍ ನೀಡಬೇಕು.
  3. ಓಟ್ಸ್
  4. ಮೀನು, ತರಕಾರಿ, ಹಸಿರು ಪಲ್ಯೆ  ಮಕ್ಕಳಲ್ಲಿ ನಿದ್ದೆ ಪ್ರಮಾಣವನ್ನು ಹೆಚ್ಚಿಸುತ್ತದೆ.
  5. ಚೆರ್ರಿ
  6. ಸಿಹಿ ಅಲೋಗಡ್ಡೆಈ ಮೇಲಿನ ಆಹಾರವನ್ನು ನಿಯಮಿತವಾಗಿ ಮಕ್ಕಳಿಗೆ ನೀಡುವುದರಿಂದ ಪೂರ್ಣ ಪ್ರಮಾಣದ ನಿದ್ದೆ ಸಾಧ್ಯವಾಗುತ್ತದೆ.

ಆರೋಗ್ಯ – Udayavani – ಉದಯವಾಣಿ
Read More

Categories
Health

ಏಲಕ್ಕಿಗಿದೆ ಕ್ಯಾನ್ಸರ್ ಗುಣ ಮಾಡುವ ಶಕ್ತಿ ..!

ಸಾಂಬಾರು ಪದಾರ್ಥಗಳಲ್ಲಿ ಪ್ರಮುಖ ಎನ್ನಿಸಿಕೊಂಡಿರುವ ಏಲಕ್ಕಿಯನ್ನು ಔಷಧಿಯ ಸಸ್ಯವಾಗಿಯೂ ಬಳಸುತ್ತಾರೆ. ತನ್ನ ಪರಿಮಳದಿಂದಾಗಿಯೇ ಪ್ರಸಿದ್ಧಿ ಯಾಗಿರುವ ಏಲಕ್ಕಿ ಪಾಯಸ ಹಾಗೂ ಸಿಹಿ ತಿಂಡಿಗಳಲ್ಲಿಯೂ ಕೂಡ ಉಪಯೋಗಿಸುತ್ತಾರೆ.

ಏಲಕ್ಕಿ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಹೊಂದಿದೆ :

ಏಲಕ್ಕಿಯಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಇದೆ ಎಂದು ಸಂಶೋಧನೆಯ ಮೂಲಕ ತಿಳಿಯುತ್ತಿದ್ದಂತೆ, ವೈದ್ಯಕೀಯ ರಂಗದಲ್ಲಿ ಬಾರಿ ಬೇಡಿಕೆ ಉಂಟಾಗಿದೆ.

ಓದಿ :  ಬಿಜೆಪಿ ವಿರುದ್ಧ ನಾವೆಲ್ಲರೂ ಒಂದಾಗೋಣ : ಸೋನಿಯಾ ಮತ್ತು ಇತರ ನಾಯಕರಿಗೆ ಮಮತಾ ಪತ್ರ

ನಮ್ಮ ಹಿರಿಯರು ಪ್ರತಿದಿನವೂ ಏಲಕ್ಕಿಯ ಉಪಯೋಗವನ್ನು ಮನೆಗಳಲ್ಲಿ ಬಳಸುತ್ತಿದ್ದಿದ್ದು ಅವರ ಆರೋಗ್ಯ ಕಾಳಜಿಯನ್ನು ಪ್ರತಿ ಬಿಂಬಿಸುತ್ತಿದ್ದದ್ದು  ಸುಳ್ಳಲ್ಲ. ಅದಕ್ಕೆ ಮುಖ್ಯ ಕಾರಣ ಏಲಕ್ಕಿಯಲ್ಲಿರುವ ಕ್ಯಾನ್ಸರ್ ನಿರೋಧಕ  ಶಕ್ತಿ.

ಇನ್ನು, ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದಷ್ಟೆ ಅಲ್ಲದೇ, ಏಲಕ್ಕಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ.

ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಏಲಕ್ಕಿ ಸಹಕಾರಿ ಎಂದು ಹೇಳಲಾಗುತ್ತದೆ. ಇದು ಶ್ವಾಸಕೋಶ ಸಂಬಂಧೀ ಕಾಯಿಲೆಗಳನ್ನೂ ನಿವಾರಿಸುವ ಶಕ್ತಿಯನ್ನು ಕೂಡ ಹೊಂದಿದೆ.. ಏಲಕ್ಕಿ ಚಹ ಸೇವಿಸುವುದರಿಂದ ಖಿನ್ನತೆ ಮಾಯವಾಗುತ್ತದೆಯಂತೆ.

ಇನ್ನು, ರಕ್ತ ಸಂಚಾರ ಸರಾಗವಾಗಲು ಸಹಾಯಮಾಡುತ್ತದೆ. ನೆಗಡಿ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಸಂಶೋಧನೆಗಳ ಪ್ರಕಾರ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಏಲಕ್ಕಿಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳೂ ನಡೆಯುತ್ತಿವೆ. ಅತೀ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಏಲಕ್ಕಿ ಸಹಕಾರಿ. ಶ್ವಾಸಕೋಶದಲ್ಲಿ ನೋವುಂಟಾದರೆ ಏಲಕ್ಕಿ ಸೇವನೆಯಿಂದ ನಿವಾರಣೆಯಾಗುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು.ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಓದಿ :  FIR ಎಲ್ಲಿದೆ..? ನೀವು ಕಾನೂನಿಗಿಂತ ಮೇಲಿದ್ದೀರಾ..? : ಪರಮ್ ಗೆ ಬಾಂಬೆ ಹೈ ಕೋರ್ಟ್ ಪ್ರಶ್ನ

ಆರೋಗ್ಯ – Udayavani – ಉದಯವಾಣಿ
Read More

Categories
Tech

ಭಾರತದಲ್ಲಿ ಬಿಡುಗಡೆಗೊಂಡಿದೆ ಸ್ಯಾಮ್‌ ಸಂಗ್ ಗ್ಯಾಲಕ್ಸಿ s20 FE 5ಜಿ..! ವಿಶೇಷತೆಗಳೇನು..?

ನವ ದೆಹಲಿ :  ಸ್ಯಾಮ್‌ ಸಂಗ್ ಗ್ಯಾಲಕ್ಸಿ s20 FE 5ಜಿ ಅನ್ನು ಮಾರ್ಚ್ 31 ರ ಬುಧವಾರ ಭಾರತದಲ್ಲಿ ಬಿಡುಗಡೆಗೊಂಡಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ s 20 FE ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯುಎಸ್‌ ನಲ್ಲಿ 4 ಜಿ ಮತ್ತು 5 ಜಿ ಎರಡೂ ಮಾಡೆಲ್ ಗಳಲ್ಲಿ ಬಿಡುಗಡೆ ಮಾಡಿತ್ತು, ಆದರೆ ಅದರ 4 ಜಿ ಮಾಡೆಲ್ ನ್ನು ಮಾತ್ರ ಮುಂದಿನ ಅಕ್ಟೋಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದರ ಮೂಲಕ ಪರಿಚಯಿಸಲಾಗಿತ್ತು.

ಫೋನ್‌ ನ 5 ಜಿ ಮಾಡೆಲ್ Exynos 990 ಚಿಪ್ ಅನ್ನು ಒಳಗೊಂಡಿರುವ 4 ಜಿ ಮಾಡೆಲ್ ಗಿಂತ ಭಿನ್ನವಾಗಿ ಸ್ನಾಪ್‌ ಡ್ರಾಗನ್ 865 SoC ನಿಂದ ನಿಯಂತ್ರಿಸಲ್ಪಡುತ್ತದೆ.

ಭಾರತದಲ್ಲಿ ಸ್ಯಾಮ್‌ ಸಂಗ್ ಗ್ಯಾಲಕ್ಸಿ S20 FE5 ಜಿ ಬೆಲೆ, ಲಭ್ಯತೆ, ಕೊಡುಗೆಗಳು :

ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5 ಜಿ ಸಿಂಗಲ್ 8 ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ಮಾಡೆಲ್ ಗೆ 55,999 ರೂ. ಆದರೆ ಈ ಫೋನ್ ಅನ್ನು ಭಾರತದಲ್ಲಿ ರೂ. 47,999ಗೆ ಆಫರ್ ನಲ್ಲಿ ನೀಡುತ್ತಿದೆ. ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 4 ಜಿ ಬೆಲೆ ರೂ. 8ಜಿಬಿ  RAM ಮತ್ತು  ಸ್ಟೋರೇಜ್ ಮಾಡೆಲ್ ಗೆ 44,999 ರೂ. ಆಗಿದೆ.

ಇನ್ನು, ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5 ಜಿ ಯ ಆನ್‌ ಲೈನ್ ಆದರೆ ಸ್ಯಾಮ್‌ ಸಂಗ್ ಇಂಡಿಯಾ ಆನ್‌ ಲೈನ್ ಸ್ಟೋರ್, ಅಮೆಜಾನ್ ಮತ್ತು ಕಂಪನಿಯ ಸ್ವಂತ ಮತ್ತು ಪಾಲುದಾರ ಆಫ್‌ ಲೈನ್ ಸ್ಟೋರ್ ಗಳಲ್ಲೂ ಫೋನ್ ಖರೀದಿಗೆ ಲಭ್ಯವಿರುತ್ತದೆ ಎಂದು ಸ್ಯಾಮ್‌ ಸಂಗ್ ಹೇಳಿದೆ. ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5ಜಿ ಕ್ಲೌಡ್ ಲ್ಯಾವೆಂಡರ್, ಕ್ಲೌಡ್ ಮಿಂಟ್ ಮತ್ತು ಕ್ಲೌಡ್ ನೇವಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 5 ಜಿ ವಿಶೇಷತೆಗಳು  :

ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5 ಜಿ 6.5 ಇಂಚಿನ  ಫುಲ್ ಎಚ್‌ಡಿ + (1,080×2,400 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಇನ್ಫಿನಿಟಿ ಒ ಡಿಸ್ಪ್ಲೇ ಯನ್ನು ಹೊಂದಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 5 ಜಿ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 865 ಎಸ್‌ಒಸಿ ಯಿಂದ ನಿಯಂತ್ರಿಸಲ್ಪಡುತ್ತದೆ, ಇದು 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ನನ್ನು ಹಾಗೂ IP 68 ಡಸ್ಟ್ ಹಾಗೂ ವಾಟರ್  ರೆಸಿಸ್ಟೆಂಟ್ ನ್ನು ಸಹ ಹೊಂದಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5 ಜಿ ಮಾಡೆಲ್ ಅದರ 4 ಜಿ ಮಾಡೆಲ್ ನಂತೆಯೇ ಬ್ಯಾಕ್ ಆ್ಯಂಡ್ ಫ್ರಂಟ್ ಕ್ಯಾಮೆರಾಗಳನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಎಫ್ / 1.8 ವೈಡ್-ಆಂಗಲ್ ಲೆನ್ಸ್ ಹೊಂದಿರುವ 12 ಮೆಗಾಪಿಕ್ಸೆಲ್ ಪ್ರೈಮೆರಿ ಸೆನ್ಸಾರ್, ಅಲ್ಟ್ರಾ-ವೈಡ್-ಆಂಗಲ್ ಎಫ್ / 2.2 ಲೆನ್ಸ್ ಹೊಂದಿರುವ 12 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಇದು 30x ಸ್ಪೇಸ್ ಜೂಮ್ ಅನ್ನು ಸಹ ಹೊಂದಿದೆ. ಫೋನ್ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಎಫ್ / 2.0 ಲೆನ್ಸ್,  4,500mAh ಬ್ಯಾಟರಿಯನ್ನು ಹೊಂದಿದ್ದು ಅತ್ಯಾಕರ್ಷಕವಾಗಿದೆ.

ಓದಿ :   8 ಭಾಷೆಗಳಿಗೆ ಯು ಟರ್ನ್ ಚಿತ್ರ ರೀಮೇಕ್‌ ದಾಖಲೆ!

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Sports

ಐಪಿಎಲ್‌ನಲ್ಲಿ ಹೊಸತನ: ಈ ಬಾರಿಯ ಐಪಿಎಲ್‌ ನಿಯಮಗಳಲ್ಲಿ ಬಿಸಿಸಿಐನಿಂದ ಪ್ರಮುಖ ಬದಲಾವಣೆ

ಮುಂಬೈ: ಏ.9ರಿಂದ 14ನೇ ಆವೃತ್ತಿಯ ಐಪಿಎಲ್‌ ಆರಂಭವಾಗಲಿದೆ. ಇದರ ಗುಣಮಟ್ಟವನ್ನು ಎಲ್ಲ ರೀತಿಯಿಂದಲೂ ಸುಧಾರಿಸಲು ಬಿಸಿಸಿಐ ಕೆಲವು ಪ್ರಮುಖ ಬದಲಾವಣೆಗಳನ್ನು ಜಾರಿ ಮಾಡಲು ನಿರ್ಧರಿಸಲಿದೆ. ಅದರ ಚುಟುಕು ನೋಟ ಹೀಗಿದೆ.

ಡಿಆರ್‌ಎಸ್‌ ವೇಳೆ ಸಾಫ್ಟ್ ಸಿಗ್ನಲ್‌ ಇಲ್ಲ: ಮೈದಾನದಲ್ಲಿ ಅಂಪೈರ್‌ ನೀಡಿದ ತೀರ್ಪನ್ನು ಪ್ರಶ್ನಿಸಿ ತಂಡಗಳು ಡಿಆರ್‌ಎಸ್‌ಗೆ ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಡಿಆರ್‌ಎಸ್‌ ನಲ್ಲಿ ಗೊಂದಲ ಮುಂದುವರಿದರೆ, ಆಗ ಮತ್ತೆ ಅಂಪೈರ್‌ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಸಾಫ್ಟ್ ಸಿಗ್ನಲ್‌ ಎಂದು ಕರೆಯಲಾಗುತ್ತದೆ. ಇದನ್ನು ಬಿಸಿಸಿಐ ರದ್ದು ಮಾಡಿದೆ. ಡಿಆರ್‌ಎಸ್‌ ವೇಳೆ ಅಂತಿಮ ತೀರ್ಪನ್ನು ತೃತೀಯ ಅಂಪೈರ್‌ ಮಾತ್ರ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ನೋಬಾಲ್‌, ಶಾರ್ಟ್‌ ರನ್‌ ತೃತೀಯ ಅಂಪೈರ್‌ಗೆ: 2020ರ ಐಪಿಎಲ್‌ ನಲ್ಲಿ ಮೈದಾನದ ಅಂಪೈರ್‌ ಬ್ಯಾಟ್ಸ್‌ಮನ್‌ ಕ್ರೀಸ್‌ ಮುಟ್ಟಿಲ್ಲ ಎಂದು ತೀರ್ಪು ನೀಡಿದ್ದರು. ಅದರ ಪರಿಣಾಮ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್  ಎದುರು ಒಂದು ರನ್‌ ಸೋಲು ಎದುರಾದದ್ದು ನೆನಪಿರಬಹುದು. ಇದು ತೀವ್ರ ಚರ್ಚೆಗೂ ಕಾರಣವಾಗಿತ್ತು. ಹೀಗಾಗಿ ಈ ತೀರ್ಪನ್ನು ಬದಲಾಯಿಸಲು ಮೂರನೇ ಅಂಪೈರ್‌ಗೆ ಅಧಿಕಾರ ನೀಡಲಾಗಿದೆ. ನೋಬಾಲ್‌ ಕುರಿತು ಅಂತಿಮ ತೀರ್ಪು ಮೂರನೇ ಅಂಪೈರ್‌ ವ್ಯಾಪ್ತಿಗೆ ಬಂದಿದೆ.

ಇದನ್ನೂ ಓದಿ:  ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ

90 ನಿಮಿಷಗಳಲ್ಲಿ ಇನಿಂಗ್ಸ್‌ ಮುಗಿಯಬೇಕು: ಈ ಹಿಂದೆ ಐಪಿಎಲ್‌ ಪಂದ್ಯಗಳು ನಿಧಾನಗತಿಯ ಓವರ್‌ನಿಂದ ತಡವಾಗಿದ್ದನ್ನು ಇಲ್ಲಿ ಗಮನಿಸಬಹುದು. ಪಂದ್ಯಕ್ಕೆ ಯಾವುದೇ ಅಡಚಣೆ ಎದುರಾಗದೇ ಇದ್ದರೆ, 20 ಓವರ್‌ಗಳ ಒಂದು ಇನಿಂಗ್ಸ್‌ ಅನ್ನು 90 ನಿಮಿಷಗಳಲ್ಲಿ ಮುಗಿಸಲೇಬೇಕು ಎಂದು ಬಿಸಿಸಿಐ ಹೇಳಿದೆ. ಆಟಕ್ಕೆ 85 ನಿಮಿಷ, 5 ನಿಮಿಷ ವಿರಾಮ (ಟೈಮ್‌ ಔಟ್‌). ಹೀಗಾಗಿ ಒಬ್ಬ ಬೌಲರ್‌ಗೆ ಒಂದು ಓವರ್‌ ಎಸೆಯಲು 4 ನಿಮಿಷ, 15 ಸೆಕೆಂಡ್‌ ಲಭ್ಯವಾಗಲಿದೆ.

ಕ್ರೀಡೆ – Udayavani – ಉದಯವಾಣಿ
Read More

Categories
Cinema

ಅಣ್ಣಾವ್ರಂತೇ ನೇತ್ರದಾನದ ಪ್ರತಿಜ್ಞೆ ಮಾಡಿದ ಶಿವರಾಜ್‍ಕುಮಾರ್: 'ಅಕ್ಷಿ' ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ ಸೆಂಚುರಿ ಸ್ಟಾರ್

ಬೆಂಗಳೂರು: ಪ್ರತಿವರ್ಷ ರಾಜಸ್ಥಾನದ ಜೋಧಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ನಲ್ಲಿ ಸ್ಪರ್ಧೆಗೆ ಹಲವಾರು ದೇಶ ವಿದೇಶಗಳಿಂದ ಬಂದಿರುವ ಚಿತ್ರಗಳು ಸ್ಕ್ರೀನಿಂಗ್ ಆಗುತ್ತವೆ. ಕನ್ನಡದಿಂದ "ದಾರಿ ಯಾವುದಯ್ಯಾ ವೈಕುಂಠಕೆ" ಚಿತ್ರವೂ ಪ್ರದರ್ಶನ ಕಂಡು ಎಲ್ಲರಿಂದ ಉತ್ತಮ ಮೆಚ್ಚುಗೆ ಗಳಿಸಿದೆ.

ಅಂತಿಮ ಹಂತದಲ್ಲಿ ಉತ್ತಮ ಕಥೆಗಾಗಿ ನೀಡುವ ಪ್ರಶಸ್ತಿ ಈ ಚಿತ್ರದ ಪಾಲಾಗಿದೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಚಿತ್ರ ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ ಕಂಡು, 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ದೋಚಿಕೊಂಡಿದೆ. ಅದರಲ್ಲಿ ನಾಲ್ಕು ಕಡೆ "ಬೆಸ್ಟ್ ಡೈರೆಕ್ಟರ್" ಅವಾರ್ಡ್ ಬಂದಿದೆ. ಬಿಡುಗಡೆಗೂ ಮುನ್ನ ಎಲ್ಲಾ ಕಡೆ ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.

ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ 'ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರವನ್ನು ಸಿದ್ದು ಪೂರ್ಣಚಂದ್ರ ನಿರ್ದೇಶಿಸಿದ್ದಾರೆ.

ವರ್ಧನ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅನುಷ, 'ತಿಥಿ' ಚಿತ್ರದ ಖ್ಯಾತಿ ಪೂಜಾ, ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್‌ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್. ಸುಚಿತ್, ಮೈಸೂರು ಬಸವರಾಜ್ ಮುಂತಾದವರಿದ್ದಾರೆ. ಲೋಕಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More