ಬೈಕ್, ಸ್ಕೂಟರ್‌ಗೆ ಕಾರು ಡಿಕ್ಕಿ – ಸವಾರರಿಗೆ ಗಂಭೀರ ಗಾಯ

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬೈಕ್ ಹಾಗೂ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಕೊಡಗಿನ ವಿರಾಜಪೇಟೆಯ ಪಂಜರುಪೇಟೆಯಲ್ಲಿ ನಡೆದಿದೆ. ಸದ್ಯ ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರರಿಬ್ಬರಿಗೂ ಬಲವಾಗಿ ಪೆಟ್ಟಾಗಿದ್ದು, ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ಪ್ರಥಮ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ವಿರಾಜಪೇಟೆಯಿಂದ ಗೋಣಿಕೊಪ್ಪ ಕಡೆ ಹೋಗುತ್ತಿದ್ದ ಸ್ಕೂಟರ್ ಹಾಗೂ ಬೈಕ್‍ಗೆ, ಗೋಣಿಕೊಪ್ಪ ಕಡೆಯಿಂದ ಬರುತ್ತಿದ್ದ ಕಾರು, ಪಟ್ಟಣದ ಪಂಜಾರುಪೇಟೆಯಲ್ಲಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸ್ಕೂಟರ್ ಚಾಲಕ ಪೊನ್ನಂಪೇಟೆ …

ಬೆಂಗಳೂರು ಮೇಲೆ ರಾಹುಲ್ ದಾಳಿ – ಪಂಜಾಬ್‍ಗೆ 35 ರನ್‍ಗಳ ಜಯ

– 5ನೇ ಸ್ಥಾನಕ್ಕೆ ಏರಿದ ಪಂಜಾಬ್ – 3ನೇ ಸ್ಥಾನದಲ್ಲಿ ಮುಂದುವರಿದ ಬೆಂಗಳೂರು ಅಹಮದಾಬಾದ್: ಕೆ.ಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್‍ನಿಂದಾಗಿ ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 35 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ. ಗೆಲುವಿಗೆ 180 ರನ್‍ಗಳ ಗುರಿ ಪಡೆದ ಆರ್​ಸಿಬಿ ತಂಡ 20 ಓವರ್‍ ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೆ ಶಕ್ತವಾಯಿತು. ಈ ಮೂಲಕ ಪಂಜಾಬ್ ತಂಡ 5ನೇ ಸ್ಥಾನಕ್ಕೆ ಏರಿದೆ. ಪಂಜಾಬ್ ಪರ ಉತ್ತಮ …

ಈ ವಾರ ಸುದೀಪ್ ಬಿಗ್ ಬಾಸ್ ಶೋ ಹೋಸ್ಟ್ ಮಾಡಲ್ಲ

ಬೆಂಗಳೂರು: ಬಿಗ್ ಬಾಸ್ ಅಭಿಮಾನಿಗಳಿಗೆ ಈ ವಾರ ನಿರಾಸೆ ಕಾದಿದೆ. ಸುದೀಪ್ ಅವರು ಈ ವಾರ ಭಾಗವಹಿಸುವುದಿಲ್ಲ ಎಂದು ವಾಹಿನಿ ತಿಳಿಸಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ ವಾಹಿನಿ, ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ತಿಳಿಸಿದೆ. ಸದ್ಯ ಇರುವ ಸಂಕಷ್ಟದ …

ದೊಡ್ಮನೆ ಸ್ಪರ್ಧಿಗಳ ಬಗ್ಗೆ ಕಮೆಂಟ್ ಪಾಸ್ ಮಾಡಿದ ಪ್ರಶಾಂತ್!

ಬಿಗ್‍ಬಾಸ್ ಮನೆಯಲ್ಲಿ 36 ಗಂಟೆಗಳ ಕಾಲ ಊಟ ಮಾಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಪ್ರಶಾಂತ್ ಸಂಬರ್ಗಿ ಮನೆಯ ಸದಸ್ಯರ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ ಜೊತೆ ಲಿವಿಂಗ್ ಏರಿಯಾದಲ್ಲಿ ಕುಳಿತು ಪ್ರಶಾಂತ್ ಮಾತನಾಡುತ್ತಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮನೆಯ ಸ್ಪರ್ಧಿಗಳ ಹೆಸರನ್ನು ಒಂದೊಂದಾಗಿ ಹೇಳಿಕೊಂಡು ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರಶಾಂತ್ ಸಂಬರಗಿ ಉತ್ತರಿಸುತ್ತಾ ಹೋಗಿದ್ದಾರೆ. ಮೊದಲಿಗೆ ದಿವ್ಯಾ ಸುರೇಶ್ ಎಂದು ಚಕ್ರವರ್ತಿ ಹೇಳಿದಾಗ, ಗ್ಯಾಲರಿಯಲ್ಲಿ ಆಡುತ್ತಿದ್ದಾಳೆ ಮಂಜು ಶಿಷ್ಯೆ, ನಾನು ಡಿಫರೆಂಟ್, ನಾನು …

ಆರ್​​ಸಿಬಿ V/S ಪಂಜಾಬ್​; ಬೆಂಗಳೂರಿಗೆ ಸೋಲು.. ಕನ್ನಡಿಗನಿಗೆ ಭರ್ಜರಿ ಗೆಲುವು

ಹೈದರಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್​ನ 26 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಟೀಂ ಮುಖಾಮುಖಿಯಾಗಿದ್ದವು. ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರು ಟೀಂ ಪಂಜಾಬ್ ಟೀಂನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತ್ತು. ಕನ್ನಡಿಗ ಕೆ. ಎಲ್​. ರಾಹುಲ್ ಭರ್ಜರಿ ಆಟದ ಫಲವಾಗಿ 20 ಓವರ್​ಗಳಲ್ಲಿ ಪಂಜಾಬ್ ಟೀಂ 5 ವಿಕೆಟ್​ ಕಳೆದುಕೊಂಡು 179 ರನ್ ಗಳಿಸಿತ್ತು. 180 ರನ್​ಗಳ ಬೆನ್ನಟ್ಟಿದ ಆರ್​ಸಿಬಿ ಗೆಲುವಿನ ದಡ ಮುಟ್ಟಲಾಗದೇ ಸೋಲೊಪ್ಪಿಕೊಳ್ತು. ಪಂಜಾಬ್​ 34 ರನ್​ಗಳ …

ದೊಡ್ಮನೆಯಿಂದ ಪಿಕ್‍ನಿಕ್ ಹೋಗ್ಬೇಕಂತೆ ಶುಭಾ ಪೂಂಜಾ!

ಸದಾ ಹೊರಗಡೆ ಸುತ್ತಾಡಿಕೊಂಡಿದ್ದ ಸೆಲೆಬ್ರೆಟಿಗಳಿಗೆ ದೊಡ್ಮನೆಯಲ್ಲಿ ಒಂದು ರೀತಿ ಕಾಲು ಕಟ್ಟು ಹಾಕಿದಂತೆ ಆಗಿದೆ ಎಂದೇ ಹೇಳಬಹುದು. ಸದ್ಯ ಹೊರ ಪ್ರಪಂಚದಿಂದ ದೂರ ಇರುವ ಶುಭಾ ಪೂಂಜಾ ಪಿಕ್‍ನಿಕ್ ಹೋಗಬೇಕೆಂಬ ಆಸೆಯನ್ನು ಹೇಳಿಕೊಂಡಿದ್ದಾರೆ. ತಮ್ಮ ಮುಗ್ದ ಮಾತು ಹಾಗೂ ತುಂಟತನದ ಮೂಲಕವೇ ಕನ್ನಡಿಗರ ಮನಗೆಲ್ಲುತ್ತಿರುವ ಶುಭಾ ಪೂಂಜಾ ಬೆಳಗ್ಗೆ ಎದ್ದ ಕೂಡಲೇ ದಿವ್ಯಾ ಉರುಡುಗ ಜೊತೆ ಪಿಕ್‍ನಿಕ್ ಹೋಗಬೇಕು ಎಂದಿದ್ದಾರೆ. ಇಂದು ಬಿಗ್‍ಬಾಸ್ ನಮ್ಮನ್ನು ಬೇಗ ಎಬ್ಬಿಸಿದ್ದಾರಾ, ಇವತ್ತು ವೆದರ್ ಬಹಳ ಚೆನ್ನಾಗಿ ಉಂಟು ಅಲ್ವಾ ಎಂದು …

ಚಿಕ್ಕಬಳ್ಳಾಪುರ ಸೋಂಕಿತರಿಗೆ ಬೆಂಗಳೂರಲ್ಲಿ ಬೆಡ್​ ಮೀಸಲಿಡಿ.. ಸುಧಾಕರ್ ಆದೇಶ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಏರಿಕೆಯಾಗುತ್ತಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ಜನರು ಬೆಡ್​ ಸಿಗದೇ ಪರಿತಪಿಸುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಈ ಮಧ್ಯೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಮ್ಮ ಕ್ಷೇತ್ರ ಚಿಕ್ಕಬಳ್ಳಾಪುರದ ಸೋಂಕಿತರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​ಗಳನ್ನು ಬುಕ್​ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಧಾಕರ್.. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳದ ಕೊಲಂಬಿಯಾ ಏಷ್ಯಾ, ಬ್ಯಾಪ್ಟಿಸ್ಟ್ ಹಾಗೂ ಸಹಕಾರ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಗಳಲ್ಲಿ ಶೇ.15% …

ನಗರ ಆಯ್ತು – ಈಗ ಗ್ರಾಮೀಣ ಭಾಗದಲ್ಲೂ ಕೊರೊನಾ ಸ್ಫೋಟ

ಬೆಂಗಳೂರು: ನಗರ ಪ್ರದೇಶಗಳಲ್ಲಿ ಸ್ಫೋಟಗೊಳ್ಳುತ್ತಿರುವ ಕೊರೊನಾ ಈಗ ಗ್ರಾಮೀಣ ಭಾಗದಲ್ಲೂ ಸ್ಫೋಟಗೊಳ್ಳಲು ಆರಂಭವಾಗಿದೆ. ಜನತಾ ಲಾಕ್‍ಡೌನ್ ಘೋಷಣೆ ಬೆನ್ನಲ್ಲೇ ಜನರು ಬೆಂಗಳೂರು ಸಹವಾಸ ಬೇಡ ಅಂತ ತಮ್ಮ ಊರುಗಳತ್ತ ದಾಂಗುಡಿ ಇಟ್ಟಿದ್ದರು. ಕೋವಿಡ್ ಟೆಸ್ಟ್ ಬಗ್ಗೆ ತಲೆಯೂ ಕೆಡಿಸಿಕೊಳ್ಳದೇ ಸಿಕ್ಕ ಸಿಕ್ಕ ವಾಹನಗಳಲ್ಲಿ ಹಳ್ಳಿಗಳಿಗೆ ದೌಡಾಯಿಸಿದ್ರು. ಆದ್ರೀಗ ಬೆಂಗಳೂರಿನಿಂದ ಹೋದವರೇ ತಮ್ಮ ಹಳ್ಳಿಗಳಿಗೇ ಕೊರೋನಾ ಕಂಟಕವಾಗೋ ಆತಂಕ ಮನೆ ಮಾಡಿದೆ. ಚಿಂತಾಮಣಿಯ ಕುರಟಳ್ಳಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಉಸಿರಾಟದ ಸಮಸ್ಯೆ ಉಂಟಾಗಿ ನಡುಬೀದಿಯಲ್ಲಿ ಕುಸಿದುಬಿದ್ದ ಮಹಿಳೆಯ ನೆರವಿಗೆ …