ಈ ದಡದಿಂದ ಆ ದಡಕ್ಕೆ ಈಜುತ್ತೇನೆ ಅಂತಾ ನೀರಲ್ಲಿ ಮುಳುಗಿದವನು ಮೇಲೆ ಬರಲೇ ಇಲ್ಲ

ಗದಗ: ಹಿರಿಯರು ಹೇಳುವ ಒಂದು ಮಾತು ನಿಮಗೆ ನೆನಪಿರಬಹುದು.. ನೀರು, ಬೆಂಕಿಯ ಜೊತೆ ಎಂದಿಗೂ ಸರಸಕ್ಕೆ ಇಳಿಯಬಾರದು ಅಂತಾ.. ಆದ್ರೆ ಇಲ್ಲೊಬ್ಬ ಯುವಕ ಜಿದ್ದಿಗೆಬಿದ್ದು ಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಬಿಂಕದಕಟ್ಟಿ ಬಳಿ ನಡೆದಿದೆ. ಗಂಗಿಮಡಿ ಕಾಲೋನಿಯ ನಿವಾಸಿ ಆಕಾಶ್ ಮೃತ ಯುವಕ. ರೈಲ್ವೇ ಕಾಮಗಾರಿ ವೇಳೆ ಸುಮಾರು 30 ಅಡಿಯಷ್ಟು ಹೊಂಡ ತೆಗೆಯಲಾಗಿತ್ತು. ಹೀಗಾಗಿ ಅಲ್ಲಿ ಮಳೆ ನೀರು ನಿಂತು ಹೊಂಡವಾಗಿ ಪರಿವರ್ತನೆಯಾಗಿದೆ. ಹೀಗಾಗಿ ಅಲ್ಲಿ ಪ್ರತಿನಿತ್ಯ ಬಿಂಕದಕಟ್ಟಿ, ಗಂಗಿಮಡಿ, ಒಕ್ಕಲಿಗರ …

3ನೇ ದಿನದ ಕ್ಲೋಸ್​ಡೌನ್​.. ಒಂದೇ ದಿನ 1,610 ವೆಹಿಕಲ್​ಗಳು ಪೊಲೀಸರಿಂದ ಸೀಜ್

ಬೆಂಗಳೂರು: ರಾಜ್ಯ ಸರ್ಕಾರ ಕ್ಲೋಸ್​ ಡೌನ್​ ಜಾರಿ ಮಾಡಿ ಮೂರು ದಿನಗಳೇ ಕಳೆದಿದೆ. ಈ ಸಮಯದಲ್ಲಿ ಅನಾವಶ್ಯಕವಾಗಿ ಜನರು ರಸ್ತೆಗಳಲ್ಲಿ ಓಡಾಡಬಾರದು ಅಂತ ಕಟ್ಟುನಿಟ್ಟಾಗಿ ಹೇಳಿದ್ರೂ ಕೆಲವರು ಮಾತ್ರ ರೂಲ್ಸ್ ಬ್ರೇಕ್ ಮಾಡುತ್ತಲೇ ಇದ್ದಾರೆ. ಹೀಗೆ ಅನಿವಾರ್ಯ ಅಲ್ಲದಿದ್ದರೂ ರಸ್ತೆಗಿಳಿದಿದ್ದ ವಾಹನಗಳನ್ನ ಮೂರನೇ ದಿನವೂ ಅಡ್ಡಗಟ್ಟಿದ ಪೊಲೀಸರು ಇಂದು ಬರೋಬ್ಬರಿ 1,610 ವಾಹನಗಳನ್ನ ಸೀಜ್ ಮಾಡಿದ್ದಾರೆ. ನಗರದ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಖಾಸಗಿ ವಾಹನಗಳನ್ನ ಜಪ್ತಿ ಮಾಡಿದ್ದಾರೆ. ಈ ವಾಹನಗಳ ಪೈಕಿ 1,450 ದ್ವಿಚಕ್ರವಾಹನಗಳು ಜಪ್ತಿಯಾಗಿವೆ. …

ವಿದ್ಯುತ್ ಪ್ರವಹಿಸಿ ಜಾನುವಾರು ಸಾವು – ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

ಮಡಿಕೇರಿ: ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಪ್ರವಹಿಸಿ ಜಾನುವಾರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಗಂಧದಕೋಟಿಯಲ್ಲಿ ನಡೆದಿದೆ. ಗಂಧದಕೋಟಿಯಿಂದ ಗೊಂದಿಬಸವನಹಳ್ಳಿಗೆ ತೆರಳುವ ಮಾರ್ಗದ ಕೆಎಂಟಿ ವಿದ್ಯಾಸಂಸ್ಥೆ ಬಳಿ ಈ ದುರ್ಘಟನೆ ನಡೆದಿದೆ. ಮುಖ್ಯರಸ್ತೆ ಬದಿಯಲ್ಲಿ ಅಳವಡಿಸಿದ್ದ ಟ್ರಾನ್ಸ್ ಫಾರ್ಮರ್ ಬಳಿ ಮೂರು ಜಾನುವಾರುಗಳು ಮೇಯುತ್ತಿದ್ದವು. ಈ ಸಂದರ್ಭ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಪ್ರವಹಿಸಿದೊಡನೆ ಎರಡು ಜಾನುವಾರುಗಳು ಪಾರಾಗಿದೆ. ಆದರೆ ಗೊಂದಿಬವನಹಳ್ಳಿಯ ಮಂಜುನಾಥ್ ಎಂಬವರಿಗೆ ಸೇರಿದ 2 ವರ್ಷ ಪ್ರಾಯದ ಸಿಂಧಿ ಹಸು ಸ್ಥಳದಲ್ಲೇ …

ನಮೋ ಸ್ಟೇಡಿಯಂನಲ್ಲಿ ಕನ್ನಡಿಗ ರಾಹುಲ್ ಕಮಾಲ್.. ಆರ್​ಸಿಬಿಗೆ 180 ರನ್​ಗಳ ಟಾರ್ಗೆಟ್​​

ಹೈದರಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್​ನ 26 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಟೀಂ ಮುಖಾಮುಖಿಯಾಗಿವೆ. ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರು ಟೀಂ ಪಂಜಾಬ್ ಟೀಂನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಕನ್ನಡಿಗ ಕೆ. ಎಲ್​. ರಾಹುಲ್ ಭರ್ಜರಿ ಆಟವಾಡಿ 91 ರನ್​ ಗಳಿಸಿದ್ರು. 20 ಓವರ್​ಗಳಲ್ಲಿ ಪಂಜಾಬ್ ಟೀಂ 5 ವಿಕೆಟ್​ ಕಳೆದುಕೊಂಡು 179 ರನ್ ಗಳಿಸಿದೆ. ಬೆಂಗಳೂರು ಟೀಂಗೆ 180 ರನ್​ಗಳ ಟಾರ್ಗೆಟ್​ ನೀಡಿದೆ. ಇನ್ನು ಪಂಜಾಬ್​ ಪರ …

ಮಕ್ಕಳಾಗದ ಕೊರಗು – 58ರ ಮಹಿಳೆ ಆತ್ಮಹತ್ಯೆ

ಚಿಕ್ಕಮಗಳೂರು: ಮಕ್ಕಳಾಗಿಲ್ಲ ಎಂದು ಮನನೊಂದು 58 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನ 58 ವರ್ಷದ ಮಲ್ಲಿಗಮ್ಮ ಎಂದು ಗುರುತಿಸಲಾಗಿದೆ. ಮೃತ ಮಲ್ಲಿಗಮ್ಮ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹುಂಡಿಗನಾಳು ಗ್ರಾಮದ ಮಹಾದೇವಪ್ಪ ಎಂಬವರೊಂದಿಗೆ ಸುಮಾರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ವೈವಾಹಿಕ ಜೀವನದಲ್ಲಿ ಬಿರುಕು ಕಂಡಿತ್ತು. ಜಗಳ ಕೂಡ ನಡೆಯುತ್ತಿತ್ತು. ಒಂದೆಡೆ ಮಕ್ಕಳಾಗಿಲ್ಲ. ಮತ್ತೊಂದೆಡೆ ಗಂಡನ …

ಮಂತ್ರಾಲಯದ ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಆಚಾರ್ ವಿಧಿವಶ

ರಾಯಚೂರು: ಕೊರೊನಾ ಸೋಂಕಿನಿಂದಾಗಿ ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಆಚಾರ್ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಇಂದು ಸಂಜೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಯಮೀಂದ್ರ ಆಚಾರ್ ಅವರು ಶ್ರೀಮಠದ ಪೂರ್ವ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥರ ಪೂರ್ವಾಶ್ರಮದ ಪುತ್ರ. The post ಮಂತ್ರಾಲಯದ ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಆಚಾರ್ ವಿಧಿವಶ appeared first on News First Kannada. Source: newsfirstlive.com Source link

ಭಾರತದ ಎದುರಿಸುತ್ತಿರೋ ಕೊರೊನಾ ಸಂಕಷ್ಟಕ್ಕೆ ನೆರವಾಗ್ತೇವೆ- ಪ್ರಧಾನಿಗೆ ಚೀನಾ ಅಧ್ಯಕ್ಷರ ಪತ್ರ

ಕೊರೊನಾ ಎರಡನೇ ಅಲೆ ಹೊಡೆತಕ್ಕೆ ಭಾರತ ತತ್ತರಿಸಿ ಹೋಗಿದೆ. ಈ ನಡುವೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಚೀನಾ ಅಧ್ಯಕ್ಷ ಕ್ಸಿ ಜಿಂನ್​​​ಪಿಂಗ್, ಭಾರತಕ್ಕೆ ಅಗತ್ಯ ನೆರವು ನೀಡುವ ಮಾತನಾಡಿದ್ದಾರೆ. ಕೊರೊನಾ ಸಂಕಷ್ಟದ ವಿರುದ್ಧ ಹೋರಾಟ ಮಾಡಲು ಭಾರತಕ್ಕೆ ಅಗತ್ಯ ನೆರವು ನೀಡುವ ಕಾರ್ಯಕ್ಕೆ ನೆರವಾಗುತ್ತೇವೆ. ಅಗತ್ಯ ಬೆಂಬಲ, ಸಹಾಯ ಮಾಡಲು ಸಿದ್ಧವಾಗಿದ್ದೇವೆ. ಚೀನಾ ಸರ್ಕಾರ ಹಾಗೂ ಜನರ ಪರ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ. Chinese President #XiJinping sends a message of sympathy …

ಕೊಹ್ಲಿಗೆ ಡ್ಯೂಕ್ ಬಾಲ್ ಹಾಕಲು ನಿರಾಕರಿಸಿದ ಕೈಲ್ ಜೇಮಿಸನ್

ಡೆಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ತಂಡದ ಸದಸ್ಯ ಕೈಲ್ ಜೇಮಿಸನ್ ಅಭ್ಯಾಸದ ವೇಳೆ ಡ್ಯೂಕ್ ಬಾಲ್ ಹಾಕಲು ನಿರಾಕರಿಸಿದ್ದಾರೆ. ಇದು ಇದೀಗ ಬಾರಿ ಸುದ್ದಿಯಾಗುತ್ತಿದೆ. 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಭಾಗವಹಿಸಿರುವ ನ್ಯೂಜಿಲೆಂಡ್ ತಂಡದ ಆಲ್‍ರೌಂಡರ್ ಕೈಲ್ ಜೇಮಿಸನ್ ಆರ್​ಸಿಬಿ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆ ಆರ್​ಸಿಬಿ ತಂಡದ ಅಭ್ಯಾಸದ ವೇಳೆ ವಿರಾಟ್, ಜೇಮಿಸನ್ ಅವರೊಂದಿಗೆ ಡ್ಯೂಕ್ ಬಾಲ್ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಜೇಮಿಸನ್ ನಾನು …

ಮಗಳು ಜಾನಕಿ ಗಾಯಕಿಯಿಂದ ಮತ್ತೊಂದು ಬ್ಯೂಟಿಫುಲ್​ ಟ್ರ್ಯಾಕ್​

The post ಮಗಳು ಜಾನಕಿ ಗಾಯಕಿಯಿಂದ ಮತ್ತೊಂದು ಬ್ಯೂಟಿಫುಲ್​ ಟ್ರ್ಯಾಕ್​ appeared first on News First Kannada. Source: newsfirstlive.com Source link