ಮಗನ ಔಷಧಿ ತರಲು ಬೆಂಗಳೂರಿಗೆ ಸೈಕಲ್ ನಲ್ಲಿ ಹೋಗಿ ಬಂದ ಅಪ್ಪ

– 280 ಕಿ.ಮೀ. ಸೈಕಲ್ ತುಳಿದ ತಂದೆ ಮೈಸೂರು: ಕೊರೊನಾ ಲಾಕ್‍ಡೌನ್ ಪರಿಣಾಮವಾಗಿ ಮಗನ ಔಷಧಿಗಾಗಿ ತಂದೆ 280 ಕಿಲೋಮೀಟರ್ ಸೈಕಲ್ ತುಳಿದುಕೊಂಡು ಬೆಂಗಳೂರಿಗೆ ಹೋಗಿ ಬಂದಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗಾರೆ ಕೆಲಸಗಾರರಾಗಿರುವ ಆನಂದ್ ಅವರು ಮಗನಿಗಾಗಿ 280 ಕಿಲೋಮೀಟರ್, ಮೂರು ದಿನಗಳ ಕಾಲ ಸೈಕಲ್ ತುಳಿದು ಔಷಧಿ ತಂದಿರುವವರು. ಆನಂದ್ ಅವರ ಮಗ ಮಾನಸಿಕ ವಿಶೇಷ ಚೇತನನಾಗಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ …

‘ಕೋವಿಶೀಲ್ಡ್ ವ್ಯಾಕ್ಸಿನ್ ತಗೊಂಡ್ರೂ ಆ್ಯಂಟಿಬಾಡಿ ಬೆಳೆದಿಲ್ಲ’- ಪೂನಾವಾಲಾ ವಿರುದ್ಧ ದೂರು

ಲಖನೌ: ಉತ್ತರಪ್ರದೇಶ ಮೂಲದ ವ್ಯಕ್ತಿಯೋರ್ವ ತಾನು ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದು ತನ್ನ ದೇಹದಲ್ಲಿ ಯಾವುದೇ ರೀತಿಯ ಆ್ಯಂಟಿ ಬಾಡೀಸ್​ ಬೆಳವಣಿಗೆಯಾಗಿಲ್ಲ.. ಬದಲಿಗೆ ತನ್ನ ದೇಹದ ರಕ್ತಕಣಗಳು 3 ಲಕ್ಷದಿಂದ 1.5 ಲಕ್ಷಕ್ಕೆ ಕುಸಿದಿದೆ. ಸದ್ಯ ನಾನು ಕೊರೊನಾ ವೈರಸ್​​​ಗೆ ಹೆಚ್ಚು ತೆರೆದುಕೊಂಡಂತಾಗಿದೆ ಎಂದು ಕೇಸ್ ದಾಖಲಿಸಿದ್ದಾರೆ. ಸೀರಮ್ ಇನ್​ಸ್ಟಿಟ್ಯೂಟ್ ಸಿಇಓ ಆದಾರ್ ಪೂನಾವಾಲಾ, ಡಿಸಿಜಿಎ ನಿರ್ದೇಶಕ, ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್​ವಾಲ್. ಐಸಿಎಂಆರ್​ ನಿರ್ದೇಶಕ ಬಲ್ರಾಮ್ ಭಾರ್ಗವ ಮತ್ತು ನ್ಯಾಷನಲ್ ಹೆಲ್ತ್ ಮಿಷನ್ ನಿರ್ದೇಶಕ …

ಸರಳವಾಗಿ ಪಾರ್ವತಮ್ಮ ರಾಜ್ ಕುಮಾರ್ ಪುಣ್ಯಸ್ಮರಣೆ ನೆರವೇರಿಸಿದ ದೊಡ್ಮನೆ ಕುಟುಂಬ

ಬೆಂಗಳೂರು: ಕನ್ನಡ ನಾಡು ಕಂಡ ಅತ್ಯುತ್ತಮ ನಟ ರಾಜ್​ ಕುಮಾರ್ ಅವರ ಪತ್ನಿ, ನಿರ್ಮಾಪಕಿ ದಿ. ಪಾರ್ವತಮ್ಮ ರಾಜ್​ ಕುಮಾರ್ ಅವರ ಪುಣ್ಯಸ್ಮರಣೆಯನ್ನ ಸರಳವಾಗಿ ನಡೆಸಲಾಗಿದೆ. ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಸೇರಿದಂತೆ ಇಡೀ ಕುಟುಂಬ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು. ಲಾಕ್​ಡೌನ್​ ಇದ್ದ ಹಿನ್ನೆಲೆ ಸರಳವಾಗಿ ಪೂಜೆ ನೆರವೇರಿಸಲಾಗಿದೆ. The post ಸರಳವಾಗಿ ಪಾರ್ವತಮ್ಮ ರಾಜ್ ಕುಮಾರ್ ಪುಣ್ಯಸ್ಮರಣೆ ನೆರವೇರಿಸಿದ ದೊಡ್ಮನೆ ಕುಟುಂಬ appeared first on News First Kannada. Source: newsfirstlive.com Source …

ಬ್ಲ್ಯಾಕ್ ಫಂಗಸ್​ ಭೀತಿಯಿಂದ ಟೆರೇಸ್​ ಮೇಲೆ ಕೀಟನಾಶಕ ಕುಡಿದು ಮೃತಪಟ್ಟ 80ರ ವೃದ್ಧ

ಕೊರೊನಾ ಸೋಂಕಿನಿಂದ ಗುಣಮುಖರಾದ ಕೆಲವರಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕೊರೊನಾದಿಂದ ಗುಣಮುಖನಾದ 80 ವರ್ಷದ ವೃದ್ಧನೋರ್ವ ಬ್ಲ್ಗ್ಯಾಕ್ ಫಂಗಸ್ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಕೊರೊನಾದಿಂದ ಗುಣಮುಖನಾಗಿದ್ದ ವೃದ್ಧನ ಬಾಯಿಯಲ್ಲಿ ಹುಣ್ಣಾಗಿತ್ತು ಎನ್ನಲಾಗಿದೆ. ಇದು ಬ್ಲ್ಯಾಕ್​ ಫಂಗಸ್​ನ ಗುಣಲಕ್ಷಣ ಎಂದು ಆತಂಕಕ್ಕೊಳಗಾದ ವೃದ್ಧ ತನ್ನ ಮನೆಯ ಟೆರೇಸ್​ ಮೇಲೆ ಇಟ್ಟಿದ್ದ ಕೀಟನಾಶಕ ಕುಡಿದಿದ್ದಾರೆ. ತಕ್ಷಣ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ …

ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್

ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡುವ ಮತ್ತು ವ್ಯಾಸಂಗ ಮಾಡುತ್ತಿರುವವರಿಗೆ ಸಿಹಿ ಸುದ್ದಿ. ಆದ್ಯತಾ ಗುಂಪಿನ ಕೋಟಾದಲ್ಲಿ ಅವರಿಗೆ ಮಂಗಳವಾರದಿಂಲೇ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಮಂಗಳವಾರ 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಅವಶ್ಯಕತೆ ಇದ್ದವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು. …

ನಟ ಅಜಯ್​ರಾವ್ ಮೇಕಪ್​ ಮ್ಯಾನ್ ಕೊರೊನಾ ಸೋಂಕಿನಿಂದಾಗಿ ಸಾವು

ನಟ ಅಜಯ್ ರಾವ್ ಅವರ ಮೇಕಪ್ ಮ್ಯಾನ್ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಜಯ್ ರಾವ್ ಸಾವಿನ ಸುದ್ದಿಯನ್ನ ಹಂಚಿಕೊಂಡಿದ್ದು ಸಂತಾಪ ಸೂಚಿಸಿದ್ದಾರೆ. ಜಯರಾಮ್ ನನ್ನ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದರು. ಕಳೆದ 11 ವರ್ಷಗಳಿಂದ ನನ್ನ ಜೊತೆಗೆ ಇದ್ದವರು. ಇಂದು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಬರೆದುಕೊಂಡಿರುವ ಅಜಯ್ ರಾವ್ ಜಯರಾಮ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. The post ನಟ ಅಜಯ್​ರಾವ್ ಮೇಕಪ್​ ಮ್ಯಾನ್ ಕೊರೊನಾ ಸೋಂಕಿನಿಂದಾಗಿ ಸಾವು appeared first on News First …

ಹುಟ್ಟಿದ 2 ಗಂಟೆಯಲ್ಲೇ ಕಳುವಾಗಿದ್ದ ಮಗು ಕೊನೆಗೂ ಪತ್ತೆ: ನಿಟ್ಟುಸಿರು ಬಿಟ್ಟ ತಾಯಿ

ಬೆಂಗಳೂರು: ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ವರ್ಷ ಕಳುವಾಗಿದ್ದ ಮಗುವನ್ನ ಬಸವನಗುಡಿ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಮಗು ಕದ್ದ ವೈದ್ಯೆಯನ್ನೂ ಅರೆಸ್ಟ್ ಮಾಡಲಾಗಿದೆ. ಇನ್ನು ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಕಳುವಾಗಿದ್ದ ನೋವಿನಲ್ಲಿ ಒಂದಿಡೀ ವರ್ಷ ಕಳೆದ ಮಗುವಿನ ತಾಯಿ ಕೊನೆಗೂ ಮಗು ಸಿಕ್ಕ ಖುಷಿಯಲ್ಲಿದ್ದಾರೆ. ಮಗುವಿನ ತಾಯಿ ಇಸ್ನಾ ಭಾನು ತಮ್ಮ ಖುಷಿಯನ್ನ ಹಂಚಿಕೊಂಡಿದ್ದು ನಾವು ಒಂದು ವರ್ಷ ಮಗುಗಾಗಿ ಅಲೆದಾಟ ನಡೆದಿದ್ದೇವೆ. ಅದಾದ ಬಳಿಕ ಹೈಕೋರ್ಟ್ ಹೋಗಿದ್ವಿ.. ಮಗು ಸಿಗುತ್ತೆ ಅನ್ನೋ …

ಬೆಂಗಳೂರಿನ ಬಹುಪಾಲು ಪೊಲೀಸರು ಕೊರೊನಾದಿಂದ ಸೇಫ್​.. ಹೇಗೆ ಗೊತ್ತಾ..?

ಬೆಂಗಳೂರು: ಕೋವಿಡ್ ವಾಕ್ಸಿನ್ ಪಡೆದ ಬಹುಪಾಲು ಬೆಂಗಳೂರು ನಗರ ಪೊಲೀಸರು ಸೇಫ್ ಆಗಿದ್ದಾರೆ. ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಆದ ಶೇ.96.1% ಪೊಲೀಸ್ರಿಗೆ ವಾಕ್ಸಿನೇಷನ್ ಆಗಿದೆ. ನಗರದಲ್ಲಿರುವ 21 ಸಾವಿರದ 130 ಪೊಲೀಸರ ಪೈಕಿ ಇದುವರೆಗೂ ಮೊದಲ ಡೋಸ್ ಪಡೆದವರು 18,297.. ಇನ್ನು ಈ ಪೈಕಿ 15,093 ಪೊಲೀಸರು ಎರಡೂ ಡೋಸ್​ ಪಡೆದುಕೊಂಡಿದ್ದಾರೆ. ಈಗಿನ ಎರಡನೇ ಅಲೆಯಲ್ಲಿ ಬೆಂಗಳೂರಿನ 1,663 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 16 ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಎರಡನೇ ಅಲೆಯಲ್ಲಿ ಕೊರೊನಾದಿಂದ …

ಕೊಡವ ನೃತ್ಯ ಮಾಡಿ ಕೊರೊನಾ ಸೋಂಕಿತರನ್ನು ರಂಜಿಸಿದ ಹರ್ಷಿಕಾ, ಭುವನ್

ಮಡಿಕೇರಿ: ಸ್ಯಾಂಡಲ್‍ವುಡ್ ಕಲಾವಿದರಾದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ತೆರಳಿ ಕೊಡವ ನೃತ್ಯ ಮಾಡುವ ಮೂಲಕ ಕೊರೊನಾ ಸೋಂಕಿತರಿಗೆ ಮನರಂಜನೆ ನೀಡಿದ್ದಾರೆ. ಮಡಿಕೇರಿಯ ಕೋವಿಡ್ ಸೋಂಕಿತರಿರುವ ಜಿಲ್ಲಾಸ್ಪತ್ರೆಗೆ ಪಿಪಿಇ ಕಿಟ್ ಧರಿಸಿ ಭೇಟಿಕೊಟ್ಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ನಾಲ್ಕು ನೂರಕ್ಕೂ ಹೆಚ್ಚು ಸೋಂಕಿತರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಬಳಿಕ ಸೋಂಕಿತರೊಂದಿಗೆ ಕೊಡವ ಓಲಗ ನೃತ್ಯ ಮಾಡುವ ಮೂಲಕ ರಂಜಿಸಿದ್ದಾರೆ. ಬೆಡ್ ಮೇಲೆ ಮಲಗಿದ್ದ ಸೋಂಕಿತರು ಮಲಗಿದ್ದಲ್ಲಿಂದಲೇ …

ಜೂಜಾಟದ ವೇಳೆ ಪೊಲೀಸ್ ದಾಳಿ: ತಪ್ಪಿಸಿಕೊಳ್ಳಲು ಓಡಿದ ಯುವಕ ಬಾವಿಗೆ ಬಿದ್ದು ಸಾವು

ಬೆಳಗಾವಿ: ಜಿಲ್ಲೆಯ ಅಲಾರವಾಡದಲ್ಲಿ ಕೆಲವರು ಜೂಜಾಟದಲ್ಲಿ ತೊಡಗಿದ್ದರು. ಅಂಥವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಸಂದರ್ಭದಲ್ಲಿ ಓರ್ವ ಯುವಕ ಓಡಿ ಹೋಗಿದ್ದಾನೆ.. ನಂತರ ತೆರೆದ ಬಾವಿಯಲ್ಲಿ ಆತನ ಶವ ಪತ್ತೆಯಾಗಿದೆ. ಬಿ.ಕೆ.ಕಂಗ್ರಾಳಿಯ ಯುವಕ ಮೃತಪಟ್ಟಿದ್ದು ಸೋಮವಾರ ಘಟನೆ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಬಿ.ಕೆ.ಕಂಗ್ರಾಳಿ ಪಾರ್ವತಿ ನಗರದ 27 ವರ್ಷದ ಮನೋಹರ ಭರತ ಉಂದ್ರೆ ಎಂದು ಗುರುತಿಸಲಾಗಿದೆ. ಬೆಳಗಾವಿ ತಾಲೂಕಿನ ಅಲಾರವಾಡ ಬಳಿ ಭಾನುವಾರ ಸಂಜೆ 6.30 ಗಂಟೆಗೆ ಪೊಲೀಸರು ಜೂಜಾಟ ಆಡುತ್ತಿದ್ದ ಗುಂಪಿನ …