ಕೊರೊನಾ ಚೈನ್ ಮುರಿಯಲು ಲಾಕ್​ಡೌನ್​​ ಅಗತ್ಯ, ಬೇರೆ ಮಾರ್ಗವಿಲ್ಲ – ಸಚಿವ ಸವದಿ

ರಾಯಚೂರು: ಕೊರೊನಾ ತಡೆಗೆ ಲಾಕ್​ಡೌನ್​​ ಅಗತ್ಯವಾಗಿದ್ದು, ಇದನ್ನ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ ಕೊರೊನಾದ ಚೈನ್​ ಲಿಂಕ್ ತಪ್ಪಿಸಲು ಸಂಚಾರ ಸ್ತಬ್ಧವಾಗಬೇಕಿದೆ. ಜನರ ಅನಾವಶ್ಯಕ ಓಡಾಟ, ಸಭೆ, ಸಮಾರಂಭಗಳನ್ನ ಬಂದ್ ಮಾಡಬೇಕಿದೆ ಎಂದರು. ಲಾಕ್​ಡೌನ್​ ಎಂದು ಕರೆಯದಿದ್ದರೂ, ಸರ್ಕಾರ ವಿಧಿಸಿರೋ ನಿಯಮಗಳು ಲಾಕ್​ಡೌನ್ ಸ್ವರೂಪದಲ್ಲಿಯೇ ಇವೆ. ಸಾಮಾಜಿಕ ಅಂತರ ಪಾಲನೆ ಹಾಗೂ ಕಡ್ಡಾಯವಾಗಿ ಮಾಸ್ಕ್​ ಧರಿಸುವುದರೊಂದಿಗೆ ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ಸವದಿ ಮನವಿ …

ಕೊರೊನಾ ಪಾಸಿಟಿವ್ ಬರುತ್ತಲೇ ನಾಪತ್ತೆಯಾದವ್ರೇ.. ನೀವು ಯಾವ ಮೂಲೇಲಿದ್ರೂ ಹುಡುಕಿ ತರ್ತಾರೆ ಪೊಲೀಸ್

ಬೆಂಗಳೂರು: ನಗರದಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಂಡ ಸುಮಾರು 3,000 ಮಂದಿ ತಮಗೆ ಕೊರೊನಾ ಪಾಸಿಟಿವ್ ಅಂತ ಗೊತ್ತಾಗ್ತಿದ್ದಂತೆಯೇ ನಾಪತ್ತೆಯಾಗಿದ್ದಾರೆ ಅಂತ ಇತ್ತೀಚೆಗೆ ಸರ್ಕಾರ ಹೇಳಿತ್ತು. ಇದೀಗ ನಾಪತ್ತೆಯಾದ ಸೋಂಕಿತರನ್ನ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ನೀವು ಯಾವ ಮೂಲೆಯಲ್ಲಿ ಅಡಗಿದ್ರೂ ಪೊಲೀಸರು ನಿಮ್ಮನ್ನ ಹುಡುಕಿ ತರ್ತಾರೆ. ಪಾಸಿಟಿವ್ ಬಂದ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿರೋರನ್ನ ಹುಡುಕಲು ಪೊಲೀಸರು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನೀಡಿದ ಪಟ್ಟಿ …

ಸೋಂಕಿತರು-ಸಂಪರ್ಕಿತರಿಗೆ ಹಳದಿ ಚೀಲ ವಿತರಣೆ, ಕೊಪ್ಪಳದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಕ್ರಮ

ಕೊಪ್ಪಳ: ಆಸ್ಪತ್ರೆಯಲ್ಲಿ ಗಂಭೀರ ಕೊರೊನಾ ರೋಗಿಗಳಿಗೆ ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯ ಕೊರತೆಯಾಗದಿರಲೆಂದು, ಕಡಿಮೆ ರೋಗಲಕ್ಷಣವುಳ್ಳ ಸೋಂಕಿತರನ್ನು ಹೋಂ ಕ್ವಾರಂಟೀನ್​​​ ಮಾಡಲು ಹೆಚ್ಚು ಒತ್ತು ನೀಡಲಾಗ್ತಿದೆ. ಸೋಂಕು ಹರಡದಂತೆ ನಗರಸಭೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಕೂಡ ಮನೆಯಲ್ಲಿಯೇ ಕ್ವಾರಂಟೀನ್ ಮಾಡಲಾಗುತ್ತಿದೆ. ಮೊದಲಿನಂತೆ ಈಗ ಮನೆ ಮನೆಗೆ ತೆರಳಿ, ಅನಾರೋಗ್ಯಪೀಡಿತರು, ಸಕ್ಕರೆ, ರಕ್ತದೊತ್ತಡ ಕಾಯಿಲೆ ಇರುವವರ ಸರ್ವೇ ಮಾಡುವುದು. ಅವರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯ ಬಹುಪಾಲು ಸ್ಥಗಿತಗೊಂಡಿದೆ. ಆದರೆ, ಕೊಪ್ಪಳ ನಗರಸಭೆ ಅಧಿಕಾರಿಗಳು ನಗರದಲ್ಲಿ …

ನಿಮಗೆ 18 ವರ್ಷ ದಾಟಿದೆಯಾ? ಹಾಗಿದ್ರೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ ಮುಖ್ಯಕಾರ್ಯದರ್ಶಿಗಳು

ಬೆಂಗಳೂರು: ರಾಜ್ಯ ಸರ್ಕಾರ 18 ರಿಂದ 44 ವಯಸ್ಸಿನ ನಡುವಿನ ನಾಗರೀಕರಿಗೆ ಕೋವಿಡ್-19 ಲಸಿಕೆಯನ್ನು ನೀಡುವ ಯೋಜನೆಯನ್ನು ಶೀಘ್ರದಲ್ಲಿ ರಾಜ್ಯಾದ್ಯಂತ ಆರಂಭಿಸಲಿದೆ. ಈ ಅಭಿಯಾನಕ್ಕೆ ಒಂದು ಕೋಟಿ ಲಸಿಕೆಗಳನ್ನು ಖರೀದಿ ಮಾಡಲು ಕ್ರಮ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ. 3ನೇ ಹಂತದ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳುವ ಕುರಿತು ರಾಜ್ಯಮಟ್ಟದ ಇಲಾಖಾ ಕಾರ್ಯದರ್ಶಿಗಳೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ತಯಾರಿ ಸಭೆಯನ್ನ ಉದ್ದೇಶಿ ಮಾತನಾಡಿದ ರವಿಕುಮಾರ್, ರಾಜ್ಯದಲ್ಲಿರುವ 18-44 ವಯಸ್ಸಿನ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಲಸಿಕೆಯನ್ನು …

ಕೊರೊನಾ ತಡೆಯಲು ವ್ಯಾಕ್ಸಿನೇಷನ್​ ಹೇಗೆ ನೆರವಾಗುತ್ತೆ ಗೊತ್ತಾ..? ಇಲ್ಲಿದೆ ಬ್ರಿಟನ್​​ನಲ್ಲಿ ನಡೆದ ಸ್ಟಡಿ ರಿಪೋರ್ಟ್​

ಕೊರೊನಾ ಸಾಂಕ್ರಾಮಿಕ ತಡೆಗೆ ಸದ್ಯ ಇರುವ ಮದ್ದು ಎಂದರೆ ಅದು ಲಸಿಕೆ. ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ನಡೀತಾ ಇದೆ. ಲಸಿಕೆ ಪಡೆಯುವುದರಿಂದ ಎಷ್ಟರ ಮಟ್ಟಗಿನ ಪ್ರಯೋಜನವಾಗುತ್ತೆ, ಈ ಕುರಿತಾಗಿ ಮಾಡಿರುವ ಸ್ಟಡಿ ರಿಪೋರ್ಟ್ ಏನ್ ಹೇಳ್ತಿದೆ? ಇಲ್ಲಿದೆ ಮಾಹಿತಿ ಕಳೆದ ವರ್ಷ ಕೊರೊನಾ ಎನ್ನುವ ವೈರಸ್ ಬಂದಾಗಿನಿಂದ ಕೆಟ್ಟ ಸುದ್ದಿಗಳನ್ನು ಕೇಳಿ ಕೇಳಿ ಸಾಕು ಸಾಕಾಗಿದೆ. ಕೊರೊನಾ ಪಾಸಿಟಿವ್ ಬಂದರೆ ಏನು ಮಾಡಬೇಕು? ಎಲ್ಲಿ ಟ್ರೀಟ್ಮೆಂಟ್ ಪಡೆಯಬೇಕು ಎನ್ನುವ ಗೊಂದಲ ಈಗಲೂ ಹಾಗೇ ಉಳಿದಿದೆ. ಎಲ್ಲರಲ್ಲೂ ಮಾಸ್ಕ್ …

ಜನರೇ.. ಮಂತ್ರಾಲಯ ಪ್ರವೇಶದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಏನು ಹೇಳಿದೆ ಗೊತ್ತಾ..?

ರಾಯಚೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮಂತ್ರಾಲಯ ಮಠದ ಪ್ರವೇಶ ಕುರಿತು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿ ಪ್ರಕಟಣೆಯೊಂದನ್ನ ಹೊರಡಿಸಿದೆ. ಇದೇ ಮೇ 1ರಿಂದ ಮಂತ್ರಾಲಯ ಮಠಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಮೇ 1ರಿಂದ ಪ್ರತ್ಯಕ್ಷ ದರ್ಶನ, ತೀರ್ಥಪ್ರಸಾದ ವ್ಯವಸ್ಥೆ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಮಂತ್ರಾಲಯದಲ್ಲಿ ಸ್ಥಳೀಯವಾಗಿ ಲಾಕ್​ಡೌನ್ ಆಗಿರುವ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ. ಇನ್ನು ಆನ್​ಲೈನ್​ ಸೇವೆಗೆ ಅವಕಾಶ ನೀಡಲಾಗಿದ್ದು ಮುಂದಿನ ಸೂಚನೆವರೆಗೆ ಭಕ್ತರು ಮಂತ್ರಾಲಯಕ್ಕೆ …

ವುಹಾನ್​ಗೆ ಮರಳಿದ ಕೊರೊನಾ ವೈರಸ್; ಆದ್ರೆ ಈ ಬಾರಿ ಚೀನಾಕ್ಕೆ ಟೆನ್ಶನ್ ತಂದ ಭಾರತೀಯ ಮ್ಯೂಟಂಟ್

ನವದೆಹಲಿ: ಎಬೋಲಾ ನಂತರ ಇಡೀ ಜಗತ್ತು ಯಾವ ವೈರಸ್​​ಗಳ ಕಾಲವೂ ಇಲ್ಲದೆ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ಕಳೆದ ವರ್ಷದ ಜನವರಿ ಹೊತ್ತಿಗೆ ಚೀನಾದಲ್ಲಿ ಕೊರೊನಾ ಸೋಂಕಿನ ಕುರಿತು ವರದಿಗಳಾಗೋಕೆ ಪ್ರಾರಂಭವಾಗಿದ್ದವು. ಇದರಾಂದೆಚೆಗೆ ನಡೆದಿದ್ದೆಲ್ಲಾ ದುರಂತ. ಚೀನಾದಿಂದ ಒಂದೊಂದೇ ದೇಶಗಳಿಗೆ ಹರಡಿದ ಕೊರೊನ ವೈರಸ್ ಜಗತ್ತಿನ ಬಹುತೇಕ ದೇಶಗಳಿಗೆ ವ್ಯಾಪಿಸಿತು. ಇಲ್ಲಿವರೆಗೆ ಕೊರೊನಾ ಸೋಂಕಿನಿಂದಾಗಿ ಜಗತ್ತಿನಾದ್ಯಂತ 31 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೊದಲ ಅಲೆಯಿಂದ ಜಗತ್ತು ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುತ್ತಿರುವಾಗಲೇ ಕೊರೊನಾ ಸೋಂಕು 2, 3, …

ದಿನ ಭವಿಷ್ಯ: 01-05-2021

ಪಂಚಾಂಗ: ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ-ಮಾಸ, ಕೃಷ್ಣಪಕ್ಷ, ಪಂಚಮಿ, ಶನಿವಾರ, ಮೂಲ ನಕ್ಷತ್ರ (ಹಗಲು 10:16) ನಂತರ ಪೂರ್ವಾಷಾಡ ನಕ್ಷತ್ರ ರಾಹುಕಾಲ 9 12ರಿಂದ 10:46 ಗುಳಿಕಕಾಲ 06:03 ರಿಂದ 07:38 ಯಮಗಂಡಕಾಲ 01.54 ರಿಂದ 03:28 ಮೇಷ: ಪ್ರಯಾಣ ಮಾಡುವ ಸಂದರ್ಭ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಕ್ಕಳಲ್ಲಿ ಚುರುಕುತನ. ವೃಷಭ: ಉತ್ತಮ ಅವಕಾಶ ಮತ್ತು ರಾಜಯೋಗ, ಉದ್ಯೋಗ ಲಾಭ, ಮಕ್ಕಳ ಆರೋಗ್ಯದಲ್ಲಿ ಏರುಪೇರು. ಮಿಥುನ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಪ್ರಯಾಣದಲ್ಲಿ ತೊಂದರೆ, …

ರಾಜ್ಯದ ಹವಾಮಾನ ವರದಿ 1-05-2021

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ದಿನಕ್ಕಿಂತ ಕೊಂಚ ಹೆಚ್ಚಾಗಿರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಗರಿಷ್ಠ 38 ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ನಗರಗಳ ಇಂದಿನ ಗರಿಷ್ಠ …