ಅಶ್ವಿನ್​ ವಿಶ್ವದ ಶ್ರೇಷ್ಠ ಸ್ಪಿನ್​ ಆಲ್​ರೌಂಡರ್​​ ಆಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ

ರವಿಚಂದ್ರನ್​ ಅಶ್ವಿನ್.. ಟೀಮ್​ ಇಂಡಿಯಾ ಟೆಸ್ಟ್​ ತಂಡದ ಕೀ ಪ್ಲೇಯರ್​​. ಟೆಸ್ಟ್​ ತಂಡದ ಅವಿಭಾಜ್ಯ ಅಂಗವಾಗಿರುವ ಅಶ್ವಿನ್​, ಅದೆಷ್ಟೋ ಪಂದ್ಯಗಳ ಗೆಲುವಿನ ರೂವಾರಿ. ಅಶ್ವಿನ್​ ವಿಶ್ವದ ಶ್ರೇಷ್ಠ ಸ್ಪಿನ್​ ಆಲ್​ರೌಂಡರ್​​ ಆಗಿದ್ದು ಹೇಗೆ..? ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಅರ್ಧದಾರಿ ಕ್ರಮಿಸಿದೆ. 3 ದಿನಗಳಾಟ ಮುಗಿದಿದ್ದು, ಎದುರಾಳಿ ಕಿವೀಸ್​​​ ಎದುರು ಟೀಮ್​ ಇಂಡಿಯಾ ಹೋರಾಟ ನಡೆಸ್ತಿದೆ. ಬ್ಯಾಟಿಂಗ್​ನಲ್ಲಿ ಸಾಧಾರಣ ಮೊತ್ತ ಕಲೆ ಹಾಕಿರುವ ಭಾರತ, ಗೆಲುವಿಗಾಗಿ ಈಗ ಬೌಲಿಂಗ್​ ವಿಭಾಗದ ಮೇಲೆ ಅವಲಂಬಿತವಾಗಿದೆ. ಅದರಲ್ಲೂ ಅನುಭವಿ …

ಮೋದಿಯಿಂದಾಗಿ ಯೋಗಕ್ಕೆ ವಿಶ್ವಮನ್ನಣೆ – ಕರಂದ್ಲಾಜೆ

ಉಡುಪಿ: ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಔಷಧಿ ಮಾತ್ರೆಗಳ ಹಿಂದೆ ಹೋಗಿ ನಾವೆಲ್ಲಾ ಯೋಗ ಮರೆತೆವು. ಪ್ರಧಾನಿ ಮೋದಿಯಿಂದ ಯೋಗ ವಿಶ್ವಕ್ಕೆ ಪುನರಪಿ ಪರಿಚಯವಾಯ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಯೋಗ ದಿನದ ಅಂಗವಾಗಿ ಉಡುಪಿಯಲ್ಲಿ ಶೋಭಾ ಕರಂದ್ಲಾಜೆಯಿಂದ ಯೋಗಭ್ಯಾಸ ಮಾಡಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ಕಟ್ಟದಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದ್ದು, ವೈದ್ಯರೊಂದಿಗೆ ಯೋಗಾಸನದಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಒಂದು ಮಾಡಿದ ಅಭಿಯಾನ -ರಘುಪತಿ ಭಟ್, ಪ್ರಮೋದ್‍ರಿಂದ ಹಡಿಲು …

ಕಿಂಗ್ ಕೊಹ್ಲಿ ಮತ್ತೆ ಹೀಗ್ಯಾಕೆ ಮಾಡಿದ್ರು? ಹಿಂದಿನ ತಪ್ಪನ್ನ ತಿದ್ದಿಕೊಳ್ಳಲಿಲ್ವಾ?

ಕಳೆದ ಕಿವೀಸ್​​ ಪ್ರವಾಸದಲ್ಲಿ ಮಾಡಿದ ತಪ್ಪನ್ನ ವಿರಾಟ್​​ ಕೊಹ್ಲಿ ಇನ್ನೂ ತಿದ್ದಿಕೊಂಡೊಲ್ವಾ..? ಹೀಗೊಂದು ಪ್ರಶ್ನೆ ನಿನ್ನೆ ವಿರಾಟ್​ ಕೊಹ್ಲಿ ಔಟಾದ ಬಳಿಕ ಹೆಚ್ಚು ಚರ್ಚೆಯಲ್ಲಿದೆ. ಅಷ್ಟಕ್ಕೂ ಕೊಹ್ಲಿ ಸರಿ ಪಡಿಸಿಕೊಳ್ಳದ ತಪ್ಪೇನು..? ಚರ್ಚೆ ಯಾಕೆ..? ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಆರಂಭಿಕರು ಭದ್ರ ಅಡಿಪಾಯ ಹಾಕಿದ್ರು. ಆದ್ರೆ, 2ನೇ ದಿನದಾಟದಲ್ಲಿ ಮೊದಲಾರ್ಧದಲ್ಲಾದ ದಿಢೀರ್​​ ಕುಸಿತ ಇಡೀ ತಂಡವನ್ನ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಆದ್ರೆ, ಆ ಬಳಿಕ ಜೊತೆಯಾದ ರಹಾನೆ-ಕೊಹ್ಲಿ ಜೋಡಿಯ ಜಬರ್​ದಸ್ತ್​​ ಪ್ರದರ್ಶನ …

ರಮೇಶ್ ಜಾರಕಿಹೊಳಿ ಬಾಂಬೆಗೆ ಹೋಗಿದ್ದು ನಿಜನಾ? -ಮಹೇಶ್ ಕುಮಟಳ್ಳಿ ಬಿಚ್ಚಿಟ್ರು ಸತ್ಯ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಎಲ್ಲಿಗೂ ಹೋಗಿಲ್ಲ, ಕ್ಷೇತ್ರದಲ್ಲೇ ಇದ್ದಾರೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತೆ ಪೊಲಿಟಿಕಲ್ ಗೇಮ್ ಶುರುಮಾಡಲಿದ್ದಾರೆ. ಅದಕ್ಕೆ ಬಾಂಬೆಗೆ ತೆರಳಿದ್ದಾರೆ ಅನ್ನೋ ಸುದ್ದಿ ನಿನ್ನೆ ಎಲ್ಲೆಡೆ ಹರಿದಾಡಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಥಣಿ ಶಾಸಕ.. ಯಾರೂ ಕೂಡ ಬಾಂಬೆಗೆ ಹೋಗಿಲ್ಲ, ಎಲ್ಲವೂ ಊಹಾಪೋಹ. ಬಿಜೆಪಿ ಸರ್ಕಾರದಲ್ಲಿ ನಮಗೆ ಯಾವುದೇ ಅಸಮಾಧಾನ ಇಲ್ಲ. ನಾನು ಬಾಂಬೆಗೆ ಹೊಗಿಲ್ಲ, ನನ್ನ ಕ್ಷೇತ್ರದಲ್ಲಿ ಇದ್ದೇನೆ ಅಂತಾ ಸ್ಪಷ್ಟಪಡಿಸಿದರು. …

ದಟ್ಟ ಕಾಡಿನಲ್ಲಿ ಜನರಿರುವಲ್ಲಿಗೆ ಹೋಗಿ ಲಸಿಕೆ ಹಾಕಿಸಿದ ಡಿಸಿ

ಕೋಲ್ಕತ್ತಾ: ಜಿಲ್ಲಾಧಿಕಾರಿಯೊಬ್ಬರು ಪಶ್ಚಿಮ ಬಂಗಾಳದ ದಟ್ಟ ಕಾಡಿನಲ್ಲಿ 20 ಕಿಲೋಮೀಟರ್ ನಡೆದುಕೊಂಡು ಹೋಗಿ 100 ಜನರಿಗೆ ಲಸಿಕೆ ಹಾಕಿಸಿ ಬಂದಿರುವುದಕ್ಕೆ  ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳದ  ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರೋ ಐಎಎಸ್ ಅಧಿಕಾರಿ ಸುರೇಂದ್ರ ಕುಮಾರ್ ಮೀನಾ ಉತ್ತರ ಬಂಗಾಳದ ಹಲವು ಗ್ರಾಮಗಳಲ್ಲಿ ವ್ಯಾಕ್ಸಿನೇಷನ್ ಅಭಿಯಾನ ನಡೆಸಿದ್ದಾರೆ. ಭಾರತ- ಭೂತಾನ್ ಗಡಿ ಭಾಗದ ಗ್ರಾಮದಲ್ಲಿರುವ ಜನರಿಗೆ ಲಸಿಕೆ ಹಾಕಿಸಲು 20 ಕಿಲೋಮೀಟರ್ ಕಾಡಿನಲ್ಲಿ ಟ್ರೆಕ್ಕಿಂಗ್ ಮಾಡಿಕೊಂಡು ಹೋಗಿರುವುದನ್ನು ಹಲವಾರು ಮಂದಿ ಮೆಚ್ಚಿದ್ದಾರೆ. This is best thing …

ಪ್ರವೇಶ ನಿಷೇಧವಿದ್ದರೂ ನಂಜನಗೂಡಿನಲ್ಲಿ ಭಕ್ತಸಾಗರ, ಕೊರೊನಾಗೆ ಕ್ಯಾರೆ ಎನ್ನದೇ ಕಪಿಲಾ ನದಿಯಲ್ಲಿ ಸ್ನಾನ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಇಂದು ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂದಿನಿಂದ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದೆಯಾದ್ರೂ, ದೇವಾಲಯಗಳನ್ನ ತೆರೆಯಲು ಅನುಮತಿ ನೀಡಿಲ್ಲ. ದೇವಾಲಯದ ಪ್ರವೇಶಕ್ಕೆ ನಿಷೇಧ ಇದ್ದರೂ ಕೂಡ ಕೊರೊನಾ ಲೆಕ್ಕಿಸದೆ ನಂಜನಗೂಡಿನತ್ತ ಭಕ್ತಸಮೂಹ ಧಾವಿಸುತ್ತಿದೆ. ಕೋವಿಡ್ ಹಿನ್ನೆಲೆ ದೇವಾಲಯದ ಬಾಗಿಲು ಬಂದ್ ಆಗಿದ್ರೂ ಜನರು ದೇವಾಲಯದ ಹೊರಭಾಗದಲ್ಲಿ ನಿಂತು ಪೂಜೆ ಪುನಸ್ಕಾರ ಮಾಡಿ ನಂಜುಂಡನಿಗೆ ನಮಿಸುತ್ತಿದ್ದಾರೆ. ಹಲವಾರು ಮಂದಿ ಕಪಿಲಾ ನದಿಯಲ್ಲಿ ಮಿಂದೇಳುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿ ಇಲ್ಲಿ ಗಣನೆಗೇ ಬಂದಿಲ್ಲ. ಅದ್ರಲ್ಲೂ ಇಂದು ಸೋಮವಾರವಾದ ಕಾರಣ …

ನೋಡಿ ಸ್ವಾಮಿ ಇವನು ಇರೋದೆ ಹೀಗೆ.. ಹೀಗೆ ಅಂತಿರೋ ಇವನು ಯಾರು?!

ಕವಲು ದಾರಿಯಲ್ಲಿ ಕನ್ನಡಿಗರ ಮನದ ಗೆದ್ದಿದ್ದ ರಿಷಿ ಈಗ ದ್ವಿಭಾಷೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಈಗಾಗಲೇ ಚಿತ್ರ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದ್ದು.. ಇಂದು ಸರ್​ಪ್ರೈಸ್ ಆಗಿ ಚಿತ್ರದ ಪೋಸ್ಟರ್​ ಅನ್ನ ರಿಷಿ ರಿಲೀಸ್ ಮಾಡಿದ್ದಾರೆ. ಲೆಜೆಂಡರಿ ಶಂಕರ್ ನಾಗ್ ಅವರ ಪ್ರಖ್ಯಾತ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ಅನ್ನೋ ಚಿತ್ರ ನೆನಪಿಸುವಂತೆ  ನೋಡಿ ಸ್ವಾಮಿ ಇವನು ಇರೋದೆ ಹೀಗೆ ಅಂತ ಕನ್ನಡದಲ್ಲಿ ಹೆಸರಿಟ್ಟಿದ್ದಾರೆ. ತೆಲುಗಿನಲ್ಲಿ ಈ ಚಿತ್ರಕ್ಕೆ ವದ್ದುರಾ ಸೋದರ ಅಂತಾ ಹೆಸರನ್ನ ಇಡಲಾಗಿದೆ. ನೀವು ಸಿಹಿಯ …

ಪಕ್ಷದ ವ್ಯವಹಾರ ಬಂದಾಗ ರಾಜ್ಯಾಧ್ಯಕ್ಷರೇ ಸುಪ್ರೀಂ -ಡಿಕೆಎಸ್​ ಪರ ಪರಮೇಶ್ವರ್ ಬ್ಯಾಟಿಂಗ್

ತುಮಕೂರು: ಕಾಂಗ್ರೆಸ್​ಗೆ ಪಕ್ಷದ ಅಧ್ಯಕ್ಷರೇ ಸುಪ್ರೀಂ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಶಾಸಕ ಜಮೀರ್ ಅಹಮ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಜಮೀರ್ ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಿದ್ದರಾಮಯ್ಯರೇ ಹೇಳಿದ್ದಾರೆ. ನಮ್ಮ ಜೊತೆ ಫಾಲೋವರ್ಸ್ ಇರ್ತಾರೆ, ಅವರಿಗೆ ಆಸೆಗಳಿರ್ತವೆ. ನಮ್ಮ ನಾಯಕರು ಹೀಗ್ ಆಗ್ಬೇಕು ಎಂಬ ಆಸೆ ಇರುತ್ತೆ. ಸಿದ್ದರಾಮಯ್ಯ ಜೊತೆ ಇರುವ ಜಮೀರ್​ಗೆ ಅವರು ಸಿಎಂ ಆಗ್ಬೇಕು ಎಂಬ ಆಸೆ ಇದೆ. ‘ನಾನೂ ಸಿಎಂ ಆಗಬೇಕು ಅನ್ನೋ …

ಲಾಕ್‍ಡೌನ್‍ನಲ್ಲಿ ಅಬಕಾರಿ ಇಲಾಖೆಗೆ ಶೇ.10 ಲಾಭ ಹೆಚ್ಚಳ – ಗೋಪಾಲಯ್ಯ

ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಾಮಾನ್ಯ ದಿನಗಳಿಗಿಂತ ಶೇ.10 ರಷ್ಟು ಲಾಭ ಗಳಿಸಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಶಾಸಕರ ಭವನದಲ್ಲಿ ಆಯೋಜನೆಗೊಂಡಿದ್ದ 18 ರಿಂದ 44 ವಯಸ್ಸಿನವರಿಗೆ 3 ದಿನಗಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಸ್ಥಳೀಯ ಶಾಸಕರೂ ಹಾಗು ಅಬಕಾರಿ ಸಚಿವ ಗೋಪಾಲಯ್ಯ ಮಾತನಾಡಿದರು.   ಕೋವಿಡ್ ಲಾಕ್ ಡೌನ್ ಆದ ಮೇಲೆ ಏಪ್ರಿಲ್ 1 ರಿಂದ ಜೂನ್ 15 ರವರೆಗೆ ಅಬಕಾರಿ …

WTC ಫೈನಲ್: ಕೊಹ್ಲಿ ಪಡೆಗೆ ಮುಳುವಾದ ಆರ್​​ಸಿಬಿ ವೇಗಿ!

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಮೊದಲ ದಿನದಾಟ ಮಳೆಯಿಂದ ರದ್ದಾದ್ರೆ, 2ನೇ ದಿನದಾಟ ಮಂದ ಬೆಳಕಿನ ಕಾರಣ ಪಂದ್ಯ ಬೇಗನೆ ಅಂತ್ಯವಾಯ್ತು. ಆದರೆ ಭಾನುವಾರ ನ್ಯೂಜಿಲೆಂಡ್​​ ವೇಗಿಗಳ ಚಾಣಾಕ್ಷ ನಡೆಯ ಮುಂದೆ ಭಾರತೀಯ ಬ್ಯಾಟ್ಸ್​ಮನ್​ಗಳು ಮಂಕಾದ್ರು. ಅಗ್ರ 3 ವಿಕೆಟ್​ ಕಳೆದುಕೊಂಡು 146 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತ, 92.1 ಓವರ್​​​ಗಳಲ್ಲಿ 217 ರನ್​​​​ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯ್ತು. ಕಿವೀಸ್​ ಸ್ಪೀಡ್​ ಸ್ಟಾರ್​​​ಗಳ ಎದುರು ಕೊಹ್ಲಿ ಸೇನೆ ದಿಢೀರ್​ ಕುಸಿತ ಕಂಡ್ರೆ, ಕಿವೀಸ್​ ಅದ್ಭುತ ಬ್ಯಾಟಿಂಗ್​ …