ಲಾಕ್‍ಡೌನ್‍ನಲ್ಲಿ ಅಬಕಾರಿ ಇಲಾಖೆಗೆ ಶೇ.10 ಲಾಭ ಹೆಚ್ಚಳ – ಗೋಪಾಲಯ್ಯ

ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಾಮಾನ್ಯ ದಿನಗಳಿಗಿಂತ ಶೇ.10 ರಷ್ಟು ಲಾಭ ಗಳಿಸಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಶಾಸಕರ ಭವನದಲ್ಲಿ ಆಯೋಜನೆಗೊಂಡಿದ್ದ 18 ರಿಂದ 44 ವಯಸ್ಸಿನವರಿಗೆ 3 ದಿನಗಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಸ್ಥಳೀಯ ಶಾಸಕರೂ ಹಾಗು ಅಬಕಾರಿ ಸಚಿವ ಗೋಪಾಲಯ್ಯ ಮಾತನಾಡಿದರು.   ಕೋವಿಡ್ ಲಾಕ್ ಡೌನ್ ಆದ ಮೇಲೆ ಏಪ್ರಿಲ್ 1 ರಿಂದ ಜೂನ್ 15 ರವರೆಗೆ ಅಬಕಾರಿ …

WTC ಫೈನಲ್: ಕೊಹ್ಲಿ ಪಡೆಗೆ ಮುಳುವಾದ ಆರ್​​ಸಿಬಿ ವೇಗಿ!

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಮೊದಲ ದಿನದಾಟ ಮಳೆಯಿಂದ ರದ್ದಾದ್ರೆ, 2ನೇ ದಿನದಾಟ ಮಂದ ಬೆಳಕಿನ ಕಾರಣ ಪಂದ್ಯ ಬೇಗನೆ ಅಂತ್ಯವಾಯ್ತು. ಆದರೆ ಭಾನುವಾರ ನ್ಯೂಜಿಲೆಂಡ್​​ ವೇಗಿಗಳ ಚಾಣಾಕ್ಷ ನಡೆಯ ಮುಂದೆ ಭಾರತೀಯ ಬ್ಯಾಟ್ಸ್​ಮನ್​ಗಳು ಮಂಕಾದ್ರು. ಅಗ್ರ 3 ವಿಕೆಟ್​ ಕಳೆದುಕೊಂಡು 146 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತ, 92.1 ಓವರ್​​​ಗಳಲ್ಲಿ 217 ರನ್​​​​ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯ್ತು. ಕಿವೀಸ್​ ಸ್ಪೀಡ್​ ಸ್ಟಾರ್​​​ಗಳ ಎದುರು ಕೊಹ್ಲಿ ಸೇನೆ ದಿಢೀರ್​ ಕುಸಿತ ಕಂಡ್ರೆ, ಕಿವೀಸ್​ ಅದ್ಭುತ ಬ್ಯಾಟಿಂಗ್​ …

15 ನಿಮಿಷದಲ್ಲಿ ಸೈಕಲಿನಲ್ಲಿ ಟೀ ತಂದುಕೊಟ್ಟ ಡೆಲಿವರಿ ಬಾಯ್‍ಗೆ ಐಟಿ ಉದ್ಯೋಗಿಯಿಂದ ಬೈಕ್ ಗಿಫ್ಟ್..!

– ಒಂದೇ ದಿನದಲ್ಲಿ 73 ಸಾವಿರ ರೂ. ಸಂಗ್ರಹ – ಸಹಾಯ ಮಾಡಿ ಮಾನವೀಯತೆ ಮೆರೆದ ಜನ ಹೈದರಾಬಾದ್: ನಮ್ಮ ಸುತ್ತಮುತ್ತಲೂ ಒಳ್ಳೆಯವರೂ ಇದ್ದಾರೆ ಎಂಬುದನ್ನು ಹೈದರಾಬಾದ್ ನ ಐಟಿ ಉದ್ಯೋಗಿಯೊಬ್ಬರು ಸಾಬೀತು ಪಡಿಸಿದ್ದಾರೆ. ಹೌದು. ಮಳೆಯಲ್ಲಿ ನೆನೆದುಕೊಂಡೇ 15 ನಿಮಿಷದಲ್ಲಿ ಟೀ ತಂದು ಕೊಟ್ಟ ಝೋಮ್ಯಾಟೋ ಡೆಲಿವರಿ ಬಾಯ್ ಗೆ ಬೈಕ್ ಗಿಫ್ಟ್ ಮಾಡಿದ್ದಾರೆ. ತನಗೆ ಬೈಕ್ ಸಿಗುತ್ತಿದ್ದಂತೆಯೇ ಡೆಲಿವರಿ ಬಾಯ್ ಖುಷಿಗೆ ಪಾರವೇ ಇಲ್ಲದಂತಾಗಿದೆ. ಡೆಲಿವರಿ ಬಾಯ್ ನನ್ನು ಮೊಹಮ್ಮದ್ ಅಖೀಲ್ ಎಂದು ಗುರುತಿಸಲಾಗಿದ್ದು, …

ಬೃಹತ್ ಲಸಿಕಾ ಅಭಿಯಾನಕ್ಕೆ ಚಾಲನೆ: ‘ಇಂದು 7 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ’ ಎಂದ ಸಿಎಂ

ಬೆಂಗಳೂರು: ಸಿಎಂ ಬಿಎಸ್​ ಯಡಿಯೂರಪ್ಪ ಇಂದು ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ‘ಬೃಹತ್ ಲಸಿಕಾ ಅಭಿಯಾನ’ಕ್ಕೆ ಚಾಲನೆ  ನೀಡಿದರು. ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು 7 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಿಎಸ್​ವೈ.. ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಅಭಿಯಾನ ಆರಂಭವಾಗಿದೆ. ಕೇಂದ್ರ ನೀಡುವ ಈ ಉಚಿತ ಲಸಿಕೆ ಅಭಿಯಾನ ಸಂತಸ ತಂದಿದೆ. 5 …

ಕುಸ್ತಿಪಟು ದಿ ಗ್ರೇಟ್​ ಖಲಿಗೆ ಮಾತೃ ವಿಯೋಗ

ಖ್ಯಾತ ಕುಸ್ತಿಪಟು ದಿ ಗ್ರೇಟ್​ ಖಲಿ ಅಲಿಯಾಸ್​ ದಾಲಿಪ್ ಸಿಂಗ್ ರಾಣಾ ಅವರ ತಾಯಿ ವಿಧಿವಶರಾಗಿದ್ದಾರೆ. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಖಲಿ ಅವರ ತಾಯಿ ತಾಂಡಿ ದೇವಿ ಅವರನ್ನ ಕಳೆದ ವಾರ ಲುಧಿಯಾನಾದ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ನಿನ್ನೆ ಅವರು ಕೊನೆಯುಸಿರೆಳೆದಿದ್ದಾರೆ. ತಾಂಡಿ ದೇವಿ ಅವರಿಗೆ 75 ವರ್ಷ ವಯಸ್ಸಾಗಿತ್ತು. ರಾಣಾ ಅಲಿಯಾಸ್​ ಖಲಿ 2000 ಇಸವಿಯಲ್ಲಿ ವೃತ್ತಿಪರ ಕುಸ್ತಿಗೆ ಪ್ರವೇಶ ಮಾಡಿದರು. WWE  ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು …

WTC ಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ನಡೆಯುತ್ತಿದೆ. ಫೈನಲ್‍ನಲ್ಲಿ ಭಾರತ ತಂಡ ಗೆದ್ದರೆ ನಾನು ಬೆತ್ತಲಾಗುವುದಾಗಿ ನಟಿ ಪೂನಂ ಪಾಂಡೆ ಕೊಹ್ಲಿ ಪಡೆಗೆ ಬಿಗ್ ಆಫರ್ ಒಂದನ್ನು ನೀಡಿದ್ದಾರೆ. 2011ರ ಏಕದಿನ ವಿಶ್ವಕಪ್ ವೇಳೆ ಎಂಎಸ್ ಧೋನಿ ಬಳಗ ಗೆದ್ದರೆ ನಾನು ಬೆತ್ತಲಾಗುವುದಾಗಿ ಹೇಳಿಕೊಂಡಿದ್ದ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಇದೀಗ ಕೊಹ್ಲಿ ಸೈನ್ಯಕ್ಕೆ ಇದೇ ರೀತಿಯ ಆಫರ್ ನೀಡಿದ್ದಾರೆ. ಇದನ್ನೂ ಓದಿ: ಜೇಮಿಸನ್ ಬಿಗುವಿನ ದಾಳಿ – ಭಾರತ …

ನಿರೀಕ್ಷೆಗೂ ಮೀರಿ ಬಂದ ಪ್ರಯಾಣಿಕರು; ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ BMTC

ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಇಂದಿನಿಂದ ಬಿಎಂಟಿಸಿ ಬಸ್​​ಗಳು ರಸ್ತೆಗೆ ಇಳಿಯುತ್ತಿವೆ. ಅದರಂತೆ ನಿರೀಕ್ಷೆಗೂ ಮೀರಿ ಮೆಜೆಸ್ಟಿಕ್ ಸೇರಿದಂತೆ ಹಲವು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಂದು ನಿಂತಿದ್ದಾರೆ. ಕೆಲವು ಕಡೆ ಬಸ್​ ಬಾರದಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರು ನಿರೀಕ್ಷೆಗೂ ಮೀರಿ ಬರುತ್ತಿರುವ ಹಿನ್ನೆಲೆಯಲ್ಲಿ ಬಸ್​ಗಳ ಸಂಖ್ಯೆಯನ್ನ ಬಿಎಂಟಿಸಿ ಹೆಚ್ಚಿಸುತ್ತಿದೆ. ಮೊದಲ ಪಾಳಿಯದಲ್ಲಿ 1 ಸಾವಿರ ಬಸ್ ಕಾರ್ಯಚರಣೆ ಮಾಡುವಂತೆ ಬಿಎಂಟಿಸಿ ಪ್ಲಾನ್ ಮಾಡಿಕೊಂಡಿತ್ತು. ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಸದ್ಯ 1500 ಬಸ್​ಗಳನ್ನ ಬಿಎಂಟಿಸಿ ರಸ್ತೆಗಿಳಿಸಿದೆ. BMTC …

‘ಎದೆ ಮುಟ್ಕೊಂಡು ಹೇಳ್ತೀನಿ.. ಯಾವ ಕಂಟ್ರಾಕ್ಟರ್‌ಗಳಿಂದ ನಯಾಪೈಸೆ ಕಮಿಷನ್ ಪಡೆದಿಲ್ಲ‌’

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸಾಂಕ್ರಾಮಿಕದ ಕೆಟ್ಟ ಪರಿಸ್ಥಿತಿ ಇದೆ ಎಂದು ಒಂದು ತಿಂಗಳ ಹಿಂದೆಯೇ ಹೇಳಿದ್ದೆ. ವ್ಯವಸ್ಥಿತ ಯೋಜನೆ ರೂಪಿಸದ ಕಾರಣ ಸಾಕಷ್ಟು ಸಾವು ನೋವು ಆದವು. ಮೇ ತಿಂಗಳೊಂದರಲ್ಲೇ ಒಂದು ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮತ್ತೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಪರೋಕ್ಷವಾಗಿವಾಗ್ದಾಳಿ ನಡೆಸಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ ಅವರು, ಇಂದಿಗೂ ಮೈಸೂರಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಇದರಿಂದ ಉದ್ಯಮದ ಮೇಲೆ ಸಾಕಷ್ಟು ಒಡೆತ ಬಿದ್ದಿದೆ. ಮುಂದಿನ ದಿನಗಳಲ್ಲಿ ಪಾಸಿಟಿವಿಟಿ ರೇಟ್ …

ವೃದ್ದೆಯ ಚಿನ್ನದ ಸರ ದೋಚಿದ್ದ ಖದೀಮರು- ಮೂವರ ಬಂಧನ

ಶಿವಮೊಗ್ಗ: ವೃದ್ದೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಮೂವರು ಖದೀಮರು ಸುಮಾರು 25ಗ್ರಾಂ ತೂಕದ ಬಂಗಾರದ ಸರವನ್ನು ಅಪಹರಿಸಿ ಪರಾರಿಯಾಗಿದ್ದವರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಪವನ (19), ವಿಷ್ಣು (19) ಹಾಗೂ ಮಹೇಶ (19) ಬಂಧಿತ ಆರೋಪಿಗಳಾಗಿದ್ದಾರೆ. ಇದೇ ತಿಂಗಳ 19 ರಂದು ವೃದ್ದೆ ಲಕ್ಷ್ಮಮ್ಮ (85) ನಗರದ ಅಂಚೆ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಹಿಂಬದಿಯಿಂದ ಬಂದ ಮೂವರು ಅಪರಿಚಿತ ಯುವಕರು …

ಚಾಲಕನ ನಿಯಂತ್ರಣ ತಪ್ಪಿ ಕಡಲಿಗೆ ಬಿದ್ದ ಕಂಟೇನರ್ ಲಾರಿ, ಓರ್ವ ಸಾವು

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಲಾರಿಯೊಂದು ಸಮುದ್ರಕ್ಕೆ ಬಿದ್ದಿದೆ. ನವಮಂಗಳೂರು ಬಂದರಿನಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಂದರಿನ 14ನೇ ಬರ್ತ್ ನಲ್ಲಿ ಕಲ್ಲಿದ್ದಿಲು ಲೋಡ್ ಮಾಡುವ ಸಂದರ್ಭದಲ್ಲಿ ಕಂಟೇನರ್ ಲಾರಿ ಹಿಂದೆ ಚಲಿಸುವಾಗ ನಿಯಂಣ ತಪ್ಪಿ ಕಡಲಿಗೆ ಬಿದ್ದಿದೆ ಎಂದು ತಿಳಿದುಬಂದಿದೆ. ಈ ವೇಳೆ ಲಾರಿಯ ಡ್ರೈವರ್ ಹಾಗು ಕ್ಲೀನರ್ ಕೂಡ ನೀರಿನಲ್ಲಿ ಬಿದ್ದಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಪಣಂಬೂರು ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. The post …