1/5

ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್​ ಕೆಲ ದಿನಗಳ ಹಿಂದೆಯಷ್ಟೇ ಎಲ್ಲಾ ಮಾದರಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದರೊಂದಿಗೆ ಎಬಿಡಿ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. 37 ವರ್ಷದ ಎಬಿಡಿ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಬೆನ್ನಲ್ಲೇ ಟಿ20 ಕ್ರಿಕೆಟ್​ನ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ನಿವೃತ್ತಿ ಬಗ್ಗೆ ಕೂಡ ಚರ್ಚೆಗಳು ಶುರುವಾಗಿದ್ದವು.

2/5

ಏಕೆಂದರೆ ಗೇಲ್ ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್​ನಲ್ಲಿ ನಿವೃತ್ತಿ ನೀಡುವ ಸುಳಿವು ನೀಡಿದ್ದರು. ಹೀಗಾಗಿ 42 ವರ್ಷದ ಕ್ರಿಸ್ ಗೇಲ್ ಮುಂದಿನ ಸೀಸನ್ ಐಪಿಎಲ್ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಇದೀಗ ಎಬಿಡಿ ನಿವೃತ್ತಿ ಬೆನ್ನಲ್ಲೇ ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಸ್ ಗೇಲ್ ಉತ್ತರ ನೀಡಿದ್ದಾರೆ. ಅದು ಕೂಡ ಒಂದೇ ಒಂದು ವಾಕ್ಯದ ಮೂಲಕ ಎಂಬುದು ವಿಶೇಷ.

3/5

 ಹೌದು, ಎಬಿ ಡಿವಿಲಿಯರ್ಸ್​ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಸ್ ಗೇಲ್ ಟ್ವೀಟ್ ಮಾಡಿದ್ದಾರೆ. ನಾನು ತೊರೆಯುವುದಿಲ್ಲ ಎಂದು ಗೇಲ್ ಟ್ವೀಟ್ ಮಾಡಿ, ಸದ್ಯಕ್ಕೆ ನಿವೃತ್ತಿಯಿಲ್ಲ ಎಂದಿದ್ದಾರೆ. ಹೀಗಾಗಿ ಕ್ರಿಸ್ ಗೇಲ್ ಹೆಸರು ಮುಂದಿನ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

4/5

ಇನ್ನು ಮುಂದಿನ ಸೀಸನ್​ ಐಪಿಎಲ್​ನಲ್ಲಿ ಒಟ್ಟು 10 ತಂಡಗಳಿರಲಿದ್ದು, ಹೀಗಾಗಿ 42 ವರ್ಷದ ಕ್ರಿಸ್ ಗೇಲ್ ಯಾವುದಾದರೂ ತಂಡ ತಮ್ಮನ್ನು ಖರೀದಿಸುವ ವಿಶ್ವಾಸದಲ್ಲಿದೆ. ಹಾಗೆಯೇ ಪಂಜಾಬ್ ಕಿಂಗ್ಸ್​ ತಂಡವು ಗೇಲ್ ಅವರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತ.

5/5

22 ವರ್ಷದ ಕ್ರಿಕೆಟ್​ ಜೀವನದಲ್ಲಿ 79 ಟಿ20, 103 ಟೆಸ್ಟ್ ಮತ್ತು 301 ಏಕದಿನ ಪಂದ್ಯಗಳನ್ನಾಡಿರುವ ಗೇಲ್ ಚುಟುಕು ಕ್ರಿಕೆಟ್​ನ ಅನಭಿಷಕ್ತ ದೊರೆಯಾಗಿ ಮಿಂಚಿದ್ದರು. ಕಳೆದೊಂದು ವರ್ಷದಿಂದ ಗೇಲ್ ಫಾರ್ಮ್​ ಕಳೆದುಕೊಂಡಿದ್ದು, ಇದಾಗ್ಯೂ ಲಂಕಾ ಪ್ರೀಮಿಯರ್ ಲೀಗ್ ಹಾಗೂ ಟಿ10 ಲೀಗ್​ನಲ್ಲಿ ಗೇಲ್ ಅವರನ್ನು ಫ್ರಾಂಚೈಸಿಗಳು ಖರೀದಿಸಿರುವುದು ವಿಶೇಷ.

TV9 Kannada