ಘೋಷಣೆ ಆಯ್ತು ನಿಖಿಲ್​ ಕುಮಾರ್​ ಸಿನಿಮಾ ರಿಲೀಸ್​ ದಿನಾಂಕ; ಡಿಸೆಂಬರ್​ನಲ್ಲಿ ಬರಲಿದ್ದಾನೆ ‘ರೈಡರ್’

ನಿಖಿಲ್​ ಕುಮಾರ್​

‘ಸೀತಾರಾಮ ಕಲ್ಯಾಣ’ ತೆರೆಗೆ ಬಂದ ನಂತರದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಕೊವಿಡ್ ಕಾರಣದಿಂದ ಅವರು ಒಪ್ಪಿಕೊಂಡಿದ್ದ ‘ರೈಡರ್​’ ಸಿನಿಮಾ ಕೆಲಸಗಳು ವಿಳಂಬವಾದವು. ಈಗ ಕೊವಿಡ್​ ಮುಗಿದು ಚಿತ್ರಮಂದಿರಗಳು ಓಪನ್​ ಆಗಿವೆ. ಜನರು ಮತ್ತೆ ಥಿಯೇಟರ್​ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಸಾಲುಸಾಲು ಸಿನಿಮಾಗಳು ರಿಲೀಸ್​ ಆಗುತ್ತಿವೆ. ನಿಖಿಲ್​ ಕುಮಾರ್​ ನಟನೆಯ ‘ರೈಡರ್​’ ಕೂಡ ರಿಲೀಸ್​ ದಿನಾಂಕ ಘೋಷಣೆ ಮಾಡಿದೆ. ಕ್ರಿಸ್​ಮಸ್​ ನಿಮಿತ್ತ ಸಿನಿಮಾ ಡಿಸೆಂಬರ್​ 24ರಂದು ತೆರೆಗೆ ಬರುತ್ತಿದೆ.

ವಿಜಯ್​ ಕುಮಾರ್​ ಕೊಂಡ ಅವರು ‘ರೈಡರ್​’ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಿಖಿಲ್‌ ಕುಮಾರ್‌ ಆಪ್ತ ಸುನೀಲ್‌ ಗೌಡ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಲಹರಿ ಫಿಲ್ಮ್ಸ್​​ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನವೆಂಬರ್​ ತಿಂಗಳಲ್ಲೇ ‘ರೈಡರ್​’ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ಕೆಲಸಗಳು ಪೂರ್ಣಗೊಳ್ಳದ ಕಾರಣ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ.

ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಹಿರಿಯ ನಟ ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ನಿಹಾರಿಕ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ನಟಿ ಕಾಶ್ಮೀರಿ ಪರ್ದೇಸಿ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ‘ಡವ್ವ ಡವ್ವ..’ ಸಿನಿಮಾದ ಹಾಡು ಇತ್ತೀಚೆಗೆ ರಿಲೀಸ್ ಆಗಿ ಜನ ಮನ್ನಣೆ ಪಡೆದುಕೊಂಡಿತ್ತು.

‘ರೈಡರ್​’ ಸಿನಿಮಾ ದೊಡ್ಡ ಸ್ಪರ್ಧೆ ಎದುರಿಸಲಿದೆ. ಡಿಸೆಂಬರ್​ ತಿಂಗಳಲ್ಲಿ ದೊಡ್ಡ ಬಜೆಟ್​ನ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಜನವರಿಯಲ್ಲೂ ಹಲವು ಚಿತ್ರಗಳು ರಿಲೀಸ್​ ಆಗುತ್ತಿವೆ. ‘ಪುಷ್ಪ’, ‘ಆರ್​ಆರ್​ಆರ್​’, ‘ರಾಧೆ ಶ್ಯಾಮ್​’, ‘ಸರ್ಕಾರಿ ವಾರು ಪಾಟ’ ಚಿತ್ರಗಳು ‘ರೈಡರ್​’ ಸಿನಿಮಾದ ಆಸುಪಾಸಿನ ಡೇಟ್​ನಲ್ಲಿಯೇ ತೆರೆಗೆ ಬರುತ್ತಿವೆ. ಇದರಿಂದ ನಿಖಿಲ್​ ಕುಮಾರ್ ಸಿನಿಮಾಗೆ ಸಂಕಷ್ಟ ಎದುರಾಗಬಹುದು.

ಇದನ್ನೂ ಓದಿ: Rider Movie: ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್

ಮತ್ತೆ ಮಾಸ್​​​ ಲುಕ್​ನಲ್ಲಿ ಕಾಣಿಸಿಕೊಂಡ ನಿಖಿಲ್: ಜನ್ಮದಿನಕ್ಕೆ ರಿಲೀಸ್​ ಆಯ್ತು ರೈಡರ್​ ಟೀಸರ್

TV9 Kannada