ಕಾಲಿವುಡ್​ ಮತ್ತು ಟಾಲಿವುಡ್​ ಸಾಕಷ್ಟು ಹೆಸರು ಮಾಡಿರುವ ನಟಿ ಸಾಯಿ ಪಲ್ಲವಿ​ ಟಾಪ್​ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಸಾಯಿ ಪಲ್ಲವಿ ಅವರ ತಂಗಿ ಕೂಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಕಣ್ಣನ್ ಅಭಿನಯದ ‘ಚಿತ್ತಿರೈ ಸೆವ್ವನಂ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ತಮಿಳಿನ ಖ್ಯಾತ ನಟ ಸಮುದ್ರಕಣಿ ಅವರ ಪುತ್ರಿಯಾಗಿ ‘ಚಿತ್ತಿರೈ ಸೆವ್ವನಂ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ಪೋಸ್ಟರ್​ ನೋಡಿದ ಪ್ರೇಕ್ಷಕರು, ಪೂಜಾ ಕಣ್ಣನ್ ಅವರನ್ನು ಸಾಯಿ ಪಲ್ಲವಿ ಎಂದು ತಪ್ಪಾಗಿ ಭಾವಿಸಿದ್ದರು. ಪೂಜಾ ಕಣ್ಣನ್ ಈ ಹಿಂದೆ ನಿರ್ದೇಶಕ ಎಎಲ್ ವಿಜಯ್ ಅವರ ಬಳಿ ಸಹಾಯಕಿಯಾಗಿ ಕೆಲಸ ಮಾಡಿದ್ದು, ”ಖಾರಾ” ಅನ್ನೋ ಕಿರುಚಿತ್ರದಲ್ಲೂ ನಟಿಸಿದ್ದಾರೆ.

ಇನ್ನು ‘ಚಿತ್ತಿರೈ ಸೆವ್ವನಂ’ ಚಿತ್ರವು ಡಿಸೆಂಬರ್ 3 ರಂದು ಬಿಡುಗಡೆ ಆಗಲಿದ್ದು , ಸಾಯಿ ಪಲ್ಲವಿಗೆ ಸಿಕ್ಕ ಗೆಲುವು ಪೂಜಾ ಕಣ್ಣನ್ ಗೂ ಸಿಗುತ್ತದಾ ಎಂದು ಕಾದು ನೋಡಬೇಕಿದೆ.

News First Live Kannada