ನನಗೆ ಅಪ್ಪು ಜತೆ ಕಳೆದ ಕ್ಷಣಗಳು ‘ಪರಮಾತ್ಮ’ನೊಂದಿಗೆ ಕಳೆದಂಗೆ ಭಾಸವಾಗುತ್ತಿದೆ.. ಇದು ರಾಘವೇಂದ್ರ ರಾಜ್ ಕುಮಾರ್ ಆಡಿದ ಮಾತುಗಳು. ತನ್ನ ತಮ್ಮನನ್ನ ದೇವರ ಮಗನಂತೆ ಕಾಣುತ್ತಿದ್ದಾರೆ ಎಲ್ಲರೊಳ್ಳ್ ಅಪ್ಪು ಇದ್ದಾರೆ ಎಂದು ಭಾವಿಸಿದ್ದಾರೆ. ಇನಷ್ಟು ರಾಘಣ್ಣ ಮನಮುಟ್ಟುವ ಮಾತುಗಳು ನಿಮ್ಮಮುಂದೆ.

ಪ್ರೀತಿಯಲ್ಲು ನೋವಲ್ಲು ಪಾಲುದಾರ… ಕನಸಲ್ಲೂ ಕೈ ಹಿಡಿಯೋ ಸೂತ್ರಧಾರ..ಎಲ್ಲವನ್ನ ಸಹಿಸಿ ನಗುವ ಜಾದುಗಾರ.. ಮನಸು ಮನಸ ಹೊಲಿಯೊ ಸೂಜಿದಾರ.. ಸ್ಯಾಂಡಲ್​ವುಡ್​​ ನಿಜವಾದ ಸಾಹುಕಾರ ; ನಮ್ಮ ನಿಮ್ಮೆಲ್ಲರ ರಾಜಕುಮಾರ ಇನ್ನೆನಿದ್ದರು ನೆನಪಿನ ಲೋಕದಲ್ಲಿ ಚಿರಂತನ ಚಿತ್ತಾರ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೊಂದಿಗಿಲ್ಲ ಅನ್ನೋದು ಕಹಿ ಸತ್ಯ.. ಆದ್ರೆ ಬೇರೆ ವಿಧಿಯಿಲ್ಲ ನಾವು ಈ ಸತ್ಯವನ್ನ ಅರಗಿಸಿ ಕೊಳ್ಳಲೇ ಬೇಕು.. ಯಾಕೆಂದ್ರೆ ವಿಧಿಯಾಟದ ಮುಂದೆ ಯಾರ ಆಟವೂ ನಡೆಯೊಲ್ಲ.. ಮನುಷ್ಯನಿಗೂ ಮೀರಿದ ಒಂದು ಶಕ್ತಿಯಂತು ತನ್ನ ಇಚ್ಛೆ ಪ್ರಕಾರವೇ ಕೆಲಸ ಮಾಡ್ತಿದೆ ಅನ್ನೋದಂತು ಸಾವಿಲ್ಲದ ಸತ್ಯ..

‘‘ಅಪ್ಪು’’ ನನ್ನ ತಮ್ಮನಾಗಿದ್ದರೂ ಅವನೊಡನೆ ಕಳೆದ ಎಲ್ಲ ಕ್ಷಣಗಳು ಆತ್ಮದೊಂದಿಗೆ ಕಳೆದಂತೆ ಭಾಸವಾಗುತ್ತಿದೆ. ಆ ‘ಪರಮಾತ್ಮ’ನ ದೇಹ ಮಲಗಿದ್ದಾಗ, ‘ಆತ್ಮ’ವನ್ನ ಸರ್ಕಾರ, ಪೊಲೀಸ್ ಮತ್ತು ಚಿತ್ರರಂಗ ಸುತ್ತುವರಿದಿದ್ದರಿಂದ ದುಃಖಿಸಲು ಸಮಯ ಸಿಗಲಿಲ್ಲ ಇದು ರಾಘವೇಂದ್ರ ರಾಜ್ ಕುಮಾರ್ ಅವರ ಮಾತುಗಳು. ಈ ರೀತಿಯ ಅನೇಕ ಮನಮುಟ್ಟುವ ಹೃದಯ ತಟ್ಟುವ ಮಾತುಗಳನ್ನ ರಾಘಣ್ಣ ಆಡುತ್ತಿದ್ದಾರೆ..

ಕಂಠೀರವ ಸ್ಟುಡಿಯೋ ಅವರಾಣದಲ್ಲಿ ತನ್ನ ತಂದೆ ತಾಯಿಯ ಜೊತೆ ಬೆಚ್ಚನೆ ಮಲಗಿದ್ದಾರೆ ಅಪ್ಪು.. ಕಂಠೀರವ ಸ್ಟುಡಿಯೋಗೆ ಶೂಟಿಂಗ್​​ಗೆಂದು ಹೋದಾಗೆಲ್ಲ ತನ್ನ ಅಪ್ಪ ಅಮ್ಮನ ಸಮಾಧಿ ನೋಡಲು ತಪ್ಪದೆ ಹೋಗಿ ಬರ್ತಿದ್ರು ಅಪ್ಪು.. ಈ ಪ್ರೀತಿಯೆ ಅಪ್ಪು ಅವರನ್ನ ಕರೆಸಿಕೊಂಡು ಬಿಡ್ತಾ!? ದೇವರಿಗೆ ಗೊತ್ತು. ಅಪ್ಪು ಅಗಲಿಕೆಯ ನಂತರ ಆಗಾಗ ರಾಘಣ್ಣ ಅಪ್ಪು ಸಮಾಧಿಗೆ ಹೋಗಿ ಬರುತ್ತಿದ್ದಾರೆ. ರಾಘಣ್ಣನಂತೆ ಅಪ್ಪು ಸಮಾಧಿ ನೋಡಲು ರಾಜ್ಯಾದ ನಾನಾ ಭಾಗದಿಂದ ಅಭಿಮಾನಿ ಸಾಗರವೇ ಹರಿದು ಬರುತ್ತಿದೆ. ಅಪ್ಪು ಸಮಾಧಿ ನಂತರ ಕಂಠೀರವ ಸ್ಟುಡಿಯೋದ ಸುತ್ತಾಮುತ್ತಲಿನ ಸ್ಥಳದಲ್ಲಿ ಅಂಗಡಿ ಮುಂಗಟ್ಟು ಹೆಚ್ಚಾಗಿವೆ ವ್ಯಾಪರ ವ್ಯವಹಾರ ಜೋರಾಗಿದೆ.

ಅಪ್ಪು ಅವರನ್ನ ನಾವು ಹುತ್ತಿಲ್ಲ ಎಲ್ಲರ ಮನಸಿನಲ್ಲಿ ಬಿತ್ತಿದ್ದೇವೆ. ಮಗನಾಗಿ ಬಂದ ತಂದೆಯಾಗಿ ಹೋದ. ಅಂದು ರಾಘಣ್ಣ ಅಳೋದನ್ನ ನೋಡಿದಾಗ ಎಂಥವರಿಗೆ ಕಣ್ಣೀರು ಬಂದೇ ಬರುತ್ತೆ. ಆದ್ರೆ ರಾಘಣ್ಣ ಮಾತು ಜೀವನ ಕಹಿಸತ್ಯವನ್ನ ಅರೆಯುವ ಜೀವನ ಅರ್ಥವನ್ನ ತಿಳಿಸುವ ಮಾತುಗಳು.

ರಾಘವೇಂದ್ರ ರಾಜ್ ಕುಮಾರ್ 15 ವರ್ಷ ನಂತರ ‘‘ಅಮ್ಮನ ಮನೆ’’ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಿ ಕ್ಯಾಮೆರಾಗೆ ಕೈ ಮುಗಿದ್ರು. ಈ ಅಮ್ಮನ ಮನೆ ಸಿನಿಮಾದ ನಿರ್ದೇಶಕ ನಿಖಿಲ್ ಮಂಜು ರಾಘಣ್ಣ ಅವರನ್ನ ಅವರ ಮನೆಯಲ್ಲಿ ಮಾತನಾಡಿಸಿದ್ದಾರೆ. ಆಗ ರಾಘಣ್ಣ ಜೀವನ ಅಂದ್ರೇನು ಅಪ್ಪು ಅವರ ಧೀಡಿರ್ ಸಾವು ಎಷ್ಟರ ಮಟ್ಟಿಗೆ ಪಾಠವನ್ನ ಕಲಿಸಿಕೊಟ್ಟಿದೆ ಅನ್ನೋದನ್ನ ಎಳೆ ಎಳೆಯಾಗಿ ರಾಘಣ್ಣನವರಿಂದ ಹೇಳಿಸಿದ್ದಾರೆ.. ಅಪ್ಪು ಅವರ ಬದುಕು ನನಗೆ ನನ್ನ ಅಣ್ಣನಿಗೆ ಸ್ಫೂರ್ತಿಯಾಗಿದೆ.

ಪುನೀತ್ ರಾಜ್ ಕುಮಾರ್ ಅವರನ್ನ ಯಾಕೆ ಜನ ಇಷ್ಟೆಲ್ಲ ಆರಾಧಿಸುತ್ತಿದ್ದಾರೆ. ಇನ್ನೂ ಕೂಡ ಅವರ ನೆನಪನ್ನೆ ಸ್ಮರಿಸುತ್ತಿದ್ದಾರೆ ಅನ್ನೋದಕ್ಕೆ ರಾಘಣ್ಣ ಒಂದು ಅದ್ಭುತ ಮಾತನ್ನ ಹೇಳಿದ್ದಾರೆ.. ಆ ಮಾತನ್ನ ಕೇಳಿ ನಿಮಗೆ ಮೈ ಜುಮ್ ಅನ್ನಿಸುತ್ತೆ. ಉಪಕಾರವನ್ನ ಹೇಗೆ ಮಾಡಬೇಕು ಅನ್ನೊದನ್ನು ಅಪ್ಪು ಅವರನ್ನ ನೋಡಿ ನಾವು ನೀವು ಕಲಿಯಬೇಕು ಎಂದಿದ್ದಾರೆ.

ಈ ಮಾತುಗಳಿಗಿಂತ ಈ ಮೂರು ದಿನದ ಬದುಕಿಗೆ ಇನ್ನೆಂಥ ಮಾತುಗಳ ಬೇಕು ಹೇಳಿ. ರಾಜ್ಯಾದ್ಯಂತ ಸೈಕ್ಲೋನ್ ಮಳೆ ಬರ್ತಿದೆ ನಿಜ. ಆದ್ರೆ ರಾಘಣ್ಣ ಪ್ರತಿಮಾತಿಗು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಯ ಮಳೆಯೇ ಬರ್ತಿದೆ. ಒಂದಂತು ಸತ್ಯ ಅಪ್ಪು ದಿನೆ ದಿನೆ ಪ್ರತಿಯೊಬ್ಬರ ಮನಸಿನಲ್ಲಿ ಹುಟ್ಟುತ್ತಿದ್ದಾರೆ ಬೆಳೆಯುತ್ತಿದ್ದಾರೆ. ಎನ್ ಅಂತಿರಾ?

News First Live Kannada