ಪ್ರೀತಿಯ ತಮ್ಮ ಅಪ್ಪು ಸಾವಿನಿಂದ ನೊಂದಿರುವ ಡಾ.ಶಿವಣ್ಣ ನೋವಿನಿಂದ ಹೊರಬರಲು ಮತ್ತು ನಿರ್ಮಾಪಕರಿಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ನಿಧಾನವಾಗಿ ಶೂಟಿಂಗ್​ಳನ್ನು ಪ್ರಾರಂಭ ಮಾಡಿದ್ದಾರೆ.

ಶಿವಣ್ಣನ 125 ನೇ ಚಿತ್ರಕ್ಕೆ ನಿರ್ದೇಶಕ ಏ ಹರ್ಷ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಇತ್ತೀಚೆಗೆ ಸರಳವಾಗಿ ”ವೇದ” ಸಿನಿಮಾದ ಮುಹೂರ್ತ ಕೂಡ ನೆರವೇರಿತು. ಎ ಹರ್ಷ ಮತ್ತ ಶಿವಣ್ಣನ ಕಾಂಬೀನೇಷನ್​ನಲ್ಲಿ ಮೂಡಿಬಂದ ”ಭಜರಂಗಿ”, ”ವಜ್ರಕಾಯ”, ”ಭಜರಂಗಿ-2” ಸಿನಿಮಾಗಳು ಸೂಪರ್​ ಹಿಟ್​ ಆಗಿದ್ದವು. ಈಗ ಮತ್ತೆ ಈ ಸ್ಟಾರ್​ ಜೋಡಿ ಒಂದಾಗಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.
”ವೇದ” ಸಿನಿಮಾದ ಮತ್ತೊಂದು ವಿಶೇಷ ಏನಂದ್ರೆ, ಅರುಣ್​ ಸಾಗರ್​ ಪುತ್ರಿ ಅದಿತಿ ಸಾಗರ್ ವೇದ ಸಿನಿಮಾದ ಮೂಲಕ ನಟನೆಗೂ ಪಾದಾರ್ಪಣೆ ಮಾಡಲಿದ್ದಾರೆ.

ಅಧಿತಿ ಸಾಗರ್​ ”ರ್ಯಾಂಬೋ-2′ ನ ದಮ್ ಮಾರೋ ದಮ್ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದ್ದು, ಇತ್ತೀಚೆಗೆ ಬಂದ ”ಫ್ರೆಂಚ್​​ ಬಿರಿಯಾನಿ” ಸಿನಿಮಾದಲ್ಲಿ ”ಸಾವ್​ಧಾನ ಬೆಂಗಳೂರು” ಎನ್ನೋ ಹಾಡಿನ ಮೂಲಕ ಸಂಗೀತ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿದ್ದರು. ಸದ್ಯ ಅದಿತಿ ಸಾಗರ್​ ”ವೇದ” ಮಾತ್ರ ಅಲ್ಲದೆ ಶಿವಣ್ಣನ ”ಬೈರಾಗಿ” ಹಾಗೂ ”ನೀ ಸಿಗೋವರೆಗೂ” ಸಿನಿಮಾಗಳಲ್ಲಿಯೂ ಕೂಡ ನಟಿಸಲಿದ್ದಾರೆ.

News First Live Kannada