ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್​ ಪಂದ್ಯದಲ್ಲಿ, ಕರ್ನಾಟಕ ತಂಡವನ್ನು ಸೋಲಿಸಿ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ತಮಿಳುನಾಡು ಸತತ 2ನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಸೈಯದ್​ ಮುಷ್ತಾಕ್​ ಅಲಿ ಟಿ20 ಟೂರ್ನಿಯಲ್ಲಿ ತಮಿಳುನಾಡು ರೋಚಕ ಗೆಲುವು ಸಾಧಿಸಿತು. ರೋಚಕವಾಗಿದ್ದ ಫೈನಲ್​ ಫೈಟ್​​​ನಲ್ಲಿ ಗಮನ ಸೆಳೆದಿದ್ದೇ, ತಮಿಳುನಾಡು ಇನ್ನಿಂಗ್ಸ್​​​​ನ ಕೊನೆಯ ಓವರ್​. ಗೆಲ್ಲಲು 6 ಎಸೆತಗಳಲ್ಲಿ 16 ರನ್​ ಬೇಕಿದ್ದಾಗ ಶಾರೂಖ್​​, ತಮಿಳುನಾಡಿನ ಕಿಂಗ್​​​ ಖಾನ್​ ಆದ್ರು.

ತಮಿಳುನಾಡಿಗೆ ಹೀರೋ ಆದ ಶಾರೂಖ್​​ ಖಾನ್​​.!

ಓವರ್ 19.1 -4 ರನ್​.. ಪ್ರತೀಕ್​​ ಜೈನ್​ ಎಸೆದ ಫುಲ್​ ಆ್ಯಂಡ್​​ ವೈಡ್​​​ ಡಿಲಿವರಿಯನ್ನ, ಸಾಯಿ ಕಿಶೋರ್​​ ಥರ್ಡ್​ ಮ್ಯಾನ್​ ಮೂಲಕ ಬೌಂಡರಿ ಸಿಡಿಸಿದ್ರು.

ಓವರ್ 19.2 -1 ರನ್.. ಆಫ್​​ ಸ್ಟಂಪ್​ ಆಚೆ ಎಸೆದ ಚೆಂಡನ್ನ ಸಾಯಿ ಕಿಶೋರ್​,​ ಒಂದು ರನ್​ ಗಳಿಸುವುದರಲ್ಲಿ ಯಶಸ್ವಿಯಾದರು.

ಓವರ್ 19.3 -ವೈಡ್.. ಪ್ರತೀಕ್​ ಜೈನ್​ ಎಸೆದ 3ನೇ ಬಾಲ್​, ಲೆಗ್​ ಸೈಡ್​ ವೈಡ್​​.

ಓವರ್ 19.3 -1 ರನ್​​​​​​.. ಫುಲ್ ಲೆಂಥ್​ ಬಾಲ್​ಅನ್ನ ​ಶಾರೂಕ್​ ಖಾನ್​, ಲಾಂಗ್ ಆಫ್​ನತ್ತ ಸಿಡಿಸಿ 1 ರನ್​ ಗಳಿಸಿದ್ರು.

ಓವರ್ 19.4 -1 ರನ್​​​​​.. ಪ್ರತೀಕ್​​ರ ಫುಲ್​ ಆ್ಯಂಡ್​​ ವೈಡ್​​​ ಡಿಲಿವರಿಯನ್ನ, ಸಾಯಿ ಕಿಶೋರ್​​​ ಡೀಪ್​ ಬ್ಯಾಕ್​ವರ್ಡ್​​​​ ಪಾಯಿಂಟ್​​ನತ್ತ ಬಾರಿಸಿ 1 ರನ್​ ಕಲೆ ಹಾಕಿದ್ರು.

ಓವರ್ 19.5 -ವೈಡ್.. ಪ್ರತೀಕ್​ ಜೈನ್​ ಎಸೆದ 6ನೇ ಎಸೆತ ಮತ್ತೆ ಲೆಗ್​ ಸೈಡ್​ ವೈಡ್.

ಓವರ್ 19.5 -2 ರನ್​.. ಯಾರ್ಕರ್​​ ಎಸೆತವನ್ನ ಲಾಂಗ್​​ಆಫ್​ನತ್ತ ಸಿಡಿಸಿದ ಶಾರೂಖ್​​ ಖಾನ್​, 2 ರನ್​ ಕಬಳಿಸುವಲ್ಲಿ ಯಶಸ್ವಿಯಾದ್ರು.

ಓವರ್ 19.6 -6 ರನ್​.. ತಂಡದ ಗೆಲುವಿಗೆ 5 ರನ್​ ಬೇಕಿದ್ದಾಗ ಶಾರೂಖ್​, ಡೀಪ್​​ ಸ್ವ್ಕೇರ್​​​ನತ್ತ ಸಿಕ್ಸರ್​​ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

News First Live Kannada