ಬೆಂಗಳೂರು: ಸತತವಾಗಿ ಸುರಿದ ಮಳೆಯಿಂದ ಬೆಂಗಳೂರಿನ ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್​ ಜಲಾವೃತವಾಗಿದೆ. ನಿನ್ನೆ ಸುಮಾರು 3 ಅಡಿಗೂ ಹೆಚ್ಚು ಮಳೆ ನೀರು ನಿಂತ್ತಿತ್ತು. ಇಡೀ ದಿನ ಕಳೆದ್ರೂ ಕೇವಲ 1 ಅಡಿ ನೀರು ಮಾತ್ರ ಇಳಿಕೆಯಾಗಿದೆ.

ನಿನ್ನೆ ಅಷ್ಟೆ ಅಪಾರ್ಟ್ಮೆಂಟ್​ಗೆ ಭೇಟಿ ನೀಡಿದ್ದ ಬಿಬಿಎಂಪಿ ಗೌರವ್​ ಗುಪ್ತ ಸಂಜೆಯೊಳಗೆ ನೀರು ಖಾಲಿ ಆಗುತ್ತೆ ಅಂತಾ ಹೇಳಿದ್ರು. ಆದ್ರೆ ಇಂದು ಕೂಡ ಅಪಾರ್ಟ್ ಮೆಂಟ್​ನಲ್ಲಿ ಮಳೆ ನೀರು ಇವೆ . ಹೀಗಾಗಿ ಮಳೆ ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಗಿದೆ.

ಜಲಾವೃತಗೊಂಡಿರೋ ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಶಾಸಕ ವಿಶ್ವನಾಥ್, ನೀರಿನ ಮಟ್ಟ ಕಡಿಮೆಯಾಗುತ್ತೆ. ಕೂಡಲೇ ಜನರನ್ನ ಶಿಫ್ಟ್ ಮಾಡಲಾಗ್ತಿದೆ. ಈ ಬಗ್ಗೆ ನಿನ್ನೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ವಿ. ಅಮಾನಿ ಕೆರೆ ಒತ್ತುವರಿಯಾಗಿಲ್ಲ. ರಾಜಕಾಲವೆ ದೊಡ್ಡದಿಲ್ಲದೇ ನೀರು ನುಗ್ಗಿದೆ. ರಾಜಕಾಲುವೆಯ ಕಾಮಗಾರಿ ಪ್ರಾರಂಭ ಮಾಡ್ತೇವೆ.. ಈಗ ರೈತರ ಜಾಗವನ್ನ ತೆಗೆದುಕೊಂಡು ಕಾಮಗಾರಿ ಮಾಡ್ತೇವೆ. ಡಿಸೆಂಬರ್ ನಂತರ ಕಾಮಗಾರಿ ಮಾಡ್ತೇವೆ. ಮುಖ್ಯಮಂತ್ರಿಗಳು ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಸಮಸ್ಯೆ ಅವಲೋಕಿಸುತ್ತಾರೆ.

ಈ ವರ್ಷದ ಒಳಗೆ ಕೆರೆಯ ನೀರು ಬರದಂತೆ ಕ್ರಮಕೈಗೊಳ್ತೇವೆ. ಕೆರೆಯ ಒತ್ತುವರಿಯಾಗಿರುವುದರ ಬಗ್ಗೆ ಪರಿಶೀಲನೆ ಮಾಡ್ತೇವೆ. ತೆರವು ಮಾಡುವಂತಹ ಕಾರ್ಯಮಾಡ್ತೇವೆ. ರಾಜಕಾಲುವೆಯ ಮೇಲೆ ರಸ್ತೆ ಮಾಡಿ ರಸ್ತೆ ಕ್ಲೋಸ್ ಮಾಡಿದ್ದಾರೆ. ಈಗ ಕೆರೆ ಅಭಿವೃದ್ಧಿ ಮಾಡ್ತಿರುವುದರಿಂದ ಸಮಸ್ಯೆ ಎದುರಾಗಿದೆ. ರಸ್ತೆಯ ನಡುವೆ ಡ್ರೈನೇಜ್ ಕೂಡ ಮಾಡ್ತೇವೆ. ಮುಂದಿನ ವರ್ಷ ಈ ರೀತಿ ಸಮಸ್ಯೆ ಉಲ್ಬಣಿಸದಂತೆ ಕ್ರಮಕೈಗೊಳ್ಳುವುದಾಗಿ ಆಶ್ವಾಸನೆ ಕೊಟ್ಟರು.

ನೂರಾರು ಸಿಬ್ಬಂದಿಯಿಂದ ಸ್ವಚ್ಚತಾ ಕಾರ್ಯ
ಇನ್ನೂ ಜಕ್ಕೂರು ಕೆರೆ ಕೋಡಿ ಒಡೆದು ಜವಾಹರ್​ ಲಾಲ್​ ನೆಹರು ಉನ್ನತ ಸಂಶೋಧನ ಕೇಂದ್ರಕ್ಕೆ ಕೆರೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿತ್ತು. ಸುಮಾರು 24 ಎಕರೆಯಲ್ಲಿರುವ JNCASR ಕ್ಯಾಂಪಸ್ ಇದಾಗಿದ್ದು, ಆಡ್ಮಿನ್ ಬ್ಲಾಕ್​, ಲ್ಯಾಬೋರೆಟರಿ ಸೇರಿದಂತೆ ಎಲ್ಲಾ ಕಡೆ ನೀರು ನುಗ್ಗಿ ಕೆರೆಯಂತಾಗಿತ್ತು. ಸದ್ಯಕ್ಕೆ ಮಳೆ ನೀರು ಪ್ರಮಾಣ ಕೊಂಚ ಕಡಿಮೆಯಾಗಿರುವ ಹಿನ್ನಲೆ ನೂರಾರು ಸಿಬ್ಬಂದಿಯಿಂದ ಸ್ವಚ್ಚತಾ ಕಾರ್ಯ ಮಾಡಲಾಗ್ತಿದೆ.

News First Live Kannada